TSK

TSK · ಙ್ಞಾನೋಕ್ತಿಗಳು 22:5

مراجع Treasury of Scripture Knowledge في Kannada KJV.

العودة إلى المقطع

ನಿಮ್ಮ ದೇವರಾದ ಕರ್ತನು ಇನ್ನು ಮೇಲೆ ಈ ಜನಾಂಗಗಳನ್ನು ನಿಮ್ಮ ಮುಂದೆ ಹೊರಡಿಸಿ ಬಿಡುವದಿಲ್ಲ. ನಿಮ್ಮ ದೇವರಾದ ಕರ್ತನು ನಿಮಗೆ ಕೊಟ್ಟ ಈ ಒಳ್ಳೇ ದೇಶದೊಳಗಿಂದ ನೀವು ನಾಶವಾಗುವ ವರೆಗೂ ಅವರು ನಿಮಗೆ ಉರುಲಾಗಿಯೂ ಬೋನಾ ಗಿಯೂ ನಿಮ್ಮ ಪಕ್ಕೆಯಲ್ಲಿ ಶೂಲವಾಗಿಯೂ ನಿಮ್ಮ ಕಣ್ಣುಗಳಿಗೆ ಮುಳ್ಳುಗಳಾಗಿಯೂ ಇರುವರೆಂದು ನಿಶ್ಚಯ ವಾಗಿ ತಿಳಿದುಕೊಳ್ಳುವಿರಿ.

ದುಷ್ಟರ ಮೇಲೆ ಉರ್ಲುಗಳನ್ನೂ ಬೆಂಕಿಯನ್ನೂ ಗಂಧಕವನ್ನೂ ಉರಿಗಾಳಿಯನ್ನೂ ಆತನು ಸುರಿಸುವನು. ಇದು ಅವರ ಪಾನದ ಬಟ್ಟ ಲಾಗಿರುವದು;

ಮಹೋನ್ನತನ ಮರೆಯಾದ ಸ್ಥಳದಲ್ಲಿ ವಾಸಿಸುವವನು ಸರ್ವಶಕ್ತನ ನೆರಳಿನಲ್ಲಿ ತಂಗುವನು.

ತನ್ನ ಬಾಯನ್ನು ಕಾಪಾಡುವವನು ಜೀವ ವನ್ನು ಕಾಯುತ್ತಾನೆ; ತನ್ನ ತುಟಿಗಳನ್ನು ಅಗಲವಾಗಿ ತೆರೆಯುವವನಿಗೆ ನಾಶನವಾಗುವದು.

ಸೋಮಾರಿಯ ಮಾರ್ಗವು ಮುಳ್ಳಿನ ಬೇಲಿಯಂತೆ ಇದೆ; ನೀತಿವಂತನ ಮಾರ್ಗವು ಸರಾಗವಾಗಿದೆ.

ಆಜ್ಞೆಯನ್ನು ಪಾಲಿಸುವವನು ತನ್ನ ಆತ್ಮವನ್ನು ಪಾಲಿಸುತ್ತಾನೆ; ತನ್ನ ಮಾರ್ಗಗಳನ್ನು ಅಸಡ್ಡೆಮಾಡು ವವನು ಸಾಯುವನು.

ಪ್ರಿಯರೇ, ನೀವಾ ದರೋ ನಿಮಗಿರುವ ಅತಿಪರಿಶುದ್ಧವಾದ ನಂಬಿಕೆಯ ಮೇಲೆ ನಿಮ್ಮನ್ನು ನೀವೇ ಕಟ್ಟಿಕೊಂಡು ಪರಿಶುದ್ಧಾತ್ಮನಲ್ಲಿ ಪ್ರಾರ್ಥಿಸಿರಿ.