ಅವನ ಐಶ್ವರ್ಯವು ದಿನೇ ದಿನೇ ಹೆಚ್ಚಿದ್ದರಿಂದ ಬಹು ಧನವಂತನಾದನು.
TSK
TSK · 2 ಪೂರ್ವಕಾಲವೃತ್ತಾ 17:5
Treasury of Scripture Knowledge references in ಕನ್ನಡ IRV.
ಕೆಲವು ಮಂದಿ ಅಯೋಗ್ಯರು, “ಇವನು ನಮ್ಮನ್ನು ರಕ್ಷಿಸುವನೋ?” ಎಂದು ತಿರಸ್ಕರಿಸಿ ಕಾಣಿಕೆಗಳನ್ನು ತರಲಿಲ್ಲ. ಆದರೂ ಸೌಲನು ಸುಮ್ಮನಿದ್ದನು.
ಸೊಲೊಮೋನನು ಯೂಫ್ರೆಟಿಸ್ ನದಿ ಮೊದಲುಗೊಂಡು ಫಿಲಿಷ್ಟಿಯರ ಮತ್ತು ಐಗುಪ್ತ್ಯರ ದೇಶಗಳವರೆಗೂ ಇರುವ ಎಲ್ಲಾ ರಾಜ್ಯಗಳವರನ್ನು ಆಳುತ್ತಿದ್ದನು. ಅವರು ಅವನ ಜೀವಮಾನದಲ್ಲೆಲ್ಲಾ ಅವನಿಗೆ ಅಧೀನರಾಗಿ ಕಪ್ಪಕಾಣಿಕೆಗಳನ್ನು ಸಲ್ಲಿಸುತ್ತಿದ್ದರು.
ಅವರೆಲ್ಲರೂ ಅವನಿಗೆ ವರ್ಷ ವರ್ಷ ಬೆಳ್ಳಿಬಂಗಾರದ ಸಾಮಾನು, ಉಡುಪು, ಯುದ್ಧಕ್ಕೆ ಬೇಕಾದ ಆಯುಧಗಳು, ಸುಗಂಧದ್ರವ್ಯ, ಕುದುರೆ ಮತ್ತು ಹೇಸರಗತ್ತೆ ಇವುಗಳನ್ನು ಕಾಣಿಕೆಯಾಗಿ ಕೊಡುತ್ತಿದ್ದರು.
ಅರಸನು ಯೆರೂಸಲೇಮಿನಲ್ಲಿ ಬೆಳ್ಳಿ ಬಂಗಾರವು ಹೇರಳವಾಗಿದ್ದು ಅವು ಕಲ್ಲಿನಂತೆಯೂ, ಹಾಗು ದೇವದಾರು ಮರಗಳು ತಗ್ಗಿನಲ್ಲಿರುವ ಅತ್ತಿಮರಗಳಂತೆ ಹೇರಳವಾಗಿರುವಂತೆ ಮಾಡಿದನು.
¶ ಯೆಹೋಷಾಫಾಟನಿಗೆ ಧನಘನತೆಗಳು ಬಹಳವಾಗಿದ್ದವು. ಅವನು ಅಹಾಬನೊಡನೆ ನೆಂಟಸ್ಥಿಕೆಯನ್ನು ಮಾಡಿಕೊಂಡನು.
¶ ಹಿಜ್ಕೀಯನಿಗೆ ಅತ್ಯಧಿಕವಾದ ಧನ ಘನತೆಗಳು ಒದಗಿದವು; ಅವನು ಬೆಳ್ಳಿಬಂಗಾರ, ರತ್ನ, ಪರಿಮಳ ದ್ರವ್ಯ, ಗುರಾಣಿ, ಆಭರಣ ಮುಂತಾದ ಶ್ರೇಷ್ಠಾಯುಧಗಳನ್ನು ಇಡುವುದಕ್ಕೋಸ್ಕರ ಭಂಡಾರಗಳನ್ನು ಸಿದ್ಧಪಡಿಸಿದನು
¶ ಯೆಹೋವನು ಯೋಬನ ಮೊದಲನೆಯ ಸ್ಥಿತಿಗಿಂತಲೂ ಅವನ ಕಡೆಯ ಸ್ಥಿತಿಯನ್ನು ಹೀಗೆ ಹೆಚ್ಚಾಗಿ ಆಶೀರ್ವದಿಸಿದನು. ಅವನಿಗೆ ಹದಿನಾಲ್ಕು ಸಾವಿರ ಕುರಿಗಳೂ, ಆರು ಸಾವಿರ ಒಂಟೆಗಳೂ, ಒಂದು ಸಾವಿರ ಜೋಡಿ ಎತ್ತುಗಳೂ, ಒಂದು ಸಾವಿರ ಹೆಣ್ಣುಕತ್ತೆಗಳೂ ಉಂಟಾದವು.
ತಾರ್ಷೀಷ್ ಪ್ರಾಂತ್ಯದ ಮತ್ತು ಸಮುದ್ರದ ಕರಾವಳಿಯ ಅರಸರು ಕಪ್ಪಗಳನ್ನು ಸಲ್ಲಿಸಲಿ; ಶೆಬಾ ಮತ್ತು ಸೆಬಾ ಎಂಬ ಪ್ರದೇಶಗಳ ರಾಜರೂ ಕಾಣಿಕೆಗಳನ್ನು ತಂದೊಪ್ಪಿಸಲಿ.
ಯೆಹೋವನು ಮನೆಯನ್ನು ಕಟ್ಟದಿದ್ದರೆ, ಅದನ್ನು ಕಟ್ಟುವವರು ಕಷ್ಟಪಡುವುದು ವ್ಯರ್ಥ; ಯೆಹೋವನು ಪಟ್ಟಣವನ್ನು ಕಾಯದಿದ್ದರೆ, ಕಾವಲುಗಾರರು ಅದನ್ನು ಕಾಯುವುದು ವ್ಯರ್ಥ.
ರಾಜರು ಸಿಂಹಾಸನಕ್ಕೆ ಧರ್ಮವೇ ಆಧಾರವೆಂದು ತಿಳಿದು, ಅಧರ್ಮವನ್ನಾಚರಿಸಲು ಅಸಹ್ಯಪಡುವರು.
‹ಹೀಗಿರುವುದರಿಂದ, ನೀವು ಮೊದಲು ದೇವರ ರಾಜ್ಯವನ್ನೂ ನೀತಿಯನ್ನೂ ಹುಡುಕಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.›