1 ¶ ನೋಹನ ಮಕ್ಕಳಾದ ಶೇಮ್, ಹಾಮ್, ಯೆಫೆತ್ ಎಂಬುವವರ ಸಂತಾನದವರ ಚರಿತ್ರೆ: ಜಲಪ್ರಳಯದ ನಂತರ ಅವರಿಗೆ ಮಕ್ಕಳು ಹುಟ್ಟಿದರು.
2 ¶ ಯೆಫೆತನ ಸಂತಾನದವರು ಯಾರೆಂದರೆ - ಗೋಮೆರ್, ಮಾಗೋಗ್, ಮಾದಯ್, ಯಾವಾನ್, ತೂಬಲ್, ಮೆಷೆಕ್, ತೀರಾಸ್ ಎಂಬವರು.
3 ¶ ಗೋಮೆರನ ಸಂತಾನದವರು - ಅಷ್ಕೆನಸ್, ರೀಫತ್, ತೋಗರ್ಮ ಎಂಬವರು.
4 ¶ ಯಾವಾನನ ಸಂತಾನದವರು - ಎಲೀಷಾ, ತಾರ್ಷೀಷ್, ಕಿತ್ತೀಮ್, ದೋದಾ ಎಂಬ ಸ್ಥಳದವರು. ಇವರು ಸಮುದ್ರದ ರೇವು ಪ್ರದೇಶಗಳಲ್ಲಿ ಹರಡಿಕೊಂಡರು.
5 ದೇಶ, ಭಾಷೆ, ಕುಲ, ಜನಾಂಗಗಳ ಪ್ರಕಾರ ಇವರೇ ಯೆಫೆತನ ವಂಶದವರು.
6 ¶ ಹಾಮನ ಸಂತಾನದವರು ಯಾರೆಂದರೆ - ಕೂಷ್, ಮಿಚ್ರಯಿಮ್, ಪೂತ್, ಕಾನಾನ್ ಎಂಬುವವರು.
7 ¶ ಕೂಷನ ಸಂತಾನದವರು ಯಾರೆಂದರೆ - ಸೆಬಾ, ಹವೀಲ, ಸಬ್ತಾ, ರಗ್ಮ, ಸಬ್ತಕಾ ಎಂಬವರು. ರಗ್ಮ ಸಂತಾನದವರು - ಶೆಬಾ, ದೆದಾನ್ ಎಂಬುವವರು.
8 ¶ ಕೂಷನು ನಿಮ್ರೋದನನ್ನು ಪಡೆದನು. ಅವನು ಭೂಮಿಯ ಮೇಲಿನ ಮೊದಲನೆಯ ಪರಾಕ್ರಮಶಾಲಿಯಾಗಿದ್ದನು.
9 ಯೆಹೋವನ ದೃಷ್ಟಿಯಲ್ಲಿ ನಿಮ್ರೋದನು ದಿಟ್ಟ ಬೇಟೆಗಾರನಾಗಿದ್ದನು. ಆದುದರಿಂದ “ಯೆಹೋವನು ನಿನ್ನನ್ನು ದಿಟ್ಟ ಬೇಟೆಗಾರನಾಗಿಸಲಿ” ಎಂಬ ಗಾದೆ ಇಂದಿನವರೆಗೂ ಹೇಳುವುದುಂಟು.
10 ಶಿನಾರ್ ದೇಶದಲ್ಲಿರುವ ಬಾಬೆಲ್, ಯೆರೆಕ್, ಅಕ್ಕದ್, ಕಲ್ನೇ ಎಂಬ ಪಟ್ಟಣಗಳೇ ಅವನ ರಾಜ್ಯದ ಮೂಲ ಪಟ್ಟಣಗಳು.
11 ಅವನು ಆ ದೇಶದಿಂದ ಹೊರಟು ಅಶ್ಶೂರ್ ದೇಶಕ್ಕೆ ಬಂದು ನಿನೆವೆ, ರೆಹೋಬೋತೀರ್, ಕೆಲಹ ಎಂಬ ಪಟ್ಟಣಗಳನ್ನೂ,
12 ನಿನೆವೆಗೂ ಕೆಲಹಕ್ಕೂ ಮಧ್ಯದಲ್ಲಿ ಇರುವ ರೆಸೆನ್ ಪಟ್ಟಣವನ್ನೂ ಕಟ್ಟಿಸಿದನು. ರೆಸೆನ್ ಮಹಾಪಟ್ಟಣವೆಂದು ಪ್ರಸಿದ್ಧವಾಗಿದೆ.
13 ¶ ಮಿಚ್ರಯಿಮ್ಯರಿಂದ ಲೂದ್ಯರು, ಅನಾಮ್ಯರು, ಲೆಹಾಬ್ಯರು, ನಫ್ತುಹ್ಯರು, ಹುಟ್ಟಿದರು.
14 ಪತ್ರುಸ್ಯರು, ಕಸ್ಲುಹ್ಯರು, ಕಫ್ತೋರ್ಯರು ಫಿಲಿಷ್ಟಿಯರಿಂದ ಹುಟ್ಟಿದರು.
15 ¶ ಕಾನಾನ್ ವಂಶದಲ್ಲಿ ಮೊದಲು ಹುಟ್ಟಿದವನು ಸೀದೋನ್; ಆ ಮೇಲೆ ಹೇತ್ ಹುಟ್ಟಿದನು.
16 ಇದಲ್ಲದೆ ಯೆಬೂಸಿಯರು, ಅಮೋರಿಯರು, ಗಿರ್ಗಾಷಿಯರು,
17 ಹಿವ್ವಿಯರು, ಅರ್ಕಿಯರು, ಸೀನಿಯರು ಕಾನಾನನಿಂದ ಹುಟ್ಟಿದರು.
18 ಕಾಲ ಕ್ರಮೇಣವಾಗಿ ಈ ಕಾನಾನ್ಯರ ವಂಶಸ್ಥರಾದ ಸೀನಿಯರು, ಅರ್ವಾದಿಯರು, ಚೆಮಾರಿಯರು, ಹದೋರಾಮರು, ಹಮಾತಿಯರು ಹರಡಿ ಕಾನಾನನಿಂದ ಹುಟ್ಟಿದರು.
19 ¶ ಕಾನಾನ್ಯರ ಸೀಮೆಯು ಸೀದೋನ್ ಪಟ್ಟಣದಿಂದ ಗೆರಾರಿಗೆ ಹೋಗುವ ದಾರಿಯಲ್ಲಿರುವ ಗಾಜಾ ಪಟ್ಟಣದ ವರೆಗೂ ಮತ್ತು ಸೊದೋಮ್, ಗೊಮೋರ, ಅದ್ಮಾ, ಚೆಬೋಯಿಮ್ ಎಂಬ ಪಟ್ಟಣಗಳಿಗೆ ಹೋಗುವ ದಾರಿಯಲ್ಲಿರುವ ಲೆಷಾ ಊರಿನವರೆಗೂ ಇರುತ್ತದೆ.
20 ¶ ಕುಲ, ಭಾಷೆ, ದೇಶ, ಜನಾಂಗಗಳ ಪ್ರಕಾರ ಇವರೇ ಹಾಮನ ವಂಶದವರು.
21 ¶ ಇಬ್ರಿಯರೆಲ್ಲರಿಗೆ ಮೂಲಪುರುಷನನೂ, ಯೆಫೆತನ ಅಣ್ಣನೂ ಆಗಿದ್ದ ಶೇಮನಿಗೂ ಮಕ್ಕಳು ಹುಟ್ಟಿದರು.
22 ¶ ಶೇಮನ ಮಕ್ಕಳು - ಏಲಾಮ್, ಅಶ್ಶೂರ್, ಅರ್ಪಕ್ಷದ್, ಲೂದ್, ಅರಾಮ್ ಎಂಬವರು.
23 ¶ ಅರಾಮ್ ಸಂತಾನದವರು - ಊಸ್, ಹೂಲ್, ಗೆತೆರ್, ಮಷ್ ಎಂಬವರು.
24 ¶ ಅರ್ಪಕ್ಷದನಿಂದ ಶೆಲಹನೂ, ಶೆಲಹನಿಂದ ಎಬರನೂ ಹುಟ್ಟಿದನು.
25 ¶ ಎಬರನಿಗೆ ಇಬ್ಬರು ಮಕ್ಕಳು ಹುಟ್ಟಿದರು. ಒಬ್ಬನಿಗೆ ಪೆಲೆಗೆಂಬ ಹೆಸರು; ಅವನ ಕಾಲದಲ್ಲಿ ಭೂಮಿಯು ವಿಭಾಗಿಸಲ್ಪಟ್ಟಿತ್ತು. ಅವನ ತಮ್ಮನ ಹೆಸರು ಯೊಕ್ತಾನ್.
26 ¶ ಯೊಕ್ತಾನನ ಸಂತಾನದವರು - ಅಲ್ಮೋದಾದ್, ಶೆಲೆಪ್, ಹಚರ್ಮಾವೆತ್, ಯೆರಹ,
27 ಹದೋರಾಮ್, ಊಜಾಲ್, ದಿಕ್ಲಾ,
28 ಓಬಾಲ್, ಅಬೀಮಯೇಲ್, ಶೆಬಾ, ಓಫೀರ್, ಹವೀಲ, ಯೋಬಾಬ್ ಎಂಬವರು.
29 ಹದೋರಾಮ್, ಊಜಾಲ್, ದಿಕ್ಲಾ, ಓಬಾಲ್, ಅಬೀಮಯೇಲ್, ಶೆಬಾ, ಓಫೀರ್, ಹವೀಲ, ಯೋಬಾಬ್ ಈ ಕುಲಗಳೆಲ್ಲಾ ಯೊಕ್ತಾನನಿಂದ ಹುಟ್ಟಿದವು.
30 ¶ ಇವರ ನಿವಾಸವು ಮೇಶಾ ಸೀಮೆ ಮೊದಲುಗೊಂಡು ಪೂರ್ವ ದಿಕ್ಕಿನಲ್ಲಿರುವ ಸೆಫಾರ್ ಎಂಬ ಬೆಟ್ಟದ ವರೆಗೂ ಇತ್ತು.
31 ¶ ಕುಲ, ಭಾಷೆ, ಜನಾಂಗಗಳ ಪ್ರಕಾರ ಇವರೇ ಶೇಮನ ವಂಶದವರು.
32 ¶ ಜನಾಂಗಗಳ ಸಂತತಿಯ ಪ್ರಕಾರ ಇವರೇ ನೋಹನ ವಂಶದವರು. ಜಲಪ್ರಳಯವಾದ ನಂತರ ಭೂಮಿಯ ಮೇಲೆ ಹರಡಿಕೊಂಡ ಜನಾಂಗಗಳು ಇವರೇ.