TSK

TSK · 1 ಪೂರ್ವಕಾಲವೃತ್ತಾ 23:6

مراجع Treasury of Scripture Knowledge في ಕನ್ನಡ IRV.

العودة إلى المقطع

¶ ಇವರು ಯಾಜಕ ಉದ್ಯೋಗವನ್ನು ನಡೆಸುವುದಕ್ಕಾಗಿ ಅಭಿಷೇಕಹೊಂದಿದವರಾಗಿ ಪ್ರತಿಷ್ಠಿತರಾದ ಆರೋನನ ಮಕ್ಕಳು.

ದೇವದರ್ಶನ ಗುಡಾರದ ವಿಷಯದಲ್ಲಿ ಕೆಹಾತ್ಯರು ಮಾಡಬೇಕಾದ ಕೆಲಸ ಯಾವುದೆಂದರೆ; ಅವರು ಮಹಾಪರಿಶುದ್ಧ ವಸ್ತುಗಳನ್ನು ನೋಡಿಕೊಳ್ಳಬೇಕು.

¶ ಆರೋನನ ಸಂತಾನದವರೂ ವರ್ಗಗಳಾಗಿ ವಿಭಾಗಿಸಲ್ಪಟ್ಟರು. ಆರೋನನ ಮಕ್ಕಳು ನಾದಾಬ್, ಅಬೀಹೂ, ಎಲ್ಲಾಜಾರ್ ಮತ್ತು ಈತಾಮಾರ್ ಎಂಬುವರು.

ಇದಲ್ಲದೆ, ತನ್ನ ತಂದೆಯಾದ ದಾವೀದನ ಆಜ್ಞೆಗೆ ಅನುಸಾರವಾಗಿ ಯಾಜಕ ವರ್ಗಗಳನ್ನೂ, ಲೇವಿಯರನ್ನೂ ಅವರವರ ಸೇವಾವೃತ್ತಿಗೆ ನೇಮಿಸಿದನು. ಲೇವಿಯರು ಆಯಾ ದಿನದ ನೇಮದ ಪ್ರಕಾರ ದೇವರನ್ನು ಸ್ತುತಿಸಲು, ಯಾಜಕರ ಕೈಕೆಳಗೆ ಸೇವೆಮಾಡುತ್ತಲೂ ದ್ವಾರಪಾಲಕರು ತಮ್ಮ ತಮ್ಮ ವರ್ಗಗಳ ಸರದಿಯ ಮೇಲೆ ಆಯಾ ಬಾಗಿಲುಗಳನ್ನು ಕಾಯುತ್ತಲೂ ಇರಬೇಕಾಗಿತ್ತು. ದೇವರ ಮನುಷ್ಯನಾದ ದಾವೀದ ರಾಜನ ಅಪ್ಪಣೆ ಇದೇ ಆಗಿತ್ತು.

¶ ಹಿಜ್ಕೀಯನು ಯಾಜಕರ ಮತ್ತು ಲೇವಿಯರ ಆಯಾ ವರ್ಗಗಳವರನ್ನು ಅವರವರಿಗೆ ನೇಮಕವಾದ ಸೇವೆಗೆ ಅಂದರೆ, ಸರ್ವಾಂಗಹೋಮ, ಸಮಾಧಾನ ಯಜ್ಞ, ಇವುಗಳನ್ನು ಸಮರ್ಪಿಸುವುದಕ್ಕೂ ಯೆಹೋವನ ಪಾಳೆಯದ ದ್ವಾರಗಳಲ್ಲಿ ಸೇರಿ ಯೆಹೋವನನ್ನು ಆರಾಧಿಸುತ್ತಾ, ಕೀರ್ತಿಸುತ್ತಾ, ಕೃತಜ್ಞತಾಸ್ತುತಿಮಾಡುತ್ತಾ ಇರುವುದಕ್ಕೂ ನೇಮಿಸಿದನು.

ಸೇವೆಯ ಸಂಬಂಧವಾದದ್ದೆಲ್ಲವನ್ನೂ ಏರ್ಪಡಿಸಿದನಂತರ ಯಾಜಕರು ತಮ್ಮ ತಮ್ಮ ಸ್ಥಳಗಳಲ್ಲಿಯೂ, ಲೇವಿಯರು ಅರಸನ ಅಪ್ಪಣೆಯಂತೆ ವರ್ಗವರ್ಗಗಳಾಗಿಯೂ ನಿಂತರು;