ಅಲ್ಲಿಯೇ ಆತನ ಸನ್ನಿಧಿಯಲ್ಲಿ ಊಟಮಾಡಿ, ನಿಮ್ಮ ದೇವರಾದ ಯೆಹೋವನು ನಿಮ್ಮ ಪ್ರಯತ್ನಗಳನ್ನು ಕೈಗೂಡುವಂತೆ ಮಾಡಿದ್ದಕ್ಕಾಗಿ ನೀವೂ ಮತ್ತು ನಿಮ್ಮ ಮನೆಗಳವರೂ ಸಂತೋಷದಿಂದಿರಬೇಕು.
TSK
TSK · ಜೆಕರ್ಯ 7:6
Treasury of Scripture Knowledge references in ಕನ್ನಡ IRV.
ಆದರೆ ಯೆಹೋವನು ಸಮುವೇಲನಿಗೆ, “ನೀನು ಅವನ ಸೌಂದರ್ಯವನ್ನೂ, ಎತ್ತರವನ್ನೂ ನೋಡಬೇಡ; ನಾನು ಅವನನ್ನು ನಿರಾಕರಿಸಿದ್ದೇನೆ. ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯದ ಮತ್ತು ಅಂತರಂಗದ ಸೌಂದರ್ಯ ನೋಡುವವನಾಗಿದ್ದಾನೆ” ಅಂದನು.
ಹೃದಯವು ಎಲ್ಲಾದಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ; ಅದನ್ನು ತಿಳಿದವರು ಯಾರು?
ಯೆಹೋವನಿಗೆ ದ್ರಾಕ್ಷಾರಸವನ್ನು ನೈವೇದ್ಯವಾಗಿ ಸುರಿಯರು, ಅವರ ಯಜ್ಞಗಳು ಆತನಿಗೆ ಮೆಚ್ಚಿಕೆಯಾಗುವುದಿಲ್ಲ. ಅವರ ಆಹಾರವು ಸತ್ತವರ ಮನೆಯ ಆಹಾರದಂತಿರುವುದು; ಅದನ್ನು ತಿನ್ನುವವರೆಲ್ಲರೂ ಅಶುದ್ಧರಾಗುವರು, ಅದು ಅವರ ಹೊಟ್ಟೆತುಂಬುವುದಕ್ಕೆ ಮಾತ್ರ ಅನುಕೂಲವಾಗುವುದು, ಅದು ಯೆಹೋವನ ಆಲಯಕ್ಕೆ ಬರಲು ಯೋಗ್ಯವಲ್ಲ.
ನೀವೆಲ್ಲರು ಸೇರಿಬರುವಾಗ ನೀವು ಮಾಡುವ ಭೋಜನವು ಕರ್ತನ ಭೋಜನವಲ್ಲ.
ನೀವು ನುಡಿಯಿಂದಾಗಲಿ ನಡೆಯಿಂದಾಗಲಿ ಏನೇ ಮಾಡಿದರೂ ಅದೆಲ್ಲವನ್ನೂ ಕರ್ತನಾದ ಯೇಸುವಿನ ಹೆಸರಿನಲ್ಲಿಯೇ ಮಾಡಿರಿ ಮತ್ತು ತಂದೆಯಾದ ದೇವರಿಗೆ ಆತನ ಮೂಲಕ ಕೃತಜ್ಞತಾಸ್ತುತ್ತಿಯನ್ನು ಸಲ್ಲಿಸಿರಿ.