ಸುಳ್ಳಿನ ವಿಷಯಗಳಿಂದ ನೀನು ದೂರ ವಿರು; ನಿರಪರಾಧಿಯನ್ನೂ ನೀತಿವಂತನನ್ನೂ ಕೊಲ್ಲ ಬೇಡ, ಯಾಕಂದರೆ ನಾನು ದುಷ್ಟನನ್ನು ನೀತಿವಂತ ನೆಂದು ನಿರ್ಣಯಿಸುವದಿಲ್ಲ.
TSK
TSK · ಙ್ಞಾನೋಕ್ತಿಗಳು 17:15
Treasury of Scripture Knowledge references in Kannada KJV.
ಆಗ ಬೆಲಿಯಾಳನ ಮಕ್ಕಳಾದ ಇಬ್ಬರು ಮನುಷ್ಯರು ಬಂದು ಅವನಿಗೆದುರಾಗಿ ಕುಳಿತು ಕೊಂಡರು; ಈ ಬೆಲಿಯಾಳನ ಮನುಷ್ಯರು ಜನರ ಸಮ್ಮುಖದಲ್ಲಿ ನಾಬೋತನಿಗೆ ವಿರೋಧವಾಗಿ--ಈ ನಾಬೋತನು ದೇವರನ್ನೂ ಅರಸನನ್ನೂ ದೂಷಿಸಿದ ನೆಂದು ಸಾಕ್ಷಿ ಹೇಳಿದರು. ಆಗ ಅವನನ್ನು ಪಟ್ಟಣದ ಹೊರಗೆ ತಕ್ಕೊಂಡು ಹೋಗಿ ಅವನು ಸಾಯುವ ಹಾಗೆ ಅವರು ಅವನಿಗೆ ಕಲ್ಲೆಸೆದರು. ಅವನು ಸತ್ತನು.
ಮೋಸದ ತಕ್ಕಡಿ ಕರ್ತನಿಗೆ ಅಸಹ್ಯವಾಗಿದೆ; ನ್ಯಾಯದ ತೂಕ ಆತನ ಆನಂದವು.
ನನ್ನ ನ್ಯಾಯತೀರ್ಪಿನಲ್ಲಿ ನೀತಿವಂತರನ್ನು ಕೆಡವುವಂತೆ ದುಷ್ಟ ರನ್ನು ಸ್ವೀಕರಿಸುವದು ಯುಕ್ತವಲ್ಲ.
ದುಷ್ಟನಿಗೆ--ನೀನು ನೀತಿವಂತನು ಎಂದು ಹೇಳುವವನನ್ನು ಜನರು ಶಪಿಸು ವರು, ಜನಾಂಗಗಳು ಅವನನ್ನು ಹೇಸಿಕೊಳ್ಳುವರು.
ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ; ಇಲ್ಲವೆ ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ ಎಂದು ಕರ್ತನು ಹೇಳುತ್ತಾನೆ.
ಅಲ್ಲಿನ ಪ್ರಧಾನರು ಸುಲಿಗೆಗಾಗಿ ರಕ್ತ ಸುರಿಸಿ ಪ್ರಾಣ ಗಳನ್ನು ನುಂಗುವ ಹಾಗೆ ಬೇಟೆಯ ತೋಳಗಳಂತಿ ದ್ದಾರೆ.
ನಿಮ್ಮ ಅನೇಕ ಅಪರಾಧಗಳನ್ನೂ ನಿಮ್ಮ ಘೋರವಾದ ಪಾಪಗಳನ್ನೂ ನಾನು ಬಲ್ಲೆನು; ಅವರು ನೀತಿವಂತರನ್ನು ಬಾಧೆಪಡಿಸಿ ಲಂಚವನ್ನು ತೆಗೆದು ಕೊಂಡರು; ಬಾಗಲ ಬಳಿಯಲ್ಲಿರುವ ಬಡವರ ನ್ಯಾಯ ವನ್ನು ತೀರಿಸದೆ ಅವರು ಕಳುಹಿಸಿಬಿಟ್ಟರು.
ಆಗ ಅವರೆಲ್ಲರೂ ಆ ಕ್ಷಣವೇ--ಈತನನ್ನು ತೆಗೆದುಹಾಕಿ ನಮಗೆ ಬರಬ್ಬ ನನ್ನು ಬಿಟ್ಟುಕೊಡು ಎಂದು ಕೂಗುತ್ತಾ ಹೇಳಿದರು.
ನೀತಿವಂತನಿಗೆ ದಂಡನೆಯನ್ನು ವಿಧಿಸಿ ಕೊಂದು ಹಾಕಿ ದ್ದೀರಿ; ಅವನು ನಿಮ್ಮನ್ನು ಎದುರಾಯಿಸುವವನಲ್ಲ.