ನನ್ನ ಪ್ರಜೆಗಳಾದ ಇಸ್ರಾಯೇಲರು ನನ್ನ ಆಜ್ಞಾನುಸಾರವಾಗಿ ನನ್ನ ಮಂದಿರಕ್ಕೆ ತರುವ ಯಜ್ಞನೈವೇದ್ಯಗಳ ಘನತೆಯನ್ನು ನೀವು ಭಂಗಪಡಿಸಿ, ಅವುಗಳ ಶ್ರೇಷ್ಠ ಭಾಗಗಳಿಂದ ನಿಮ್ಮನ್ನು ಕೊಬ್ಬಿಸಿಕೊಳ್ಳುವುದೇಕೆ? ನೀನು ನನ್ನನ್ನು ಗೌರವಿಸುವುದಕ್ಕಿಂತ ಹೆಚ್ಚಾಗಿ ನಿನ್ನ ಮಕ್ಕಳನ್ನೇ ಗೌರವಿಸುವುದು ಸರಿಯೋ?’
TSK
TSK · ಮಲಾಕಿಯ 2:3
Treasury of Scripture Knowledge references in ಕನ್ನಡ IRV.
ಆದುದರಿಂದ ಯಾರೊಬ್ಬಾಮನೇ ಕೇಳು, ನಾನು ನಿನ್ನ ಮನೆಯವರ ಮೇಲೆ ಕೇಡನ್ನು ಬರಮಾಡುವೆನು. ನಿನ್ನ ಕುಟುಂಬದ ಗಂಡಸರಲ್ಲಿ ಸ್ವತಂತ್ರರಾಗಲಿ, ದಾಸರಾಗಲಿ ಎಲ್ಲರನ್ನೂ ಇಸ್ರಾಯೇಲರೊಳಗಿಂದ ಸಂಹರಿಸಿಬಿಡುವೆನು. ಒಬ್ಬನು ಕಸವನ್ನು ಗುಡಿಸಿ ತೆಗೆದುಹಾಕುವಂತೆ ನಾನು ನಿನ್ನ ಮನೆಯವರನ್ನು ತೆಗೆದುಹಾಕುವೆನು.
ತನ್ನ ಮಲದ ಹಾಗೆ ನಿತ್ಯನಾಶನವನ್ನೂ ಹೊಂದುವನು, ಅವನನ್ನು ಕಂಡವರು ಕೂಡ ‘ಅವನು ಎಲ್ಲಿ?’ ಎನ್ನುವರು.
ಅವರು ಎಂದೋರಿನಲ್ಲಿ ವಧಿಸಲ್ಪಟ್ಟು, ಹೊಲದ ಗೊಬ್ಬರವಾಗಿ ಹೋದರಲ್ಲಾ.
ಬೆಳೆ ಬೆಳೆಯುವ ಹೊಲವು ಹಾಳಾಗಿದೆ, ನೆಲವು ದುಃಖದಲ್ಲಿ ಮುಳುಗಿದೆ. ಏಕೆಂದರೆ ಧಾನ್ಯವು ನಾಶವಾಗಿದೆ, ಹೊಸ ದ್ರಾಕ್ಷಾರಸವು ಒಣಗಿದೆ, ಎಣ್ಣೆಯು ಕೆಟ್ಟುಹೋಗಿದೆ.
ನಿನ್ನ ಮೇಲೆ ಹೊಲಸನ್ನು ಹಾಕಿ ಮಾನಕಳೆದು ನಿನ್ನನ್ನು ಎಲ್ಲರೂ ಪರಿಹಾಸ್ಯ ಮಾಡುವಂತೆ ಮಾಡುವೆನು.
‹ಅದು ಭೂಮಿಗಾದರೂ ತಿಪ್ಪೆಗಾದರೂ ಉಪಯೋಗಕ್ಕೆ ಬರುವುದಿಲ್ಲ, ಅದನ್ನು ಹೊರಗೆ ಬಿಸಾಡುತ್ತಾರೆ. ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ”› ಅಂದನು.