TSK

TSK · ಆದಿಕಾಂಡ 45:22

Treasury of Scripture Knowledge references in ಕನ್ನಡ IRV.

ಅಂಗೀಕಾರಕ್ಕೆ ಹಿಂತಿರುಗಿ

ಯೋಸೇಫನು ತನ್ನ ಮುಂದಿಟ್ಟಿದ್ದ ಆಹಾರಗಳಲ್ಲಿ ಭಾಗಗಳನ್ನು ಕಳುಹಿಸಿದಾಗ, ಬೆನ್ಯಾಮೀನನಿಗೆ ಬಂದ ಭಾಗವು ಮಿಕ್ಕಾದವರ ಭಾಗಗಳಿಗಿಂತ ಐದರಷ್ಟು ಹೆಚ್ಚಾಗಿತ್ತು. ಅವರು ಪಾನಮಾಡಿ ಅವನ ಸಂಗಡ ಸಂತೋಷದಿಂದ ಇದ್ದರು.

¶ ಯೆಹೋವನ ಆತ್ಮವು ಫಕ್ಕನೆ ಅವನ ಮೇಲೆ ಬಂದಿತು; ಅವನು ಅಷ್ಕೆಲೋನಿಗೆ ಹೋಗಿ ಅಲ್ಲಿನ ಮೂವತ್ತು ಮಂದಿಯನ್ನು ಹೊಡೆದು, ಅವರ ವಸ್ತ್ರಗಳನ್ನು ಸುಲುಕೊಂಡು ಒಗಟನ್ನು ಬಿಚ್ಚಿದವರಿಗೆ ತಂದುಕೊಟ್ಟನು. ಮತ್ತು ಕೋಪಗೊಂಡವನಾಗಿ ತನ್ನ ತಂದೆಯ ಮನೆಗೆ ಹೋದನು.

ಅದಕ್ಕೆ ಗೇಹಜಿಯು, “ಕ್ಷೇಮ, ಎಫ್ರಾಯೀಮ್ ಪರ್ವತ ಪ್ರದೇಶದಿಂದ ಪ್ರವಾದಿಮಂಡಳಿಯವರಾದ ಇಬ್ಬರು ಯೌವನಸ್ಥರು ಬಂದಿರುತ್ತಾರೆ. ಆದುದರಿಂದ ಅವರಿಗೋಸ್ಕರ ಬೇಗನೇ ಒಂದು ತಲಾಂತು ಬೆಳ್ಳಿಯನ್ನೂ, ಎರಡು ಜೋಡಿ ಬಟ್ಟೆಗಳನ್ನೂ ತೆಗೆದುಕೊಂಡು ಬರಬೇಕೆಂದು ನನ್ನ ಯಜಮಾನನು ನನ್ನನ್ನು ನಿನ್ನ ಬಳಿಗೆ ಕಳುಹಿಸಿದನು” ಎಂದು ಉತ್ತರ ಕೊಟ್ಟನು.