TSK

TSK · ಯೋಹಾನನು 4:29

Treasury of Scripture Knowledge references in Kannada KJV.

ಅಂಗೀಕಾರಕ್ಕೆ ಹಿಂತಿರುಗಿ

ಸಮುವೇಲನು ಸೌಲನಿಗೆ ಪ್ರತ್ಯುತ್ತ ರವಾಗಿ--ದರ್ಶಿಯು ನಾನೇ; ನೀನು ನನ್ನ ಮುಂದೆ ಗುಡ್ಡದ ಮೇಲಕ್ಕೆ ಏರಿ ಹೋಗು, ಈ ಹೊತ್ತು ನೀವು ನನ್ನ ಸಂಗಡ ತಿನ್ನಬೇಕು; ನಾಳೆ ಹೊತ್ತಾರೆ ನಿಮ್ಮನ್ನು ಕಳುಹಿಸುವೆನು; ನಿಮ್ಮ ಹೃದಯದಲ್ಲಿರುವದನ್ನೆಲ್ಲಾ ನಿಮಗೆ ತಿಳಿಯಪಡಿಸುವೆನು ಅಂದನು.

ಇವನು ಮೊದಲು ತನ್ನ ಸ್ವಂತ ಸಹೋದರನಾದ ಸೀಮೋನನನ್ನು ಕಂಡು ಅವ ನಿಗೆ--ನಾವು ಮೆಸ್ಸೀಯನನ್ನು ಕಂಡುಕೊಂಡೆವು ಎಂದು ಹೇಳಿದನು (ಮೆಸ್ಸೀಯನು ಅಂದರೆ ಕ್ರಿಸ್ತನು ಎಂದರ್ಥ).

ಆ ಸ್ತ್ರೀಯು ಆತನಿಗೆ--ಕ್ರಿಸ್ತನೆಂದು ಕರೆಯಲ್ಪಟ್ಟ ಮೆಸ್ಸೀಯನು ಬರುತ್ತಾನೆಂದು ನಾನು ಬಲ್ಲೆನು; ಆತನು ಬಂದಾಗ ನಮಗೆ ಎಲ್ಲವುಗಳನ್ನು ತಿಳಿಯಪಡಿಸುವನು ಅಂದಳು.

ಜನರಲ್ಲಿ ಅನೇಕರು ಆತನನ್ನು ನಂಬಿ--ಕ್ರಿಸ್ತನು ಬಂದಾಗ ಈ ಮನುಷ್ಯನು ಮಾಡಿದ್ದಕ್ಕಿಂತ ಹೆಚ್ಚು ಅದ್ಭುತಕಾರ್ಯಗಳನ್ನು ಮಾಡು ವನೋ ಅಂದರು.

ಆತ್ಮನೂ ಮದಲಗಿತ್ತಿಯೂ--ಬಾ, ಅನ್ನುತ್ತಾರೆ. ಕೇಳುವವನು--ಬಾ, ಅನ್ನಲಿ. ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಉಚಿತವಾಗಿ ತೆಗೆದುಕೊಳ್ಳಲಿ.