ಆದದರಿಂದ ನಾವು ಉಪವಾಸ ಮಾಡಿ ಇದಕ್ಕೋಸ್ಕರ ನಮ್ಮ ದೇವರನ್ನು ಬೇಡಿಕೊಂಡೆವು. ಆತನು ನಮ್ಮ ವಿಜ್ಞಾಪನೆಯನ್ನು ಕೇಳಿದನು.
TSK
TSK · ಙ್ಞಾನೋಕ್ತಿಗಳು 3:5
Treasury of Scripture Knowledge references in Kannada KJV.
ಕರ್ತನಲ್ಲಿ ಭರವಸವಿಟ್ಟು ಒಳ್ಳೆಯದನ್ನು ಮಾಡು; ಆಗ ದೇಶದಲ್ಲಿ ವಾಸಮಾಡಿ ನಿಜವಾಗಿ ತೃಪ್ತಿ ಹೊಂದು ವಿ.
ಕರ್ತನಲ್ಲಿ ಶಾಂತವಾಗಿರು; ಮೌನವಾಗಿದ್ದು ಆತನಿಗಾಗಿ ಎದುರುನೋಡು; ತನ್ನ ಮಾರ್ಗದಲ್ಲಿ ಸಫಲ ವಾಗುವವನಿಗೋಸ್ಕರವೂ ಯುಕ್ತಿಗಳನ್ನು ನಡಿಸುವ ಮನುಷ್ಯರಿಗೋಸ್ಕರವೂ ಕೋಪಮಾಡಿಕೊಳ್ಳಬೇಡ.
ಓ ಇಸ್ರಾಯೇಲೇ, ಕರ್ತನಲ್ಲಿ ಭರವಸವಿಡು; ಆತನೇ ಅವರ ಸಹಾಯವೂ ಗುರಾಣಿಯೂ ಆಗಿ ದ್ದಾನೆ.
ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನ ವರನ್ನು ನೆಚ್ಚಬೇಡಿರಿ, ಅವನು ಸಹಾಯಮಾಡ ಶಕ್ತ ನಲ್ಲ;
ನಿನ್ನ ಭರವಸವು ಕರ್ತನಲ್ಲಿ ಇರುವಂತೆ ನಿನಗೆ ಈ ದಿವಸ ತಿಳಿಯ ಪಡಿಸಿದ್ದೇನೆ.
ತನ್ನ ಹೃದಯದಲ್ಲಿಯೇ ಭರವಸವಿ ಡುವವನು ಬುದ್ಧಿಹೀನನು; ಜ್ಞಾನದಿಂದ ನಡೆಯುವ ವನು ತಪ್ಪಿಸಿಕೊಳ್ಳುವನು.
ದೃಢಮನಸ್ಸುಳ್ಳವನನ್ನು ಪೂರ್ಣ ಸಮಾಧಾನದಲ್ಲಿ ನೆಲೆಗೊಳಿಸಿ ಕಾಯುವಿ. ಅವನಿಗೆ ನಿನ್ನಲ್ಲಿ ಭರವಸವಿದೆ.
ಕರ್ತನೇ, ಮನುಷ್ಯನ ಮಾರ್ಗವು ತನ್ನಲ್ಲಿಲ್ಲವೆಂದೂ ತನ್ನ ಹೆಜ್ಜೆ ನೆಟ್ಟಗೆ ಮಾಡುವದು ನಡೆಯುವ ಮನುಷ್ಯನದಲ್ಲವೆಂದೂ ಬಲ್ಲೆನು.
ಒಬ್ಬರಿಗೊಬ್ಬರು ಒಂದೇ ಮನಸ್ಸುಳ್ಳುವರಾಗಿರ್ರಿ; ದೊಡ್ಡಸ್ತಿಕೆಗಳ ಮೇಲೆ ಮನಸ್ಸಿಡದೆ ದೀನರ ಸಂಗಡ ಬಳಿಕೆಯಾಗಿರ್ರಿ. ನಿಮ್ಮನ್ನು ನೀವೇ ಬುದ್ಧಿವಂತರೆಂದು ಭಾವಿಸಿಕೊಳ್ಳಬೇಡಿರಿ.
ವಿಗ್ರಹಗಳಿಗೆ ಸಮರ್ಪಣೆ ಮಾಡುವವು ಗಳ ವಿಷಯದಲ್ಲಿ ನಮ್ಮೆಲ್ಲರಿಗೂ ಜ್ಞಾನ ವಿದೆಯೆಂದು ನಾವು ಬಲ್ಲೆವು; ಜ್ಞಾನವು ಉಬ್ಬಿಕೊಳ್ಳುತ್ತದೆ, ಆದರೆ ಪ್ರಿತಿಯು ಭಕ್ತಿವೃದ್ಧಿಯನ್ನುಂಟುಮಾಡು ತ್ತದೆ.