TSK

TSK · ಯಾಜಕಕಾಂಡ 7:37

Treasury of Scripture Knowledge references in ಕನ್ನಡ IRV.

ಅಂಗೀಕಾರಕ್ಕೆ ಹಿಂತಿರುಗಿ

¶ ಅವರು ನನಗೆ ಯಾಜಕರಾಗುವಂತೆ ಅವರನ್ನು ಪ್ರತಿಷ್ಠಿಸುವುದಕ್ಕೆ ನೀನು ಮಾಡಬೇಕಾಗಿರುವ ಕಾರ್ಯಗಳೆನೆಂದರೆ; ಒಂದು ಹೋರಿ ಮತ್ತು ಕರುವನ್ನು ಯಾವ ದೋಷವಿಲ್ಲದ ಎರಡು ಟಗರುಗಳನ್ನೂ ತೆಗೆದುಕೊಳ್ಳಬೇಕು.

¶ ಯೆಹೋವನು ಮೋಶೆಯನ್ನು ಕರೆದು ದೇವದರ್ಶನದ ಗುಡಾರದೊಳಗಿಂದ ಅವನ ಸಂಗಡ ಮಾತನಾಡಿ ಹೀಗೆಂದನು,

“ಆರೋನನಿಗೆ ಅಭಿಷೇಕವಾದ ದಿನ ಮೊದಲುಗೊಂಡು ಅವನೂ ಮತ್ತು ಅವನ ವಂಶದವರೂ ಯೆಹೋವನಿಗೆ ಸಮರ್ಪಿಸಬೇಕಾದ ಧಾನ್ಯ ನೈವೇದ್ಯ ಕ್ರಮ ಹೇಗೆಂದರೆ, ಅವರು ನಿತ್ಯವೂ ಮೂರು ಸೇರು ಗೋದಿಹಿಟ್ಟನ್ನು, ಹೊತ್ತಾರೆ ಅರ್ಧವನ್ನು ಹಾಗೂ ಸಾಯಂಕಾಲ ಅರ್ಧವನ್ನು ಸಮರ್ಪಿಸಬೇಕು.