TSK

TSK · ಙ್ಞಾನೋಕ್ತಿಗಳು 12:7

Treasury of Scripture Knowledge references in Kannada KJV.

Back to passage

ಸೈನ್ಯಗಳ ಕರ್ತನು ಇಸ್ರಾಯೇಲಿನ ಮೇಲೆ ದೇವರಾಗಿದ್ದಾನೆಂದು ಸದಾಕಾಲಕ್ಕೂ ನಿನ್ನ ನಾಮವು ಘನಹೊಂದಲಿ. ಇದಲ್ಲದೆ ನಿನ್ನ ದಾಸನಾದ ದಾವೀ ದನ ಮನೆಯು ನಿನ್ನ ಮುಂದೆ ಸ್ಥಿರವಾಗಿರಲಿ.

ಆಗ ಅರಸನು ಹಾಗೆಯೇ ಮಾಡಲು ಆಜ್ಞಾಪಿಸಿದನು. ಆ ಆಜ್ಞೆಯು ಶೂಷನಿನಲ್ಲಿ ಕೊಡಲ್ಪಟ್ಟಾಗ ಅವರು ಹಾಮಾನನ ಹತ್ತು ಮಂದಿ ಕುಮಾರರನ್ನೂ ಗಲ್ಲಿಗೆ ಹಾಕಿದರು.

ಆದರೆ ದುಷ್ಟರ ಕಣ್ಣುಗಳು ಕುಂದುವವು; ಅವರು ತಪ್ಪಿಸಿಕೊಳ್ಳುವದಿಲ್ಲ. ಅವರ ಪ್ರಾಣದ ಕೊನೆಯ ಉಸಿರೇ ಅವರ ನಿರೀಕ್ಷೆಯಾಗಿದೆ.

ಹುಳದ ಹಾಗೆ ಮನೆಯನ್ನೂ ಕಾವಲುಗಾರನು ಮಾಡಿದ್ದರ ಹಾಗೆ ತನ್ನ ಗುಡಿಸಲನ್ನೂ ಕಟ್ಟಿದ್ದಾನೆ.

ಇನ್ನು ಸ್ಪಲ್ಪ ಸಮಯದಲ್ಲಿ ದುಷ್ಟನು ಇರನು; ಹೌದು, ಅವನ ಸ್ಥಳವನ್ನು ನೀನು ಜಾಗ್ರತೆಯಾಗಿ ವಿಚಾರಿಸಿದರೂ ಇಗೋ, ಅದು ಇರು ವದಿಲ್ಲ.

ಆದರೆ ಅವನು ಅಳಿದು ಹೋದನು; ಇಗೋ, ಅವನು ಇಲ್ಲವಾದನು; ಹೌದು, ಅವನನ್ನು ನಾನು ಹುಡು ಕಿದೆನು; ಆದರೆ ಅವನು ಸಿಕ್ಕಲಿಲ್ಲ.

ಹೇಗೆ ಬಿರುಗಾಳಿಯು ಬೀಸುವದೋ ಹಾಗೆಯೇ ದುಷ್ಟರು ಇಲ್ಲವಾಗುವರು. ನೀತಿವಂತನು ಶಾಶ್ವತವಾದ ಅಸ್ತಿವಾರ ವಾಗಿದ್ದಾನೆ.

ಜ್ಞಾನಿಯಾದ ಪ್ರತಿ ಸ್ತ್ರೀಯು ತನ್ನ ಮನೆಯನ್ನು ಕಟ್ಟುತ್ತಾಳೆ; ಬುದ್ಧಿಹೀನಳೋ ತನ್ನ ಕೈಗಳಿಂದಲೇ ಅದನ್ನು ಕಿತ್ತುಹಾಕುತ್ತಾಳೆ.

ಕರ್ತನು ಗರ್ವಿಷ್ಟರ ಮನೆಯನ್ನು ಹಾಳುಮಾಡು ವನು; ವಿಧವೆಯರ ಮೇರೆಯನ್ನು ಆತನು ನೆಲೆಗೊಳಿಸು ವನು.

ಆದದರಿಂದ ಯಾವನಾದರೂ ನಾನು ಹೇಳುವ ಈ ನನ್ನ ಮಾತುಗಳನ್ನು ಕೇಳಿ ಅವುಗಳಂತೆ ಮಾಡುವವನನ್ನು ಬಂಡೆಯ ಮೇಲೆ ತನ್ನ ಮನೆಯನ್ನು ಕಟ್ಟಿದ ಬುದ್ಧಿವಂತನಿಗೆ ಹೋಲಿಸುವೆನು.