TSK

TSK · ಯೆಹೋಶುವ 21:10

Treasury of Scripture Knowledge references in ಕನ್ನಡ IRV.

ಅಂಗೀಕಾರಕ್ಕೆ ಹಿಂತಿರುಗಿ

ಕೊಹಾತನ ಮಕ್ಕಳು: ಅಮ್ರಾಮ್, ಇಚ್ಹಾರ್, ಹೆಬ್ರೋನ್, ಉಜ್ಜೀಯೇಲ್. ಕೆಹಾತನು ನೂರ ಮೂವತ್ತಮೂರು ವರ್ಷ ಬದುಕಿದನು.

ಆರೋನನ ಮಕ್ಕಳ ಹೆಸರುಗಳು: ಚೊಚ್ಚಲ ಮಗನಾದ ನಾದಾಬ್, ಅಬೀಹೂ, ಎಲ್ಲಾಜಾರ್ ಮತ್ತು ಈತಾಮಾರ್ ಎಂಬುವವರೇ.

¶ ಕೆಹಾತ್ ವಂಶದವರಲ್ಲಿ ಅಮ್ರಾಮ್ ಗೋತ್ರದವರು, ಇಚ್ಹಾರ್ ಗೋತ್ರದವರೂ, ಹೆಬ್ರೋನ್ ಗೋತ್ರದವರೂ, ಉಜ್ಜೀಯೇಲ್ ಗೋತ್ರದವರೂ ಇದ್ದರು.

¶ ಕೆಹಾತ್ಯರಿಗೋಸ್ಕರ ಚೀಟುಹಾಕಿದಾಗ ಆರೋನನ ವಂಶದವರಾದ ಲೇವಿಯರಿಗೆ ಯೆಹೂದ, ಸಿಮೆಯೋನ್, ಬೆನ್ಯಾಮೀನ್ ಕುಲಗಳಿಂದ ಹದಿಮೂರು ಪಟ್ಟಣಗಳು ದೊರೆತವು.