ಇಲ್ಲವಾದರೆ ಅಬೀಮೆಲೆಕನಿಂದ ಬೆಂಕಿಹೊರಟು ಶೆಕೆಮಿನವರನ್ನೂ, ಮಿಲ್ಲೋ ಕೋಟೆಯವರನ್ನೂ ದಹಿಸಿಬಿಡಲಿ; ಶೆಕೆಮಿನವರಿಂದಲೂ, ಮಿಲ್ಲೋ ಕೋಟೆಯವರಿಂದಲೂ ಬೆಂಕಿಹೊರಟು ಅಬೀಮೆಲೆಕನನ್ನು ದಹಿಸಿಬಿಡಲಿ” ಎಂದನು.
TSK
TSK · 2 ಸಮುವೇಲನು 5:9
Treasury of Scripture Knowledge references in ಕನ್ನಡ IRV.
ಅದನ್ನು ದಾವೀದನಗರಕ್ಕೆ ತರಲೊಲ್ಲದೆ ಗತ್ ಊರಿನ ಓಬೇದೆದೋಮನ ಮನೆಗೆ ಕಳುಹಿಸಿದನು.
¶ ಸೊಲೊಮೋನನ ಬಿಟ್ಟೀ ಕೆಲಸದವರು ಕಟ್ಟಿದವುಗಳು ಯಾವುವೆಂದರೆ, ಯೆಹೋವನ ಆಲಯ, ಅರಮನೆ, ಮಿಲ್ಲೋ ಕೋಟೆ, ಯೆರೂಸಲೇಮಿನ ಪೌಳಿಗೋಡೆ, ಹಾಚೋರ್ ಮೆಗಿದ್ದೋ ಮತ್ತು ಗೆಜೆರ್ ಇವುಗಳೇ.
ಅವನು ತಿರುಗಿ ಬಿದ್ದದ್ದು ಹೇಗೆಂದರೆ, ಸೊಲೊಮೋನನು ಮಿಲ್ಲೋ ಕೋಟೆಯನ್ನು ಕಟ್ಟಿಸಿ ತನ್ನ ತಂದೆಯಾದ ದಾವೀದನ ಪಟ್ಟಣದ ದುರ್ಬಲ ಸ್ಥಳಗಳನ್ನು ಭದ್ರಪಡಿಸುತ್ತಿರುವಾಗ,
ಅವನು ಮಿಲ್ಲೋವಿನಿಂದ ಪ್ರಾರಂಭಿಸಿ ಸುತ್ತಲೂ ಪಟ್ಟಣವನ್ನು ಭದ್ರಪಡಿಸಿದನು. ಯೋವಾಬನು ಪಟ್ಟಣದ ಉಳಿದ ಭಾಗವನ್ನು ಭದ್ರಪಡಿಸಿದನು.
¶ ಬುಗ್ಗೆ ಬಾಗಿಲನ್ನು ಜೀರ್ಣೋದ್ಧಾರ ಮಾಡಿದವನು ಮಿಚ್ಪದ ಒಡೆಯನೂ, ಕೊಲ್ಹೋಜೆಯ ಮಗನೂ ಆದ ಶಲ್ಲೂನ್. ಇವನು ಅದರ ಗೋಡೆಯನ್ನು ಕಟ್ಟಿ ಅದಕ್ಕೆ ಮಾಳಿಗೆಯನ್ನು ಹಾಕಿ ಬಾಗಿಲು, ತಿರುಗುಣಿ, ಅಗುಳಿಗಳನ್ನು ಹಾಕಿಸಿ ದಾವೀದ ನಗರದಿಂದ ಇಳಿದು ಬರುವ ಸೋಪಾನಗಳ ಈಚೆ ಅರಸನ ತೋಟದ ಬಳಿಯಲ್ಲಿರುವ ಸಿಲೋವ ಕೊಳದ ಗೋಡೆಯನ್ನು ಕಟ್ಟಿದನು.