ಇಗೋ, ಅವರು ಕಾಡುಕತ್ತೆಗಳ ಹಾಗೆ ತಮ್ಮ ಕೆಲಸಕ್ಕೆ ಹೊರಡುತ್ತಾರೆ. ಬೆಳಿಗ್ಗೆ ಕೊಳ್ಳೆ ಹುಡುಕುತ್ತಾರೆ; ಅರಣ್ಯವು ಅವರಿಗೂ ಮಕ್ಕಳಿಗೂ ಆಹಾರ ಕೊಡು ತ್ತದೆ.
TSK
TSK · ಙ್ಞಾನೋಕ್ತಿಗಳು 4:17
Treasury of Scripture Knowledge references in Kannada KJV.
ಕದಿಯಲ್ಪಟ್ಟ ನೀರುಗಳು ಸಿಹಿಯಾಗಿವೆ ರಹಸ್ಯ ದಲ್ಲಿ ತಿನ್ನುವ ರೊಟ್ಟಿಯು ರುಚಿಯಾಗಿದೆ ಎಂದು ಹೇಳುತ್ತಾಳೆ.
ವ್ಯರ್ಥವಾದ ಹಗ್ಗಗಳಿಂದ ಅಪರಾಧವನ್ನೂ ಬಂಡಿ ಹಗ್ಗದಿಂದಲೋ ಎಂಬಂತೆ ಪಾಪವನ್ನೂ ಎಳೆದು --
ನನ್ನ ಜನರಲ್ಲಿ ದುಷ್ಟರು ಸಿಕ್ಕಿದ್ದಾರೆ; ಉರುಲು ಇಡುವವನ ಹಾಗೆ ಹೊಂಚು ಹಾಕುತ್ತಾರೆ; ಬೋನು ಹಾಕಿ ಮನುಷ್ಯರನ್ನು ಹಿಡಿಯು ತ್ತಾರೆ.
ಕೊಳ್ಳೆಯನ್ನು ಸುಲಿದುಕೊಳ್ಳುವ ಘರ್ಜಿಸುವ ಸಿಂಹದ ಹಾಗೆ ಅದರ ಮಧ್ಯದಲ್ಲಿ ಪ್ರವಾದಿಗಳ ಒಳಸಂಚು ಉಂಟು; ಪ್ರಾಣಗಳನ್ನು ತಿಂದುಬಿಟ್ಟಿದ್ದಾರೆ. ಸಂಪತ್ತನ್ನೂ ಅಮೂಲ್ಯವಾದ ವಸ್ತುವನ್ನೂ ದೋಚಿ ಕೊಂಡಿದ್ದಾರೆ, ಅವರು ಅದರ ಮಧ್ಯದಲ್ಲಿ ಬಹಳ ಜನರನ್ನು ವಿಧವೆಯರನ್ನಾಗಿ ಮಾಡಿದ್ದಾರೆ.
ತನ್ನ ಜನರು ತಪ್ಪುವಂತೆ ಮಾಡುವ ಪ್ರವಾದಿಗಳ ವಿಷಯವಾಗಿ ಕರ್ತನು ಹೀಗೆ ಹೇಳುತ್ತಾನೆ--ಅವರಿಗೆ ತಿನ್ನುವದಕ್ಕೆ ಕೊಡುವಂತವರಿಗೆ--ನಿಮಗೆ ಸಮಾಧಾನವಾಗಲಿ ಎಂದು ಹೇಳುತ್ತಾರೆ; ಆದರೆ ತಮ್ಮ ಬಾಯಿಗೆ ಏನೂ ಕೊಡದವನ ವಿರೋಧವಾಗಿ ಯುದ್ಧಕ್ಕೂ ಅವರು ಸಿದ್ಧರಾಗುವರು.
ಅದರ ಮಧ್ಯದಲ್ಲಿರುವ ಪ್ರಧಾನರುಗಳು ಗರ್ಜಿಸುವ ಸಿಂಹಗಳಾಗಿದ್ದಾರೆ; ಅದರ ನ್ಯಾಯಾಧಿಪತಿಗಳು ಸಂಜೆಯ ತೋಳಗಳಾಗಿದ್ದಾರೆ; ಮರುದಿನದ ವರೆಗೂ ಕಡಿಯುವದಕ್ಕೆ ಎಲುಬುಗಳಿಲ್ಲ.
ಇಗೋ, ನಿಮ್ಮ ಹೊಲಗಳನ್ನು ಕೊಯಿದವರ ಕೂಲಿಯನ್ನು ನೀವು ಅನ್ಯಾಯವಾಗಿ ಹಿಡಿದುಕೊಂಡಿ ದ್ದೀರಿ. ಆ ಕೂಲಿ ಕೂಗಿಕೊಳ್ಳುತ್ತದೆ; ಕೊಯಿದವರ ಕೂಗು ಸೈನ್ಯಗಳ ಕರ್ತನ ಕಿವಿಗಳಲ್ಲಿ ಬಿದ್ದಿದೆ.