ಮೂರನೆಯ ದಿನದಲ್ಲಿ ಫರೋಹನ ಜನನದ ದಿನವಾಗಿದ್ದರಿಂದ ಅವನು ತನ್ನ ಸೇವಕರೆಲ್ಲರಿಗೆ ಔತಣವನ್ನು ಮಾಡಿಸಿ ಮುಖ್ಯ ಪಾನದಾಯಕನನ್ನೂ ಮುಖ್ಯ ರೊಟ್ಟಿಗಾರನನ್ನೂ ತನ್ನ ಸೇವಕರ ಮುಂದೆ ನಿಲ್ಲಿಸಿದನು.
TSK
TSK · ಮಾರ್ಕನು 6:21
Treasury of Scripture Knowledge references in Kannada KJV.
ತನ್ನ ಆಳಿಕೆಯ ಮೂರನೇ ವರುಷ ದಲ್ಲಿ ಅವನು ತನ್ನ ಸಮಸ್ತ ಪ್ರಧಾನರಿಗೂ ಸೇವಕ ರಿಗೂ ಔತಣವನ್ನು ಮಾಡಿಸಿದನು. ಪಾರಸಿಯ, ಮೇದ್ಯರ ಬಲವಾದ ಸೈನ್ಯವೂ ಪ್ರಾಂತ್ಯಗಳ ಶ್ರೇಷ್ಠರೂ ಪ್ರಧಾನರೂ ಅವನ ಬಳಿಯಲ್ಲಿದ್ದರು.
ಅರಸನಾದ ಅಹಷ್ವೇರೋಷನ ಹನ್ನೆರಡನೆ ವರುಷದಲ್ಲಿ ನೀಸಾನ್ ಎಂಬ ಮೊದಲನೇ ತಿಂಗಳಲ್ಲಿ ಹಾಮಾನನ ಮುಂದೆ ಪೂರ್ ಎಂಬ ಚೀಟನ್ನು ದಿನ ದಿನಕ್ಕೂ ತಿಂಗಳು ತಿಂಗಳಿಗೂ ಅಡಾರ್ ಎಂಬ ಹನ್ನೆರಡನೆ ತಿಂಗಳ ವರೆಗೆ ಹಾಕಿದರು.
ದ್ರಾಕ್ಷಾರಸವನ್ನು ಕುಡಿ ಯುವದು ರಾಜರಿಗೆ ಯೋಗ್ಯವಲ್ಲ; ಓ ಲೆಮೂ ವೇಲನೇ, ಅದು ಅರಸರಿಗೆ ಬೇಡ; ಇಲ್ಲವೆ ಪ್ರಭುಗ ಳಿಗೆ ಕುಡಿಯುವದು ಹಿತವಲ್ಲ;
ನಮ್ಮ ಅರಸನ ದಿನದಲ್ಲಿ ಪ್ರಧಾನರು ದ್ರಾಕ್ಷಾರಸದ ಬುದ್ದಲಿಗಳಿಂದ ಅಸ್ವಸ್ಥರಾ ಗುತ್ತಾರೆ, ಅವನು ಪರಿಹಾಸ್ಯಗಾರರ ಸಂಗಡ ತನ್ನ ಕೈಚಾಚುತ್ತಾನೆ.
ಯೋಹಾನನ ಸಹೋದರನಾದ ಯಾಕೋಬನನ್ನು ಕತ್ತಿಯಿಂದ ಕೊಲ್ಲಿಸಿದನು.
ಈ ಇಬ್ಬರು ಪ್ರವಾದಿಗಳು ಭೂಮಿಯ ಮೇಲೆ ವಾಸ ಮಾಡುವವರನ್ನು ಯಾತನೆ ಪಡಿಸಿದ್ದರಿಂದ ಇವರ ವಿಷಯದಲ್ಲಿ ಭೂನಿವಾಸಿಗಳು ಸಂತೋಷಿಸಿ ಸಂಭ್ರಮಗೊಂಡು ಒಬ್ಬರಿಗೊಬ್ಬರು ದಾನಗಳನ್ನು ಕಳುಹಿಸುವರು ಎಂದು ಹೇಳಿದನು.