TSK

TSK · 1 ಪೂರ್ವಕಾಲವೃತ್ತಾ 6:8

Treasury of Scripture Knowledge references in ಕನ್ನಡ IRV.

Back to passage

ಇದಲ್ಲದೆ ಆತನು ಯಾಜಕನಾದ ಚಾದೋಕನಿಗೆ, “ನೀನು ದರ್ಶಿಯಲ್ಲವೇ? ನೀನು ನಿನ್ನ ಮಗನಾದ ಅಹೀಮಾಚನು ಮತ್ತು ಎಬ್ಯಾತಾರನ ಮಗನಾದ ಯೋನಾತಾನರು ಎಂಬ ಈ ಇಬ್ಬರು ಹುಡುಗರನ್ನು ಕರೆದುಕೊಂಡು ಸಮಾಧಾನದಿಂದ ಪಟ್ಟಣಕ್ಕೆ ಹಿಂದಿರುಗು.

¶ ತರುವಾಯ ಹೂಷೈಯು ಯಾಜಕನಾದ ಚಾದೋಕ್ ಎಬ್ಯಾತಾರರಿಗೆ, “ಅಹೀತೋಫೆಲನು ಅಬ್ಷಾಲೋಮನಿಗೂ ಮತ್ತು ಇಸ್ರಾಯೇಲರ ಹಿರಿಯರಿಗೂ ಇಂಥಿಂಥ ಆಲೋಚನೆಯನ್ನು ಹೇಳಿದನು, ನಾನು ಹೀಗೆ ಹೇಳಿದ್ದೇನೆ.

ಅಬ್ಷಾಲೋಮನ ಸೇವಕರು ಆ ಸ್ತ್ರೀಯ ಮನೆಗೆ ಹೋಗಿ, “ಅಹೀಮಾಚ ಮತ್ತು ಯೋನಾತಾನರು ಎಲ್ಲಿದ್ದಾರೆ?” ಎಂದು ಆಕೆಯನ್ನು ಕೇಳಿದ್ದಕ್ಕೆ ಆಕೆಯು, “ಅವರು ಹಳ್ಳ ದಾಟಿ ಹೋಗಿಬಿಟ್ಟರು” ಎಂದು ಉತ್ತರ ಕೊಟ್ಟಳು. ಅವರು ಅಹೀಮಾಚ ಮತ್ತು ಯೋನಾತಾನರನ್ನು ಹುಡುಕುವುದಕ್ಕೆ ಹೋಗಿ, ಕಾಣದೆ ಯೆರೂಸಲೇಮಿಗೆ ಹಿಂತಿರುಗಿದರು.

ಚಾದೋಕನ ಮಗನಾದ ಅಹೀಮಾಚನು ಪುನಃ ಯೋವಾಬನಿಗೆ, “ಆಗಿದ್ದಾಗಲಿ, ದಯವಿಟ್ಟು ಆ ಕೂಷ್ಯನ ಹಿಂದೆ ಹೋಗುವುದಕ್ಕೆ ನನಗೆ ಅಪ್ಪಣೆ ಕೊಡು” ಎಂದು ಬೇಡಿಕೊಂಡನು. ಅದಕ್ಕೆ ಅವನು, “ಮಗನೇ ಯಾಕೆ ಹೋಗಬೇಕೆನ್ನುತ್ತೀ? ಅದಕ್ಕಾಗಿ ನಿನಗೆ ಬಹುಮಾನ ಸಿಕ್ಕುವುದಿಲ್ಲವಲ್ಲಾ” ಎಂದನು.

ಶೆವನು ಕಾರ್ಯದರ್ಶಿ, ಚಾದೋಕ್ ಮತ್ತು ಎಬ್ಯಾತಾರರು ಯಾಜಕರು.

ಅಲ್ಲಿ ಯಾಜಕನಾದ ಚಾದೋಕನೂ ಮತ್ತು ಪ್ರವಾದಿಯಾದ ನಾತಾನನೂ ಅವನನ್ನು ಇಸ್ರಾಯೇಲರ ಅರಸನನ್ನಾಗಿ ಅಭಿಷೇಕಿಸಲಿ. ಅನಂತರ ಕೊಂಬನ್ನೂದಿರಿ. ಎಲ್ಲರೂ, ‘ಅರಸನಾದ ಸೊಲೊಮೋನನು ಚಿರಂಜೀವಿಯಾಗಿರಲಿ’ ಎಂದು ಜಯಘೋಷ ಮಾಡಲಿ.

ಅರಸನು ಯೋವಾಬನಿಗೆ ಬದಲಾಗಿ ಯೆಹೋಯಾದಾವನ ಮಗನಾದ ಬೆನಾಯನನ್ನು ಸೈನ್ಯಾಧಿಪತಿಯನ್ನಾಗಿಯೂ ಮತ್ತು ಎಬ್ಯಾತಾರನಿಗೆ ಬದಲಾಗಿ ಚಾದೋಕನನ್ನು ಯಾಜಕನನ್ನಾಗಿಯೂ ನೇಮಿಸಿದನು.