TSK

TSK · ಆದಿಕಾಂಡ 41:23

Treasury of Scripture Knowledge references in ಕನ್ನಡ IRV.

ಅಂಗೀಕಾರಕ್ಕೆ ಹಿಂತಿರುಗಿ

ಅವುಗಳ ನಿವಾಸಿಗಳು ಬಲವಿಲ್ಲದವರಾಗಿ ಹೆದರಿ ಆಶಾಭಂಗಪಟ್ಟು ಕಳವಳಗೊಂಡರು; ಅವರು ಹೊಲದ ಗಿಡಕ್ಕೂ ಕಾಯಿ ಪಲ್ಯಕ್ಕೂ ಹಸಿರು ಹುಲ್ಲಿಗೂ, ಮನೆಯ ಮೇಲೆ ಬೆಳೆಯುವ ಹಾಗೂ, ಹೊಲದ ಹುಲ್ಲಿನ ಹಾಗೆ ಬೆಳೆಯುವುದಕ್ಕಿಂತ ಮೊದಲೇ ಸುಟ್ಟುಹೋದ ಪೈರಿಗೆ ಸಮಾನರಾದರು.

ಅವರು ಗಾಳಿಯನ್ನು ಬಿತ್ತುತ್ತಾರೆ, ಬಿರುಗಾಳಿಯನ್ನು ಕೊಯ್ದುಕೊಳ್ಳುವರು. ಇಸ್ರಾಯೇಲರ ಪೈರು ತೆನೆಗೆ ಬಾರದು; ಬೀಜ ಮೊಳೆತರೂ ಹಿಟ್ಟು ಸಿಕ್ಕದು; ಒಂದು ವೇಳೆ ಸಿಕ್ಕಿದರೂ ಅನ್ಯರು ಅದನ್ನು ನುಂಗಿಬಿಡುವರು.

ಎಫ್ರಾಯೀಮು ತನ್ನ ಸಹೋದರರಲ್ಲಿ ಫಲಸಮೃದ್ಧವಾಗಿದ್ದರೂ, ಕಾಡಿನಿಂದ ಯೆಹೋವನು ಬೀಸಮಾಡುವ ಮೂಡಣ ಗಾಳಿಯು ಬರಲು ಅದರ ಬುಗ್ಗೆಯು ಬತ್ತುವುದು, ಅದರ ಒರತೆಯು ಒಣಗುವುದು. ಶತ್ರುವು ಅವರ ಪ್ರಿಯವಸ್ತುಗಳ ನಿಧಿಯನ್ನು ಸೂರೆಮಾಡುವನು.