TSK

TSK · ಮಾರ್ಕನು 13:6

Treasury of Scripture Knowledge references in Kannada KJV.

ಅಂಗೀಕಾರಕ್ಕೆ ಹಿಂತಿರುಗಿ

ಆಗ ಕರ್ತನು ನನಗೆ ಹೇಳಿದ್ದೇನಂದರೆ --ಪ್ರವಾದಿಗಳು ನನ್ನ ಹೆಸರಿನಲ್ಲಿ ಸುಳ್ಳಾಗಿ ಪ್ರವಾದಿ ಸುತ್ತಾರೆ; ನಾನು ಅವರನ್ನು ಕಳುಹಿಸಲಿಲ್ಲ; ಅವ ರಿಗೆ ಆಜ್ಞೆ ಕೊಡಲಿಲ್ಲ; ಅವರ ಸಂಗಡ ಮಾತಾಡ ಲಿಲ್ಲ; ಸುಳ್ಳಿನ ದರ್ಶನವನ್ನೂ ಶಕುನವನ್ನೂ ಶೂನ್ಯ ವನ್ನೂ ತಮ್ಮ ಹೃದಯದ ಕಪಟವನ್ನೂ ನಿಮಗೆ ಪ್ರವಾದಿಸುತ್ತಾರೆ.

ಯಾಕಂದರೆ ನನ್ನ ಹೆಸರಿನಲ್ಲಿ ಅನೇಕರು ಬಂದು--ನಾನು ಕ್ರಿಸ್ತನು ಎಂದು ಹೇಳಿ ಅನೇಕರನ್ನು ಮೋಸಗೊಳಿಸುವರು.

ಆಗ ಯಾರಾದರೂ ನಿಮಗೆ--ಇಗೋ, ಕ್ರಿಸ್ತನು ಇಲ್ಲಿದ್ದಾನೆ ಇಲ್ಲವೆ ಅಲ್ಲಿದ್ದಾನೆ ಎಂದು ಹೇಳಿದರೆ ಅದನ್ನು ನಂಬಬೇಡಿರಿ.

ನಾನು ನನ್ನ ತಂದೆಯ ಹೆಸರಿನಲ್ಲಿ ಬಂದಿದ್ದೇನೆ, ನೀವು ನನ್ನನ್ನು ಅಂಗೀಕರಿ ಸುವದಿಲ್ಲ; ಮತ್ತೊಬ್ಬನು ತನ್ನ ಸ್ವಂತ ಹೆಸರಿನಲ್ಲಿ ಬಂದರೆ ನೀವು ಅವನನ್ನು ಅಂಗೀಕರಿಸುವಿರಿ.

ಇದಕ್ಕಿಂತ ಮುಂಚೆ ಥೈದನು ಎದ್ದು ತಾನೊಬ್ಬ ಗಣ್ಯವ್ಯಕ್ತಿ ಎಂದು ತನ್ನ ವಿಷಯವಾಗಿ ತಾನೇ ಕೊಚ್ಚಿಕೊಂಡಾಗ ಸುಮಾರು ನಾನೂರು ಜನರು ಅವನೊಂದಿಗೆ ಸೇರಿಕೊಂಡರು; ಅವನು ಕೊಲ್ಲಲ್ಪಟ್ಟದ್ದರಿಂದ ಅವನಿಗೆ ವಿಧೇಯರಾಗಿ ದ್ದವರೆಲ್ಲರೂ ಚದರಿಹೋಗಿ ಇಲ್ಲವಾದರು.