ನಿಮ್ಮ ಪೂಜಾಸ್ಥಳಗಳನ್ನು ಇಲ್ಲದಂತೆ ಮಾಡುವೆನು; ನೀವು ಸೂರ್ಯನ ಪೂಜೆಗೆ ಇಟ್ಟಿರುವ ಕಂಬಗಳನ್ನು ಕಡಿದುಹಾಕುವೆನು; ನಿಮ್ಮ ವಿಗ್ರಹಗಳ ಮೇಲೆ ನಿಮ್ಮ ಹೆಣಗಳನ್ನು ಬೀಸಾಡುವೆನು; ನಾನು ನಿಮ್ಮ ವಿಷಯದಲ್ಲಿ ಅಸಹ್ಯಪಡುವೆನು.
TSK
TSK · ಮಿಕ 1:7
Treasury of Scripture Knowledge references in ಕನ್ನಡ IRV.
ಇಸ್ರಾಯೇಲರ ಪುರುಷ ಅಥವಾ ಸ್ತ್ರೀಯೂ ವ್ಯಭಿಚಾರದಿಂದ ಸಂಪಾದಿಸಿದ ಹಣವನ್ನು ಹರಕೆಯಾಗಿ ನಿಮ್ಮ ದೇವರಾದ ಯೆಹೋವನ ಆಲಯದೊಳಗೆ ತರಲೇಬಾರದು. ಈ ಎರಡೂ ಯೆಹೋವನಿಗೆ ಅಸಹ್ಯವಾದ ವಿಷಯ.
¶ ಇದಾದನಂತರ ನೆರೆದುಬಂದ ಇಸ್ರಾಯೇಲರೆಲ್ಲರೂ ಯೆಹೂದ ದೇಶದ ಪಟ್ಟಣಗಳಿಗೆ ಹೋಗಿ ಕಲ್ಲು ಕಂಬಗಳನ್ನು ಒಡೆದು, ಅಶೇರ ವಿಗ್ರಹ ಸ್ತಂಭಗಳನ್ನು ಕಡಿದುಹಾಕಿ, ಪೂಜಾಸ್ಥಳಗಳನ್ನೂ, ಯಜ್ಞವೇದಿಗಳನ್ನೂ ಹಾಳುಮಾಡಿಬಿಟ್ಟರು. ಯೆಹೂದ ಬೆನ್ಯಾಮೀನ್ ಪ್ರಾಂತ್ಯಗಳಲ್ಲದೆ ಎಫ್ರಾಯೀಮ್, ಮನಸ್ಸೆ ಪ್ರಾಂತ್ಯಗಳಲ್ಲಿಯೂ ಯಾವುದೊಂದನ್ನೂ ಉಳಿಸಲಿಲ್ಲ. ಆ ಮೇಲೆ ಇಸ್ರಾಯೇಲರೆಲ್ಲರೂ ತಮ್ಮ ತಮ್ಮ ಸ್ವಾಸ್ತ್ಯವಿರುವ ಪಟ್ಟಣಗಳಿಗೆ ಹೋದರು.
ಹೀಗಿರಲು ಯಾಕೋಬ್ಯರು ಯಜ್ಞವೇದಿಯ ಕಲ್ಲುಗಳನ್ನೆಲ್ಲಾ ಸುಣ್ಣದಂತೆ ಪುಡಿ ಪುಡಿ ಮಾಡಿ, ಅಶೇರವೆಂಬ ವಿಗ್ರಹಸ್ತಂಭಗಳನ್ನೂ, ಸೂರ್ಯಸ್ತಂಭಗಳನ್ನೂ ಪ್ರತಿಷ್ಠಿಸದೆ ನಾಶಮಾಡಿ ಅದೇ ಅವರ ಅಧರ್ಮಕ್ಕೆ ಪ್ರಾಯಶ್ಚಿತ್ತವಾಗುವಂತೆ ಮಾಡಿದನು ಮತ್ತು ಅವರ ಪಾಪ ಪರಿಹಾರಕ್ಕೆ ಗುರುತಾದ ಪೂರ್ಣಫಲವೂ ಇದಾಗಿದೆ.
¶ “‘ನೀವು ವಾಸಿಸುವ ದೇಶದಲ್ಲೆಲ್ಲಾ ಊರುಗಳು ಹಾಳಾಗುವುದರಿಂದಲೂ, ಪೂಜಾ ಸ್ಥಳಗಳು ಪಾಳುಬೀಳುವುದರಿಂದಲೂ ನಿಮ್ಮ ಯಜ್ಞವೇದಿಗಳು ಹಾಳಾಗುವವು; ನಿಮ್ಮ ವಿಗ್ರಹಗಳು ಒಡೆಯಲ್ಪಟ್ಟು ಇಲ್ಲವಾಗುವವು, ನಿಮ್ಮ ಸೂರ್ಯಸ್ತಂಭಗಳು ಕಡಿಯಲ್ಪಡುವುವು.
ಅವಳು ಯಾವ ಅಂಜೂರ ಮತ್ತು ದ್ರಾಕ್ಷಿಗಳನ್ನು ‘ಇವು ನನ್ನೊಂದಿಗೆ ವ್ಯಭಿಚಾರ ಮಾಡಿದವರಿಂದಾದ ಪ್ರತಿಫಲ’ ಅಂದುಕೊಂಡಳೋ, ಅವುಗಳನ್ನು ನಾನು ಹಾಳುಮಾಡಿ ಕಾಡುಗಿಡಗಳ ಗತಿಗೆ ತರುವೆನು; ಅವು ಭೂಜಂತುಗಳಿಗೆ ಆಹಾರವಾಗುವವು.
ಸಮಾರ್ಯವೇ, ನಾನು ನಿನ್ನ ಬಸವನನ್ನು ತಳ್ಳಿಬಿಟ್ಟಿದ್ದೇನೆ; ನನ್ನ ರೋಷಾಗ್ನಿಯು ನಿನ್ನವರ ಮೇಲೆ ಉರಿಯುತ್ತದೆ; ಅವರು ನಿರ್ಮಲರಾಗುವುದಕ್ಕೆ ಇನ್ನೆಷ್ಟು ಕಾಲ ಹಿಡಿಯುವುದೋ?
ಸಮಾರ್ಯದ ನಿವಾಸಿಗಳು ಬೇತಾವೆನಿನ ಬಸವನ ವಿಷಯದಲ್ಲಿ ಭಯಪಡುವರು. ಅದರ ಭಕ್ತ ಜನರು ಅದಕ್ಕಾಗಿ ಎದೆಬಡಿದುಕೊಳ್ಳುವರು; ಅದರ ಮಹಿಮೆಯು ನಂದಿಹೋಯಿತು ಎಂದು ಪೂಜಾರಿಗಳು ಅದಕ್ಕಾಗಿ ನಡುಗುವರು.
ಎಲ್ಲಾ ದೇಶಗಳವರೂ ಅವಳ ಜಾರತ್ವವೆಂಬ ಕ್ರೌರ್ಯದ ದ್ರಾಕ್ಷಾರಸವನ್ನು ಕುಡಿದರು. ಅವಳೊಂದಿಗೆ ಭೂಲೋಕದ ರಾಜರು ವ್ಯಭಿಚಾರ ಮಾಡಿದರು. ಅವಳ ಭೋಗವಿಲಾಸದಿಂದ ಭೂಲೋಕದ ವರ್ತಕರು ಐಶ್ವರ್ಯವಂತರಾದರು” ಎಂದು ಹೇಳಿದನು.
ಚಿನ್ನ, ಬೆಳ್ಳಿ, ರತ್ನ, ಮುತ್ತು, ನಯವಾದ ನಾರುಮಡಿ, ಧೂಮ್ರವರ್ಣದ ವಸ್ತ್ರ, ರೇಷ್ಮೆ, ಕಡುಗೆಂಪು ಉಡುಪು ಸಕಲ ವಿಧವಾದ ಮರಮುಟ್ಟು ಮತ್ತು ದಂತದ ಸಾಮಾನುಗಳು, ಬೆಲೆಬಾಳುವ ಮರ, ತಾಮ್ರ, ಕಬ್ಬಿಣ, ಚಂದ್ರಕಾಂತ ಶಿಲೆ. ಸುಗಂಧ ಸರಕುಗಳಾದ