ವಿಮೋಚನಕಾಂಡ 15:22
TSK
¶ ಆನಂತರ ಮೋಶೆಯು ಇಸ್ರಾಯೇಲರನ್ನು ಕೆಂಪುಸಮುದ್ರದ ಮೂಲಕವಾಗಿ ನಡೆಸಿದನು. ಅವರು ಶೂರ್ ಮರುಭೂಮಿಯಲ್ಲಿ ಮೂರು ದಿನಗಳು ನೀರಿಲ್ಲದೆ ಪ್ರಯಾಣ ಮಾಡಿದರು.
TSK
Treasury of Scripture Knowledge references in ಕನ್ನಡ IRV.
¶ ಆನಂತರ ಮೋಶೆಯು ಇಸ್ರಾಯೇಲರನ್ನು ಕೆಂಪುಸಮುದ್ರದ ಮೂಲಕವಾಗಿ ನಡೆಸಿದನು. ಅವರು ಶೂರ್ ಮರುಭೂಮಿಯಲ್ಲಿ ಮೂರು ದಿನಗಳು ನೀರಿಲ್ಲದೆ ಪ್ರಯಾಣ ಮಾಡಿದರು.
¶ ಆಗ ಇಸ್ರಾಯೇಲ್, ಯೆಹೂದ್ಯ, ಎದೋಮ್ ರಾಜ್ಯಗಳ ಅರಸರು ಹೊರಟು ಸುತ್ತು ಬಳಸು ದಾರಿಯಿಂದ ಏಳು ದಿನಗಳವರೆಗೆ ಪ್ರಯಾಣ ಮಾಡಿದರು. ಮಾರ್ಗದಲ್ಲಿ ಅವರ ಸೈನಿಕರಿಗೂ, ಅವರು ತಂದ ಪಶುಗಳಿಗೂ ನೀರು ಸಿಕ್ಕದೆ ಹೋಯಿತು.
ಕಮ್ಮಾರನು ತನ್ನ ಸಲಕರಣೆಗಳನ್ನು ತೆಗೆದುಕೊಂಡು ಕೆಂಡದಲ್ಲಿ ಕೆಲಸಮಾಡುತ್ತಾ, ಚಮಟಿಕೆಗಳಿಂದ ಬಡಿದು ತೋಳಿನ ಬಲದಿಂದ ವಿಗ್ರಹವನ್ನು ರೂಪಿಸುವನು. ಅವನು ಹಸಿದು ಬಳಲುವನು, ನೀರಿಲ್ಲದೆ ದಣಿಯುವನು.