ಅಹಾಬನು ಎಲೀಯನನ್ನು ನೋಡಿದಾಗ ಅವನಿಗೆ--ಇಸ್ರಾಯೇಲ್ಯರನ್ನು ಕಳವಳ ಗೊಳಿಸುವವನು ನೀನಲ್ಲವೋ ಅಂದನು.
TSK
TSK · ಙ್ಞಾನೋಕ್ತಿಗಳು 15:10
مراجع Treasury of Scripture Knowledge في Kannada KJV.
ಆಗ ಇಸ್ರಾಯೇಲಿನ ಅರಸನು ಯೆಹೋಷಾಫಾಟ ನಿಗೆ -- ನಾವು ಕರ್ತನನ್ನು ವಿಚಾರಿಸುವ ಹಾಗೆ ಇಮ್ಲನ ಮಗನಾದ ವಿಾಕಾಯೆಹುನೆಂಬ ಇನ್ನೊಬ್ಬನಿದ್ದಾನೆ; ಆದರೆ ನಾನು ಅವನನ್ನು ಹಗೆಮಾಡುತ್ತೇನೆ; ಯಾಕಂದರೆ ಅವನು ನನ್ನನ್ನು ಕುರಿತು ಒಳ್ಳೇದನ್ನಲ್ಲ, ಕೆಟ್ಟದ್ದನ್ನು ಪ್ರವಾದಿಸುತ್ತಾನೆ ಅಂದನು. ಅದಕ್ಕೆ ಯೆಹೋಷಾಫಾಟನು--ಅರಸನು ಹಾಗೆ ಹೇಳದಿರಲಿ ಅಂದನು.
ನೀನು ಶಿಕ್ಷಣವನ್ನು ಹಗೆಮಾಡಿ ನನ್ನ ವಾಕ್ಯಗಳನ್ನು ನಿನ್ನ ಹಿಂದೆ ಹಾಕುತ್ತೀಯಲ್ಲಾ.
ಶಿಕ್ಷಣವನ್ನು ನಾನು ಎಷ್ಟೋ ಹಗೆಮಾಡಿದೆನು; ನನ್ನ ಹೃದಯವು ಗದರಿಕೆಯನ್ನು ತಿರಸ್ಕಾರ ಮಾಡಿತು.
ಶಿಕ್ಷಣವನ್ನು ಪ್ರೀತಿಸುವವನು ತಿಳುವಳಿಕೆಯನ್ನು ಪ್ರೀತಿಸುವವನಾಗಿದ್ದಾನೆ; ಗದರಿಕೆ ಯನ್ನು ಹಗೆಮಾಡುವವನು ಪಶುಪ್ರಾಯನು.
ನೀನು--ಜನರು ನನ್ನನ್ನು ಹೊಡೆದರೂ ನಾನು ಅಸ್ವಸ್ಥನಾಗಲಿಲ್ಲ; ಅವರು ನನ್ನನ್ನು ಹೊಡೆದರೂ ನನಗೆ ನೋವಾಗಲಿಲ್ಲ; ಯಾವಾಗ ಎಚ್ಚತ್ತೇನು? ಪುನಃ ನಾನು ಅದನ್ನು ತಿರುಗಿ ಹುಡುಕೇನು ಎಂದು ಹೇಳುತ್ತೀ.
ಆತನು ನಿನ್ನನ್ನು ದಾರಿಯಲ್ಲಿ ನಡೆಸುತ್ತಿರುವಾಗ ನೀನು ನಿನ್ನ ದೇವರಾದ ಕರ್ತನನ್ನು ಬಿಟ್ಟಿದ್ದರಿಂದಲೇ ಇದನ್ನು ನಿನಗೆ ನೀನೇ ಮಾಡಿಕೊಂಡಿ ಅಲ್ಲವೋ?
ಆದಾಗ್ಯೂ ನೀನು ಒಂದು ವೇಳೆ ದುಷ್ಟನನ್ನು ಅವನ ದುಮಾರ್ಗಗಳಿಂದ ತಿರುಗಲು ಎಚ್ಚರಿಸಿದರೂ ಅವನು ತನ್ನ ದುಷ್ಟಮಾರ್ಗದಿಂದ ತಿರುಗದಿದ್ದರೆ ಅವನ ಅಕ್ರಮಗಳಲ್ಲಿಯೇ ಸಾಯುವನು; ಆದರೆ ನೀನು ನಿನ್ನ ಪ್ರಾಣವನ್ನು ತಪ್ಪಿಸಿಕೊಳ್ಳುವಿ.
ಲೋಕವು ನಿಮ್ಮನ್ನು ಹಗೆಮಾಡಲಾರದು; ಆದರೆ ಅದರ ಕ್ರಿಯೆಗಳು ಕೆಟ್ಟವುಗಳಾಗಿವೆ ಎಂದು ಅದರ ವಿಷಯ ದಲ್ಲಿ ನಾನು ಸಾಕ್ಷಿ ಹೇಳುವದರಿಂದ ಅದು ನನ್ನನ್ನು ಹಗೆಮಾಡುತ್ತದೆ.