ನಾನು ನಿಮಗೆ ಮಾಡುವುದೇನೆಂದರೆ, ಕ್ಷಯರೋಗ, ಚಳಿಜ್ವರ ಮುಂತಾದ ಭಯಂಕರ ವ್ಯಾಧಿಗಳನ್ನು ನಿಮ್ಮಲ್ಲಿ ಇರುವಂತೆ ಮಾಡುವೆನು; ಇವುಗಳ ದೆಸೆಯಿಂದ ನೀವು ಕಂಗೆಟ್ಟವರಾಗಿಯೂ, ಮನಗುಂದಿದವರಾಗಿಯೂ ಇರುವಿರಿ. ನೀವು ಬೀಜಬಿತ್ತಿದಾಗ ಅದರ ಫಲವು ನಿಮಗೆ ದೊರೆಯದೆ ಹೋಗುವುದು; ಶತ್ರುಗಳು ಬಂದು ಅದನ್ನು ತಿಂದುಬಿಡುವರು.
TSK
TSK · ಧರ್ಮೋಪದೇಶಕಾಂಡ 28:33
Treasury of Scripture Knowledge references in ಕನ್ನಡ IRV.
ಅವರು ನಿಮ್ಮ ದನಗಳನ್ನೂ ಮತ್ತು ಬೆಳೆಗಳನ್ನೂ ತಿಂದುಬಿಟ್ಟು ನಿಮಗೆ ಧಾನ್ಯವನ್ನಾಗಲಿ, ದ್ರಾಕ್ಷಾರಸವನ್ನಾಗಲಿ, ಎಣ್ಣೆಯನ್ನಾಗಲಿ, ದನ ಮತ್ತು ಕುರಿಗಳ ಸಂತಾನವನ್ನಾಗಲಿ ಉಳಿಸದೆ ನಿಮ್ಮನ್ನು ಸಂಪೂರ್ಣವಾಗಿ ನಾಶಮಾಡುವರು.
ಆ ಶತ್ರುಗಳು ತಮ್ಮ ಕುರಿದನ ಗುಡಾರಗಳ ಸಹಿತವಾಗಿ ಮಿಡತೆಗಳಂತೆ ಗುಂಪುಗುಂಪಾಗಿ ಬರುತ್ತಿದ್ದರು. ಅವರೂ ಅವರ ಒಂಟೆಗಳೂ ಅಸಂಖ್ಯವಾಗಿದ್ದವು. ಆ ಗುಂಪೆಲ್ಲಾ ಬಂದು ದೇಶವನ್ನು ಹಾಳುಮಾಡುತ್ತಿತ್ತು.
ನಮ್ಮ ಪಾಪಗಳ ನಿಮಿತ್ತವಾಗಿ ನಿನ್ನಿಂದ ನಮ್ಮ ಮೇಲೆ ನೇಮಿಸಲ್ಪಟ್ಟ ರಾಜರಿಗೆ ಈ ದೇಶದ ಹೇರಳವಾದ ಹುಟ್ಟುವಳಿಯು ಹೋಗುತ್ತಾ ಇದೆ. ದೈಹಿಕವಾಗಿ ನಮ್ಮ ಮೇಲೆ ಹಾಗೂ ನಮ್ಮ ಪಶುಗಳ ಮೇಲೆ ಅವರು ಮನಸ್ಸಿಗೆ ಬಂದಂತೆ ಅಧಿಕಾರ ನಡಿಸುತ್ತಿದ್ದಾರೆ. ನಾವು ಮಹಾಸಂಕಟದಲ್ಲಿದ್ದೇವೆ” ಎಂದು ಪ್ರಾರ್ಥಿಸಿದರು.
ನಿಮ್ಮ ದೇಶವು ಹಾಳಾಗಿದೆ. ನಿಮ್ಮ ಪಟ್ಟಣಗಳು ಸುಟ್ಟುಹೋಗಿವೆ. ನಿಮ್ಮ ಭೂಮಿಯನ್ನು ಅನ್ಯರು ನಿಮ್ಮೆದುರಿಗೆ ನುಂಗಿಬಿಡುತ್ತಿದ್ದಾರೆ. ಅದು ಅನ್ಯಜನರಿಂದ ಹಾಳಾಯಿತು.
ಆ ನಗರವು ನನಗೆ ತಿರುಗಿಬಿದ್ದ ಕಾರಣ ಅದನ್ನು ಹೊಲಕಾಯುವವರಂತೆ ಸುತ್ತಿಕೊಂಡಿದ್ದಾರೆ ಎಂದು ಯೆಹೋವನು ನುಡಿಯುತ್ತಾನೆ.
ಇವರು ನಿನ್ನ ಬೆಳೆಯನ್ನೂ, ನಿನ್ನ ಆಹಾರವನ್ನೂ, ನಿನ್ನ ಗಂಡು ಮತ್ತು ಹೆಣ್ಣುಮಕ್ಕಳನ್ನೂ, ನಿನ್ನ ದನ ಮತ್ತು ಕುರಿಗಳನ್ನೂ, ನಿನ್ನ ದ್ರಾಕ್ಷಾಲತೆಗಳನ್ನೂ ಹಾಗೂ ಅಂಜೂರದ ಗಿಡಗಳನ್ನೂ ತಿಂದುಬಿಡುವರು. ನಿನ್ನ ಭರವಸೆಯ ಕೋಟೆಕೊತ್ತಲುಗಳ ಪಟ್ಟಣಗಳನ್ನು ಖಡ್ಗದಿಂದ ಹಾಳುಮಾಡುವರು.
ಅವರು ಗಾಳಿಯನ್ನು ಬಿತ್ತುತ್ತಾರೆ, ಬಿರುಗಾಳಿಯನ್ನು ಕೊಯ್ದುಕೊಳ್ಳುವರು. ಇಸ್ರಾಯೇಲರ ಪೈರು ತೆನೆಗೆ ಬಾರದು; ಬೀಜ ಮೊಳೆತರೂ ಹಿಟ್ಟು ಸಿಕ್ಕದು; ಒಂದು ವೇಳೆ ಸಿಕ್ಕಿದರೂ ಅನ್ಯರು ಅದನ್ನು ನುಂಗಿಬಿಡುವರು.