TSK

TSK · ಯೋಹಾನನು 11:21

Treasury of Scripture Knowledge references in Kannada KJV.

ಅಂಗೀಕಾರಕ್ಕೆ ಹಿಂತಿರುಗಿ

ಹೌದು, ಅವರು ದೇವರಿಗೆ ವಿರೋಧ ವಾಗಿ ಮಾತನಾಡಿ--ದೇವರು ಅರಣ್ಯದಲ್ಲಿ ಮೇಜನ್ನು ಸಿದ್ಧ ಮಾಡಬಲ್ಲನೋ ಅಂದರು.

ಆತನು ಈ ವಿಷಯಗಳನ್ನು ಅವರೊಂದಿಗೆ ಮಾತನಾಡುತ್ತಿದ್ದಾಗ ಇಗೋ, ಒಬ್ಬ ಅಧಿಕಾರಿಯು ಬಂದು ಆತನನ್ನು ಆರಾಧಿಸಿ--ನನ್ನ ಮಗಳು ಇದೀಗಲೇ ಸತ್ತು ಹೋಗಿರುವಳು; ಆದರೆ ನೀನು ಬಂದು ಆಕೆಯ ಮೇಲೆ ನಿನ್ನ ಕೈಯನ್ನಿಡು; ಆಗ ಅವಳು ಬದುಕುವಳು ಎಂದು ಹೇಳಿದನು.

ಕರ್ತನು ಆಕೆಯನ್ನು ನೋಡಿ ಆಕೆಯ ಮೇಲೆ ಕನಿಕರಪಟ್ಟು ಆಕೆಗೆ--ಅಳಬೇಡ ಅಂದನು.

ಯೇಸು ಯೂದಾಯ ದಿಂದ ಗಲಿಲಾಯಕ್ಕೆ ಬಂದನೆಂದು ಅವನು ಕೇಳಿದಾಗ ಆತನ ಬಳಿಗೆ ಹೋಗಿ ತಾನು ಬಂದು ತನ್ನ ಮಗನನ್ನು ಸ್ವಸ್ಥಪಡಿಸಬೇಕೆಂದು ಆತನನ್ನು ಬೇಡಿಕೊಂಡನು; ಯಾಕಂದರೆ ಅವನು ಸಾಯುವ ಹಾಗಿದ್ದನು.

ಅವರಲ್ಲಿ ಕೆಲ ವರು--ಆ ಕುರುಡನ ಕಣ್ಣುಗಳನ್ನು ತೆರೆದ ಈ ಮನುಷ್ಯನು ಇವನನ್ನೂ ಸಾಯದಹಾಗೆ ಮಾಡಲಾರದೆ ಇದ್ದನೇ ಅಂದರು.