ಅಹೀಟೂಬನ ಮಗನಾದ ಚಾದೋಕನೂ ಅಹೀಮೆಲೆಕನ ಮಗನಾದ ಎಬ್ಯಾತಾರನೂ ಅವನ ಯಾಜಕರು, ಸೆರಾಯನು ಲೇಖಕನು,
TSK
TSK · 1 ಪೂರ್ವಕಾಲವೃತ್ತಾ 6:53
مراجع Treasury of Scripture Knowledge في ಕನ್ನಡ IRV.
ಅಲ್ಲಿ ನಿನ್ನ ಸಂಗಡ ಚಾದೋಕ್ ಮತ್ತು ಎಬ್ಯಾತಾರನೂ ಇರುತ್ತಾರಲ್ಲಾ. ಅರಮನೆಯಲ್ಲಿ ನಿನಗೆ ಗೊತ್ತಾಗುವ ವರ್ತಮಾನವನ್ನೆಲ್ಲ ಆ ಇಬ್ಬರು ಯಾಜಕರಿಗೆ ತಿಳಿಸು. ಅವರ ಬಳಿಯಲ್ಲಿ ಇಬ್ಬರು ಹುಡುಗರಿದ್ದಾರೆ.
ಶೆವನು ಕಾರ್ಯದರ್ಶಿ, ಚಾದೋಕ್ ಮತ್ತು ಎಬ್ಯಾತಾರರು ಯಾಜಕರು.
ಆದರೆ ಅವನು ನಿನ್ನ ಸೇವಕನಾದ ನನ್ನನ್ನೂ, ಯಾಜಕನಾದ ಚಾದೋಕ್, ಯೆಹೋಯಾದಾವನ ಮಗನಾದ ಬೆನಾಯ ಎಂಬುವರನ್ನೂ ನಿನ್ನ ಮಗನೂ, ಸೇವಕನೂ ಸೊಲೊಮೋನನನ್ನೂ ಔತಣಕ್ಕೆ ಕರೆಯಲಿಲ್ಲ.
ಅರಸನು ಯೋವಾಬನಿಗೆ ಬದಲಾಗಿ ಯೆಹೋಯಾದಾವನ ಮಗನಾದ ಬೆನಾಯನನ್ನು ಸೈನ್ಯಾಧಿಪತಿಯನ್ನಾಗಿಯೂ ಮತ್ತು ಎಬ್ಯಾತಾರನಿಗೆ ಬದಲಾಗಿ ಚಾದೋಕನನ್ನು ಯಾಜಕನನ್ನಾಗಿಯೂ ನೇಮಿಸಿದನು.
ಅಹೀಟೂಬನು ಚಾದೋಕನನ್ನು ಪಡೆದನು; ಚಾದೋಕನು ಅಹೀಮಾಚನನ್ನು ಪಡೆದನು.
ಪ್ರಧಾನನಾದ ಶೆಬೂವೇಲನು ಗೇರ್ಷೋಮನ ಮಗನು.
¶ ಇವರೆಲ್ಲಾ ಲೇವಿ ಸಂತಾನದವರು. ಇವರ ಕುಟುಂಬಗಳಲ್ಲಿ ಎಲ್ಲಾ ಹಿರಿಯರೂ, ಕಿರಿಯರೂ ತಮ್ಮ ಕುಲ ಬಂಧುಗಳಾದ ಆರೋನ್ಯರಂತೆ ಅರಸನಾದ ದಾವೀದ ಚಾದೋಕ್ ಅಹೀಮೆಲೆಕ್ ಇವರ ಮುಂದೆಯೂ, ಯಾಜಕರ ಮತ್ತು ಲೇವಿಯರ ಕುಟುಂಬ ಪ್ರಧಾನರ ಮುಂದೆಯೂ, ಚೀಟಿನಿಂದ ತಮ್ಮಲ್ಲಿ ಸರದಿಗಳನ್ನು ನೇಮಿಸಿಕೊಂಡರು.