¶ ಸಿಬೆಯೋನನ ಮಕ್ಕಳು: ಅಯ್ಯಾ ಮತ್ತು ಅನಾಹ ಎಂಬವರು. ಈ ಅನಾಹನೇ ತನ್ನ ತಂದೆಯಾದ ಸಿಬಿಯೋನನ ಕತ್ತೆಗಳನ್ನು ಮೇಯಿಸುತ್ತಿದ್ದಾಗ ಕಾಡಿನಲ್ಲಿ ಬಿಸಿ ನೀರಿನ ಒರತೆಗಳನ್ನು ಕಂಡುಕೊಂಡವನು.
TSK
TSK · 2 ಸಮುವೇಲನು 13:29
مراجع Treasury of Scripture Knowledge في ಕನ್ನಡ IRV.
ಆದ್ದರಿಂದ ಸೌಲನು ಎದೋಮ್ಯನಾದ ದೋಯೇಗನಿಗೆ, “ನೀನು ಹೋಗಿ ಅವರನ್ನು ಕೊಲ್ಲು” ಎಂದು ಆಜ್ಞಾಪಿಸಲು, ಅವನು ನಾರು ಬಟ್ಟೆಯ ಎಪೋದನ್ನು ಧರಿಸಿಕೊಂಡಿದ್ದ ಎಂಭತ್ತೈದು ಯಾಜಕರನ್ನು ಆ ದಿನ ಕೊಂದುಹಾಕಿದನು.
“ನಾನು ವಿಧವೆ, ಗಂಡನು ಸತ್ತು ಹೋಗಿದ್ದಾನೆ. ನಿನ್ನ ದಾಸಿಯಾದ ನನಗೆ ಇಬ್ಬರು ಮಕ್ಕಳಿದ್ದರು. ಒಂದು ದಿನ ಅವರಿಬ್ಬರೂ ಹೊಲದಲ್ಲಿ ಜಗಳವಾಡಿದರು. ಅಲ್ಲಿ ಬಿಡಿಸುವವರು ಯಾರೂ ಇರಲಿಲ್ಲವಾದ್ದರಿಂದ ಒಬ್ಬನು ಇನ್ನೊಬ್ಬನನ್ನು ಹೊಡೆದು ಕೊಂದನು.
ಅರಸನು ಅವರಿಗೆ, “ನೀವು ನನ್ನ ಸೇವಕರನ್ನು ಕರೆದುಕೊಂಡು ನನ್ನ ಮಗನಾದ ಸೊಲೊಮೋನನನ್ನು ನನ್ನ ಹೇಸರಗತ್ತೆಯ ಮೇಲೆ ಕುಳ್ಳಿರಿಸಿಕೊಂಡು ಗೀಹೋನ್ ಬುಗ್ಗೆಗೆ ಹೋಗಿರಿ.
¶ ಆಗ ಅರಸನು ಎಲೀಯನನ್ನು ಕರೆತರುವುದಕ್ಕಾಗಿ ಪಂಚದಶಾಧಿಪತಿಯನ್ನು, ಅವನ ಐವತ್ತು ಮಂದಿ ಸಿಪಾಯಿಗಳೊಡನೆ ಕಳುಹಿಸಿದನು. ಇವನು ಹೋಗಿ ಎಲೀಯನು ಬೆಟ್ಟದ ತುದಿಯಲ್ಲಿ ಕುಳಿತಿರುವುದನ್ನು ಕಂಡು ಅವನಿಗೆ, “ದೇವರ ಮನುಷ್ಯನೇ ಇಳಿದು ಬಾ ಅರಸನು ನಿನ್ನನ್ನು ಕರೆಯುತ್ತಾನೆ” ಎಂದು ಹೇಳಿದನು.
ಎರಡು ಕೈಗಳನ್ನು ಹಾಕಿ ಕೆಟ್ಟ ಕೆಲಸವನ್ನು ಚೆನ್ನಾಗಿ ಮಾಡುತ್ತಾರೆ. ಪ್ರಭುವು ಧನವನ್ನು ಕೇಳುತ್ತಾನೆ. ನ್ಯಾಯಾಧಿಪತಿಯು ಲಂಚಕ್ಕೆ ಕೈಯೊಡ್ಡುತ್ತಾನೆ. ದೊಡ್ಡ ಮನುಷ್ಯನು ತನ್ನ ದುರಾಶೆಯನ್ನು ತಿಳಿಸುತ್ತಾನೆ. ಹೀಗೆ ಕುಯುಕ್ತಿಯನ್ನು ಹೆಣೆಯುತ್ತಾರೆ.