¶ ಆಗ ದೇವರು ನೋಹನಿಗೆ, “ಎಲ್ಲಾ ಮನುಷ್ಯರಿಗೆ ಅಂತ್ಯವನ್ನು ತೀರ್ಮಾನಿಸಿದ್ದೇನೆ; ಭೂಲೋಕವು ಅನ್ಯಾಯದಿಂದಲೂ ಹಿಂಸೆಯಿಂದಲೂ ತುಂಬಿದೆ; ನಾನು ಭೂಮಿಯೊಂದಿಗೆ ಅವರನ್ನೂ ಅಳಿಸಿ ಬಿಡುತ್ತೇನೆ.
TSK
TSK · ಯೆರೆಮಿಯ 51:13
Treasury of Scripture Knowledge references in ಕನ್ನಡ IRV.
ನಿನ್ನ ಹೆಸರು ಹಿಡಿದು ಕರೆಯುವ ಯೆಹೋವನು ನಾನೇ. ಇಸ್ರಾಯೇಲರ ದೇವರು ಎಂದು ನೀನು ತಿಳಿದುಕೊಳ್ಳುವ ಹಾಗೆ ಕತ್ತಲಲ್ಲಿ ಬಚ್ಚಿಟ್ಟಿರುವ ಆಸ್ತಿಯನ್ನೂ, ಗುಪ್ತಸ್ಥಳಗಳಲ್ಲಿ ಮರೆಮಾಡಿದ ನಿಧಿನಿಕ್ಷೇಪವನ್ನೂ ನಿನಗೆ ಕೊಡುವೆನು.
ಅದರ ಹೋರಿಗಳನ್ನೆಲ್ಲಾ ಕೊಲ್ಲಿರಿ, ಅವು ವಧ್ಯಸ್ಥಾನಕ್ಕೆ ಹೋಗಲಿ; ಅವುಗಳ ಗತಿಯನ್ನು ಏನೆಂದು ಹೇಳಲಿ! ಅವುಗಳಿಗೆ ವಿಪತ್ಕಾಲವು ಒದಗಿದೆ, ದಂಡನೆಯ ದಿನವು ಸಂಭವಿಸಿದೆ.
ಖಡ್ಗವು ಅವರ ಅಶ್ವಗಳನ್ನೂ, ರಥಗಳನ್ನೂ, ಬಾಬೆಲಿನಲ್ಲಿರುವ ಬಗೆಬಗೆಯ ವಿದೇಶೀಯರನ್ನೆಲ್ಲ ಹೊಡೆಯಲಿ! ಅವರು ಹೆಂಗಸರಂತೆ ಬೆದರುವರು, ಖಡ್ಗವು ಅವರ ಸಂಪತ್ತನ್ನು ನುಂಗಲಿ! ಅವರು ಸೂರೆಗೆ ಈಡಾಗುವರು.
ಶತ್ರುಗಳು ನಮ್ಮ ಹೆಜ್ಜೆಯನ್ನು ಗುರಿಮಾಡಿಕೊಂಡಿರುವುದರಿಂದ ನಮ್ಮ ಬೀದಿಗಳಲ್ಲೇ ನಾವು ಸಂಚಾರ ಮಾಡದ ಹಾಗಾಯಿತು; ನಮಗೆ ಅಂತ್ಯವು ಸಮೀಪಿಸಿತು, ನಮ್ಮ ಕಾಲವು ತೀರಿತು; ಹೌದು, ನಮಗೆ ಅಂತ್ಯವು ಬಂದೇ ಬಂತು.
ಇದರ ಅರ್ಥವು ಹೀಗಿದೆ, ಮೆನೇ ಎಂದರೆ, ದೇವರು ನಿನ್ನ ಆಳ್ವಿಕೆಯ ಕಾಲವನ್ನು ಲೆಕ್ಕಿಸಿ ಕೊನೆಗಾಣಿಸಿದ್ದಾನೆ.
ಅಲ್ಲದೆ ಮದ್ಯಪಾನವು ಮೋಸಕರವಾದ ಕಾರಣ ದುಷ್ಟನನ್ನು ಮದವೇರಿಸುವುದು, ಸ್ವಸ್ಥಳದಲ್ಲಿ ನಿಲ್ಲಲು ಬಿಡುವುದಿಲ್ಲ; ಪಾತಾಳದಷ್ಟು ಅತಿ ಆಶೆಗೆ ಪ್ರೆರೇಪಿಸಿ ಮೃತ್ಯುವಿನಂತೆ ಅತೃಪ್ತನಾಗಿ ಜೀವಿಸುವನು. ಯೆಹೋವನ ಒಡಂಬಡಿಕೆಯ ವಿರುದ್ಧ ಜೀವಿಸುವವರನ್ನು ತನ್ನ ಕಡೆಗೆ ಆಕರ್ಷಿಸುವನು.
‹ನನ್ನ ಜೀವಾತ್ಮಕ್ಕೆ, ಜೀವವೇ, ಅನೇಕ ವರ್ಷಗಳಿಗೆ ಬೇಕಾದಷ್ಟು ಸರಕು ನಿನಗೆ ಬಂದಿದೆ, ವಿಶ್ರಮಿಸಿಕೋ, ಊಟಮಾಡು, ಕುಡಿ, ಸುಖಪಡು ಎಂದು ಹೇಳುವೆನು’ ಅಂದುಕೊಂಡನು.›
ಅವರು ದ್ರವ್ಯಾಶೆಯುಳ್ಳವರಾಗಿ ಕಲ್ಪಿತ ಮಾತುಗಳನ್ನಾಡುತ್ತಾ ನಿಮ್ಮನ್ನು ಮಾರಾಟಮಾಡಿ ಲಾಭವನ್ನು ಸಂಪಾದಿಸಬೇಕೆಂದಿರುವರು. ಧೀರ್ಘಕಾಲದಿಂದ ಅಂಥವರಿಗಿರುವಂಥ ದಂಡನೆಯ ತೀರ್ಪು ತಪ್ಪದೆ ಬರುತ್ತಿರುವುದು. ಅವರಿಗೆ ಬರುವ ನಾಶವು ತೂಕಡಿಸುವುದಿಲ್ಲ.
ಅವರ ಗತಿಯನ್ನು ಏನೆಂದು ಹೇಳಲಿ? ಇವರು ಕಾಯಿನನ ಮಾರ್ಗವನ್ನು ಹಿಡಿದವರೂ, ದ್ರವ್ಯಸಂಪಾದನೆಗೋಸ್ಕರ ಬಿಳಾಮನ ಭ್ರಾಂತಿಯಲ್ಲಿ ಪೂರ್ಣವಾಗಿ ಮುಳುಗಿದವರೂ, ಕೋರಹನಂತೆ ಎದುರು ಮಾತನಾಡಿ ನಾಶವಾಗಿ ಹೋಗುವವರು ಆಗಿದ್ದಾರೆ.
¶ ಇನ್ನೂ ಆ ದೇವದೂತನು ನನಗೆ ಹೇಳಿದ್ದೇನಂದರೆ, “ಆ ಜಾರಸ್ತ್ರೀ ಕುಳಿತ್ತಿದ್ದ ನೀರನ್ನು ನೀನು ನೋಡಿದೆಯಲ್ಲ, ಅವು ಜನಾಂಗಳನ್ನು, ಜನ ಸಮೂಹಗಳನ್ನು, ರಾಷ್ಟ್ರಗಳನ್ನು, ಭಾಷೆಗಳನ್ನು ಸೂಚಿಸುತ್ತದೆ ಎಂದನು.
ಅನಂತರ ಅವರು ತಮ್ಮ ತಲೆಗಳ ಮೇಲೆ ಮಣ್ಣನ್ನು ಸುರಿದುಕೊಂಡು, ‘ಅಯ್ಯೋ ಅಯ್ಯೋ ಸಮುದ್ರದ ಮೇಲೆ ಹಡಗುಗಳನ್ನು ಹೊಂದಿದವರೆಲ್ಲರೂ ಅವಳ ಅಮೂಲ್ಯ ದ್ರವ್ಯಗಳಿಂದಲೇ ಐಶ್ವರ್ಯವಂತರಾದರಲ್ಲಾ, ಇವಳು ಒಂದೇ ಗಳಿಗೆಯಲ್ಲಿ ಹಾಳಾದಳಲ್ಲಾ’” ಎಂದು ಗೋಳಾಡುತ್ತಾ ದುಃಖಿಸುವರು.