TSK

TSK · ಧರ್ಮೋಪದೇಶಕಾಂಡ 31:3

Treasury of Scripture Knowledge references in ಕನ್ನಡ IRV.

ಅಂಗೀಕಾರಕ್ಕೆ ಹಿಂತಿರುಗಿ

¶ ಅದಕ್ಕೆ ಯೆಹೋವನು ಮೋಶೆಗೆ, “ನೂನನ ಮಗನಾದ ಯೆಹೋಶುವನಲ್ಲಿ ನನ್ನ ಆತ್ಮವು ವಾಸಿಸುತ್ತಿದೆ,

ನಿಮ್ಮ ಮುಂದೆ ಮಾರ್ಗದರ್ಶಕನಾಗಿ ಹೋಗುವ ನಿಮ್ಮ ದೇವರಾದ ಯೆಹೋವನು ಐಗುಪ್ತ ದೇಶದಲ್ಲಿಯೂ, ನೀವು ನೋಡಿದ ಅರಣ್ಯದಲ್ಲಿಯೂ ಪ್ರತ್ಯಕ್ಷನಾಗಿ ನಿಮಗೋಸ್ಕರ ಯುದ್ಧಮಾಡಿದಂತೆಯೇ ಈಗಲೂ ನಿಮ್ಮವನಾಗಿ ಯುದ್ಧಮಾಡುವನು.

¶ ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ದೇಶದಲ್ಲಿ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಸೇರಿಸಿ ಅಧಿಕ ಸಂಖ್ಯೆಯಲ್ಲಿಯೂ ಮತ್ತು ಅಧಿಕ ಬಲದಲ್ಲಿಯೂ ನಿಮಗೆ ಮೀರುವ ಹಿತ್ತಿಯರು, ಗಿರ್ಗಾಷಿಯರು, ಅಮೋರಿಯರು, ಕಾನಾನ್ಯರು, ಪೆರಿಜ್ಜೀಯರು, ಹಿವ್ವಿಯರು ಮತ್ತು ಯೆಬೂಸಿಯರು ಎಂಬ ಏಳು ಜನಾಂಗಗಳನ್ನು ನಿಮ್ಮ ಮುಂದೆಯೇ ಹೊರಡಿಸುವನು.

¶ ಆಗ ಮೋಶೆ ಯೆಹೋಶುವನನ್ನು ಕರೆದು ಇಸ್ರಾಯೇಲರ ಮುಂದೆ ಅವನಿಗೆ, “ಯೆಹೋವನು ಇವರ ಪೂರ್ವಿಕರಿಗೆ ಪ್ರಮಾಣಮಾಡಿಕೊಟ್ಟ ದೇಶಕ್ಕೆ ನೀನೇ ಇವರೊಡನೆ ಹೋಗಿ ಅದನ್ನು ಅವರಿಗೆ ಸ್ವಾಧೀನಪಡಿಸಬೇಕು. ಆದುದರಿಂದ ಶೂರನಾಗಿ ಧೈರ್ಯದಿಂದಿರು;

¶ ಆಗ ಯೆಹೋವನು ನೂನನ ಮಗನಾದ ಯೆಹೋಶುವನಿಗೆ, “ನಾನು ಇಸ್ರಾಯೇಲರಿಗೆ ಪ್ರಮಾಣಮಾಡಿಕೊಟ್ಟ ದೇಶದಲ್ಲಿ ನೀನೇ ಅವರನ್ನು ಸೇರಿಸಬೇಕು; ಆದುದರಿಂದ ಶೂರನಾಗಿ ಧೈರ್ಯದಿಂದಿರು; ನಾನೇ ನಿನ್ನ ಸಂಗಡ ಇರುವೆನು” ಎಂದು ಆಜ್ಞಾಪಿಸಿದನು.

“ನನ್ನ ಸೇವಕನಾದ ಮೋಶೆ ಸತ್ತನು; ನೀನು ಈಗ ಹೊರಟು ಸಮಸ್ತ ಇಸ್ರಾಯೇಲ್ ಜನರೊಂದಿಗೆ ಈ ಯೊರ್ದನ್ ನದಿಯನ್ನು ದಾಟಿ, ನಾನು ಅವರಿಗೆ ಕೊಡುವ ದೇಶಕ್ಕೆ ಹೋಗು.

ಆ ದಿನದಲ್ಲಿ ಯೆಹೋವನು ಯೆಹೋಶುವನನ್ನು ಎಲ್ಲಾ ಇಸ್ರಾಯೇಲ್ಯರ ಮುಂದೆ ಘನಪಡಿಸಿದನು. ಅವರು ಮೋಶೆಗೆ ಹೇಗೆ ನಡೆದುಕೊಂಡರೋ ಹಾಗೆಯೇ ಯೆಹೋಶುವನು ಭಯ ಮತ್ತು ಗೌರವದಿಂದ ನಡೆದುಕೊಂಡರು.

ನಿನ್ನ ಹಸ್ತವೇ ಈ ದೇಶದಲ್ಲಿದ್ದ ಜನಾಂಗಗಳನ್ನು ಹೊರಡಿಸಿ, ನಮ್ಮ ಪೂರ್ವಿಕರನ್ನೇ ನೆಲೆಗೊಳಿಸಿದೆ; ನೀನು ಆ ಅನ್ಯಜನಗಳನ್ನು ತೆಗೆದುಬಿಟ್ಟು ನಮ್ಮವರನ್ನು ಹಬ್ಬಿಸಿದಿ.

ನಮ್ಮ ಹಿರಿಯರು ಅದನ್ನು ತಮ್ಮ ಪೂರ್ವಿಕರಿಂದ ಹೊಂದಿದ್ದರು. ಅವರು ಯೆಹೋಶುವನನ್ನು ಅನುಸರಿಸಿ ಬಂದು ದೇವರು ತಳ್ಳಿಬಿಟ್ಟ ಅನ್ಯಜನಗಳ ದೇಶವನ್ನು ಸ್ವಾಧೀನಮಾಡಿಕೊಂಡಾಗ ಆ ಗುಡಾರವನ್ನು ಕೂಡ ತಂದರು. ಅದು ದಾವೀದನ ಕಾಲದವರೆಗೂ ಅಲ್ಲೇ ಇತ್ತು.