¶ “ಆದರೆ ಅವರು ತಾವೂ ಹಾಗು ತಮ್ಮ ಪೂರ್ವಿಕರು ನನಗೆ ದ್ರೋಹಿಗಳಾಗಿ ಪಾಪಮಾಡಿದವರೆಂದೂ ಅರಿಕೆಮಾಡಿದರೆ, ತಾವು ನನಗೆ ವಿರೋಧವಾಗಿ ನಡೆದುದರಿಂದಲೇ
TSK
TSK · 2 ಪೂರ್ವಕಾಲವೃತ್ತಾ 7:14
مراجع Treasury of Scripture Knowledge في ಕನ್ನಡ IRV.
¶ ಆಗ ಅಲ್ಲಿಂದಲಾದರೂ ನೀವು ಸಂಪೂರ್ಣ ಹೃದಯದಿಂದಲೂ, ಪೂರ್ಣ ಮನಸ್ಸಿನಿಂದಲೂ ನಿಮ್ಮ ದೇವರಾದ ಯೆಹೋವನನ್ನು ಹುಡುಕಿದರೆ ಆತನು ನಿಮಗೆ ಸಿಕ್ಕುವನು.
ಪರಲೋಕದಿಂದ ನೀನು ಲಾಲಿಸಿ ನಿನ್ನ ಸೇವಕರು ಪ್ರಜೆಗಳೂ ಆದ ಇಸ್ರಾಯೇಲರ ಪಾಪಗಳನ್ನು ಕ್ಷಮಿಸಿ, ಅವರು ನಡೆಯಬೇಕಾದ ಸನ್ಮಾರ್ಗವನ್ನು ತೋರಿಸಿ, ನಿನ್ನ ಪ್ರಜೆಗಳಿಗೆ ಸ್ವತ್ತಾಗಿ ಕೊಟ್ಟ ದೇಶಕ್ಕೆ ಮಳೆಯನ್ನು ಅನುಗ್ರಹಿಸು.
ತಾವು ಸೆರೆಯವರಾಗಿ ಬಿದ್ದುಕೊಂಡಿರುವ ದೇಶದಲ್ಲಿ ಅವರು ಪಶ್ಚಾತ್ತಾಪಪಟ್ಟು, ನಿನ್ನ ಅನುಗ್ರಹದಿಂದ ತಮ್ಮ ಪೂರ್ವಿಕರಿಗೆ ದೊರಕಿದ ದೇಶದ ಕಡೆಗೂ, ನೀನು ಆರಿಸಿಕೊಂಡ ಪಟ್ಟಣದ ಕಡೆಗೂ, ನಾನು ನಿನ್ನ ಹೆಸರಿನಲ್ಲಿ ಕಟ್ಟಿಸಿರುವ ಈ ಆಲಯದ ಕಡೆಗೂ ತಿರುಗಿಕೊಂಡು, ‘ನಿನ್ನ ಆಜ್ಞೆಗಳನ್ನು ಮೀರಿ ಪಾಪಮಾಡಿ ದ್ರೋಹಿಗಳಾದೆವು’ ಎಂದು ವಿಜ್ಞಾಪನೆ ಮಾಡಿ,
ಆಗ ಯೆಹೂದ್ಯರು ಯೆಹೋವನ ಸಹಾಯವನ್ನು ಕೇಳಿಕೊಳ್ಳುವುದಕ್ಕಾಗಿ ತಮ್ಮ ಎಲ್ಲಾ ಪಟ್ಟಣಗಳಿಂದ ಆತನ ಸನ್ನಿಧಿಯಲ್ಲಿ ಸೇರಿ ಬಂದರು.
¶ ಮನಸ್ಸೆಯ ಉಳಿದ ಚರಿತ್ರೆಯೂ, ಅವನು ತನ್ನ ದೇವರಿಗೆ ಮಾಡಿದ ಪ್ರಾರ್ಥನೆಯೂ ದರ್ಶಕರು ಇಸ್ರಾಯೇಲಿನ ದೇವರಾದ ಯೆಹೋವನ ಹೆಸರಿನಲ್ಲಿ ಅವನಿಗೆ ಹೇಳಿದ ಮಾತುಗಳೂ ಇಸ್ರಾಯೇಲ್ ರಾಜರ ವೃತ್ತಾಂತಗಳಲ್ಲಿ ಬರೆಯಲ್ಪಟ್ಟಿವೆ.
ನೀನು ದೇಶವನ್ನು ಕಂಪನಗೊಳಿಸಿ ಒಡೆದುಬಿಟ್ಟಿದ್ದೀ; ಅದು ನಡುಗುತ್ತಿರುವುದಲ್ಲಾ. ಅದರ ಒಡಕುಗಳನ್ನು ಸರಿಮಾಡು;
ನಾನು ರಹಸ್ಯದಲ್ಲಿ ನುಡಿದವನಲ್ಲ, ಅಧೋಲೋಕದೊಳಗಿಂದ ಮಾತನಾಡಿದವನಲ್ಲ. ಶೂನ್ಯವನ್ನೋ ಎಂಬಂತೆ, ‘ನನ್ನನ್ನು ಹುಡುಕಿರಿ’ ಎಂದು ಯಾಕೋಬ ವಂಶದವರಿಗೆ ನಾನು ಅಪ್ಪಣೆಕೊಡಲಿಲ್ಲ. ಯೆಹೋವನೆಂಬ ನಾನು ಸತ್ಯಾನುಸಾರ ನುಡಿಯುವವನು, ಸರಿಯಾದ ಮಾತುಗಳನ್ನೇ ಆಡುತ್ತೇನೆ.
“ಒಬ್ಬ ವಿಮೋಚಕನು ಚೀಯೋನಿಗೂ, ದ್ರೋಹವನ್ನು ಬಿಟ್ಟುಬಿಟ್ಟ ಯಾಕೋಬ್ಯರ ಬಳಿಗೂ ಬರುವನು”, ಯೆಹೋವನೇ ಇದನ್ನು ನುಡಿದಿದ್ದಾನೆ.
ಗಿಲ್ಯಾದಿನಲ್ಲಿ ಔಷಧವಿಲ್ಲವೋ? ಅಲ್ಲಿ ವೈದ್ಯನು ಸಿಕ್ಕನೋ? ನನ್ನ ಪ್ರಜೆಯೆಂಬಾಕೆಗೆ ಏಕೆ ಗುಣವಾಗಲಿಲ್ಲ?
ಇಗೋ, ನಾನು ಈ ಪಟ್ಟಣವನ್ನು ಜೀರ್ಣೋದ್ಧಾರಮಾಡಿ, ಅದಕ್ಕೆ ಸಮಾಧಾನವನ್ನು ಕೊಟ್ಟು, ನಿವಾಸಿಗಳನ್ನು ಗುಣಪಡಿಸುವೆನು. ಸ್ಥೈರ್ಯ ಸಮಾಧಾನಗಳನ್ನು ಸಮೃದ್ಧಿಯಾಗಿ ಅವರ ಅನುಭವಕ್ಕೆ ತರುವೆನು.
ಬಾಬೆಲನ್ನು ಸ್ವಸ್ಥಮಾಡುವುದಕ್ಕೆ ನಾವು ಪ್ರಯತ್ನಪಟ್ಟರೂ ಅದು ಸ್ವಸ್ಥವಾಗಲಿಲ್ಲ; ಬಾಬೆಲನ್ನು ಬಿಟ್ಟು ನಾವೆಲ್ಲರೂ ನಮ್ಮ ನಮ್ಮ ದೇಶಗಳಿಗೆ ಹೋಗೋಣ; ಅದು ಹೊಂದಬೇಕಾದ ದಂಡನೆಯು ಆಕಾಶವನ್ನು ಮುಟ್ಟುವಷ್ಟು ದೊಡ್ಡದಾಗಿದೆ, ಹೌದು, ಗಗನದವರೆಗೂ ಬೆಳೆದಿದೆ.
ದುಷ್ಟನು ತಾನು ಮಾಡುತ್ತಿದ್ದ ದುಷ್ಟತನವನ್ನು ಬಿಟ್ಟು, ನೀತಿನ್ಯಾಯಗಳನ್ನು ನಡೆಸಿದರೆ ತನ್ನ ಪ್ರಾಣವನ್ನು ಉಳಿಸಿಕೊಳ್ಳುವನು.
ನರಪುತ್ರನೇ, ನಿನ್ನ ಜನರಿಗೆ ಹೀಗೆ ಹೇಳು, “ನೀತಿವಂತನು ದ್ರೋಹಮಾಡಿದ್ದಲ್ಲಿ ಅವನ ನೀತಿಯು ಅವನನ್ನು ಉದ್ಧರಿಸುವುದಿಲ್ಲ; ದುಷ್ಟನು ತನ್ನ ದುಷ್ಟತನವನ್ನು ಬಿಟ್ಟಲ್ಲಿ, ಅವನ ಪಾಪವು ಅವನನ್ನು ಬೀಳಿಸುವುದಿಲ್ಲ; ನೀತಿವಂತನು ಪಾಪಮಾಡಿದಲ್ಲಿ ಅವನ ನೀತಿಯು ಅವನನ್ನು ಬದುಕಿಸುವುದಿಲ್ಲ.
ದುಃಖಿಸಿರಿ, ಗೋಳಾಡಿರಿ, ಕಣ್ಣೀರಿಡಿರಿ; ನಿಮ್ಮ ನಗುವನ್ನು ಬಿಟ್ಟು ಗೋಳಾಡಿರಿ. ಸಂತೋಷವನ್ನು ಬಿಟ್ಟು ಶೋಕಿಸಿರಿ.