TSK

TSK · ಆದಿಕಾಂಡ 10:11

Treasury of Scripture Knowledge references in ಕನ್ನಡ IRV.

ಅಂಗೀಕಾರಕ್ಕೆ ಹಿಂತಿರುಗಿ

ಆದರೂ ಕೇನ್ಯರೂ ನಾಶವಾಗುವರು. ಅದು ಎಷ್ಟು ದೂರ ಅನ್ನುತ್ತೀರೋ? ಅಶ್ಶೂರ್ಯರೇ ನಿಮ್ಮನ್ನು ಸೆರೆಹಿಡಿದುಕೊಂಡು ಹೋಗುವರು.”

ಆಗ ಅಶ್ಶೂರ್ಯರ ಅರಸನಾದ ಸನ್ಹೇರೀಬನು ಹಿಂದಿರುಗಿ ನಿನೆವೆ ಪಟ್ಟಣಕ್ಕೆ ಹೋಗಿ ಅಲ್ಲಿ ವಾಸಮಾಡಿದನು.

ಅಶ್ಯೂರ್ಯರೂ ಇವರೊಡನೆ ಕೂಡಿಕೊಂಡು, ಲೋಟನ ವಂಶದವರಿಗೆ ಭುಜಬಲವಾಗಿದ್ದಾರೆ. ಸೆಲಾ

ಹಾರಾನ್, ಕನ್ನೆ, ಎದೆನ್ ಸ್ಥಳಗಳವರೂ, ಶೆಬ, ಅಶ್ಶೂರ್ ಕಿಲ್ಮದ್ ಪ್ರಾಂತ್ಯಗಳವರೂ ನಿನ್ನ ವರ್ತಕರಾಗಿದ್ದರು.

ಅಶ್ಶೂರವು ನಮ್ಮನ್ನು ರಕ್ಷಿಸುವುದೆಂದು ನಂಬುವುದಿಲ್ಲ, ಐಗುಪ್ತದ ಕುದುರೆಗಳನ್ನು ಹತ್ತುವುದಿಲ್ಲ, ನಮ್ಮ ಕೈಕೆಲಸದ ಬೊಂಬೆಗಳಿಗೆ, ‘ನೀವು ನಮ್ಮ ದೇವರುಗಳು’ ಎಂದು ಇನ್ನು ಹೇಳುವುದಿಲ್ಲ; ನೀನೇ ದಿಕ್ಕಿಲ್ಲದ ಈ ಅನಾಥರನ್ನು ಕರುಣಿಸುವವನು” ಎಂಬುದಾಗಿ ಅರಿಕೆಮಾಡಿಕೊಳ್ಳಿರಿ.

¶ ಯೆಹೋವನ ವಾಕ್ಯವು ಯೋನನಿಗೆ ಎರಡನೆಯ ಸಾರಿ ಉಂಟಾಯಿತು.

¶ ನಿನವೆ ಪಟ್ಟಣದ ಬಗ್ಗೆ ದೈವೋಕ್ತಿ. ಎಲ್ಕೋಷ್ ಊರಿನ ನಹೂಮ ಎಂಬ ಪ್ರವಾದಿಗೆ ಆದ ದೈವದರ್ಶನದ ಗ್ರಂಥ.

ನಿನ್ನನ್ನು ನೋಡುವ ಪ್ರತಿಯೊಬ್ಬನು ನಿನ್ನ ಕಡೆಯಿಂದ ಓಡಿಹೋಗಿ, ‘ನಿನವೆಯೂ ಹಾಳಾಯಿತಲ್ಲಾ, ಅದಕ್ಕಾಗಿ ಯಾರು ಗೋಳಾಡುವರು?’ ನಿನ್ನನ್ನು ಸಂತೈಸುವವರು ನನಗೆ ಎಲ್ಲಿ ಸಿಕ್ಕಾರು?” ಅಂದುಕೊಳ್ಳುವನು.