TSK

TSK · ಅರಣ್ಯಕಾಂಡ 14:20

Treasury of Scripture Knowledge references in ಕನ್ನಡ IRV.

ಅಂಗೀಕಾರಕ್ಕೆ ಹಿಂತಿರುಗಿ

ಅದಕ್ಕೆ ಮೋಶೆ ಫರೋಹನಿಗೆ, “ಈ ಕಪ್ಪೆಗಳು ನಿನ್ನ ಬಳಿಯಿಂದಲೂ, ನಿನ್ನ ಪ್ರಜೆಗಳ ಬಳಿಯಿಂದಲೂ, ನಿನ್ನ ಮನೆಗಳಿಂದಲೂ ತೊಲಗಿ ನೈಲ್ ನದಿಯಲ್ಲಿ ಮಾತ್ರ ಉಳಿಯುವಂತೆ ನಿನಗೋಸ್ಕರವೂ, ನಿನ್ನ ಪರಿವಾರದವರಿಗೋಸ್ಕರವೂ ನಾನು ಯಾವಾಗ ಬೇಡಿಕೊಳ್ಳಲಿ? ನಿನ್ನ ಚಿತ್ತಕ್ಕೆ ಸರಿ ತೋರುವಂತೆ ನೀನೇ ಅದಕ್ಕೊಂದು ಕಾಲವನ್ನು ನೇಮಿಸಬೇಕು” ಎಂದು ಫರೋಹನನ್ನು ವಿನಂತಿಸಿಕೊಂಡನು.

ಆದುದರಿಂದ ಆತನು ಅವರನ್ನು ಸಂಹರಿಸುವೆನು ಎನ್ನಲು, ಆತನು ಆರಿಸಿಕೊಂಡ ಮೋಶೆಯು ಮಧ್ಯಸ್ಥನಾಗಿ, ಅವರನ್ನು ಸಂಹರಿಸದಂತೆ ಆತನ ಕೋಪವನ್ನು ಶಾಂತಪಡಿಸಿದನು.

ಹೀಗಿರಲು ನೀವು ಸ್ವಸ್ಥವಾಗಬೇಕಾದರೆ ನಿಮ್ಮ ಪಾಪಗಳನ್ನು ಒಬ್ಬರಿಗೊಬ್ಬರು ಅರಿಕೆ ಮಾಡಿ,, ಒಬ್ಬರಿಗೋಸ್ಕರ ಒಬ್ಬರು ಪ್ರಾರ್ಥಿಸಿರಿ. ನೀತಿವಂತನ ಅತ್ಯಾಸಕ್ತಿಯುಳ್ಳ ಪ್ರಾರ್ಥನೆಯು ಬಹು ಸಾಮರ್ಥ್ಯವುಳ್ಳದಾಗಿರುತ್ತದೆ.