TSK

TSK · ಅರಣ್ಯಕಾಂಡ 21:6

Treasury of Scripture Knowledge references in ಕನ್ನಡ IRV.

Back to passage

ಆತನು ಐಗುಪ್ತ ದೇಶದಲ್ಲಿ ದಾಸರಾಗಿದ್ದ ನಿಮ್ಮನ್ನು ಬಿಡುಗಡೆಮಾಡಿ, ವಿಷಸರ್ಪಗಳೂ ಮತ್ತು ಚೇಳುಗಳೂ ಇದ್ದ ಆ ಘೋರವಾದ ಮಹಾ ಅರಣ್ಯವನ್ನೂ, ನೀರು ಬತ್ತಿಹೋದ ಭೂಮಿಗಳನ್ನೂ ದಾಟಿಸಿದ್ದನ್ನು ಮತ್ತು ಗಟ್ಟಿಯಾದ ಬಂಡೆಯೊಳಗಿಂದ ನೀರು ಹೊರಡಿಸಿದ್ದನ್ನು ಮರೆಯಬೇಡಿರಿ.

¶ ದಕ್ಷಿಣ ಸೀಮೆಯ ನೀರಾನೆಯ ವಿಷಯವಾದ ದೈವೋಕ್ತಿ. ರಾಯಭಾರಿಗಳು ಗಂಡು ಕತ್ತೆಗಳ ಬೆನ್ನುಗಳ ಮೇಲೆ ತಮ್ಮ ಧನವನ್ನೂ, ಒಂಟೆಗಳ ಡುಬ್ಬಗಳ ಮೇಲೆ ತಮ್ಮ ದ್ರವ್ಯವನ್ನೂ ಹೊರಿಸಿಕೊಂಡು, ಮೃಗೇಂದ್ರ, ಸಿಂಹ, ಸರ್ಪ, ಹಾರುವ ಉರಿಮಂಡಲ ಇವುಗಳಿಂದ ಭಯಂಕರವಾಗಿಯೂ, ಶ್ರಮಸಂಕಟಗಳನ್ನು ಉಂಟು ಮಾಡುವ ದೇಶದ ಮಾರ್ಗವಾಗಿ ನಿಷ್ಪ್ರಯೋಜಕವಾದ ಜನಾಂಗದ ಬಳಿಗೆ ಹೋಗುತ್ತಾರೆ.

ಕರ್ಮೆಲ್ ಬೆಟ್ಟದ ತುದಿಯಲ್ಲಿ ಅಡಗಿಕೊಂಡರೂ, ನಾನು ಅವರನ್ನು ಹುಡುಕಿ ಅಲ್ಲಿಂದಲೂ ಹಿಡಿದು ತರುವೆನು. ನನ್ನ ಕಣ್ಣಿಗೆ ಮರೆಯಾಗಿ ಸಮುದ್ರದತಳದಲ್ಲಿ ಅಡಗಿಕೊಂಡರೂ, ಅಲ್ಲಿಯೂ ನನ್ನ ಅಪ್ಪಣೆಯ ಪ್ರಕಾರ ಘಟಸರ್ಪವು ಅವರನ್ನು ಕಚ್ಚುವುದು.