TSK

TSK · ಙ್ಞಾನೋಕ್ತಿಗಳು 17:21

مراجع Treasury of Scripture Knowledge في Kannada KJV.

العودة إلى المقطع

ಏಸಾವನು ನಾಲ್ವತ್ತು ವರುಷದವನಾಗಿದ್ದಾಗ ಹಿತ್ತಿಯನಾದ ಬೇರಿಯನ ಮಗಳಾದ ಯೆಹೂದೀತ ಳನ್ನೂ ಹಿತ್ತಿಯನಾದ ಏಲೋನನ ಮಗಳಾದ ಬಾಸೆಮತಳನ್ನೂ ಹೆಂಡತಿಯರನ್ನಾಗಿ ತಕ್ಕೊಂಡನು.

ಆದರೆ ಅವನ ಮಕ್ಕಳು ಅವನ ಮಾರ್ಗದಲ್ಲಿ ನಡೆಯದೆ ಲೋಭಕ್ಕಾಗಿ ಮಾರ್ಗತಪ್ಪಿ ಲಂಚವನ್ನು ತಕ್ಕೊಂಡು ನ್ಯಾಯವನ್ನು ತಪ್ಪಿಸಿದರು.

ಜ್ಞಾನಿಯಾದ ಮಗನು ತಂದೆಗೆ ಸಂತೋಷವನ್ನುಂಟು ಮಾಡುತ್ತಾನೆ; ಆಜ್ಞಾನಿ ಯಾದ ಮಗನಾದರೋ ತನ್ನ ತಾಯಿಗೆ ಭಾರವಾಗಿ ದ್ದಾನೆ.

ಬುದ್ಧಿಹೀನ ನಾದ ಮಗನು ತನ್ನ ತಂದೆಗೆ ದುಃಖವೂ ತನ್ನನ್ನು ಹೆತ್ತವಳಿಗೆ ಕಹಿಯೂ ಆಗಿದ್ದಾನೆ.

ನನ್ನ ಮಗನೇ, ನಿನ್ನ ಹೃದಯವು ಜ್ಞಾನ ವುಳ್ಳದ್ದಾಗಿದ್ದರೆ ನನ್ನ ಹೃದಯವು ಹೌದು, ನನ್ನದೇ ಹರ್ಷಿಸುವದು.

ನಾನೇ ಕೊಟ್ಟು ತೀರಿಸುತ್ತೇನೆಂದು ಪೌಲನೆಂಬ ನಾನು ಸ್ವಂತ ಕೈಯಿಂದ ಬರೆದಿದ್ದೇನೆ; ನಿನ್ನ ವಿಷಯದಲ್ಲಿ ನೀನೇ ನನ್ನ ಸಾಲ ದಲ್ಲಿದ್ದಿ ಎಂದು ನಾನು ಬೇರೆ ಹೇಳಬೇಕೇ?