ಜೆಬುಲೂನ್ಯರಿಂದ ಯುದ್ಧಪ್ರವೀಣರೂ, ಸರ್ವಾಯುಧಗಳನ್ನು ಧರಿಸಿ ವ್ಯೂಹಕಟ್ಟ ಬಲ್ಲವರೂ, ದೃಢಚಿತ್ತರೂ ಆದರು ಐವತ್ತು ಸಾವಿರ ಸೈನಿಕರು.
TSK
TSK · ಎಸ್ತೇರಳು 1:13
مراجع Treasury of Scripture Knowledge في ಕನ್ನಡ IRV.
ಆಗ ರಾಜನು ತನ್ನ ಕನಸುಗಳ ಅಭಿಪ್ರಾಯವನ್ನು ತಿಳಿದುಕೊಳ್ಳಲು ಜೋಯಿಸರನ್ನೂ, ಮಂತ್ರವಾದಿಗಳನ್ನೂ, ಮಾಟಗಾರರನ್ನೂ, ಪಂಡಿತರನ್ನೂ ಕರೆಯಿಸಲು ಅವರು ಸನ್ನಿಧಿಗೆ ಬಂದು ರಾಜನ ಮುಂದೆ ನಿಂತುಕೊಂಡರು.
¶ ಅದಕ್ಕೆ ದಾನಿಯೇಲನು ರಾಜನನ್ನು ಕುರಿತು, “ರಾಜನು ಕೇಳುವ ರಹಸ್ಯವನ್ನು ವಿದ್ವಾಂಸರಾಗಲಿ, ಮಾಟಗಾರರಾಗಲಿ, ಜೋಯಿಸರಾಗಲಿ, ಶಕುನದವರಾಗಲಿ ಯಾರೂ ರಾಜನಿಗೆ ತಿಳಿಸಲಾರರು.
¶ ಹೀಗಿರಲು ರಾಜನು ಗಟ್ಟಿಯಾಗಿ ಕೂಗಿಕೊಂಡು ಮಂತ್ರವಾದಿ, ಪಂಡಿತ, ಶಾಕುನಿಕರನ್ನು ಕರೆಯಿಸಿ ಬಾಬೆಲಿನ ಆ ವಿದ್ವಾಂಸರಿಗೆ, “ಯಾರು ಈ ಬರಹವನ್ನು ಓದಿ, ಇದರ ಅರ್ಥವನ್ನು ನನಗೆ ತಿಳಿಸುತ್ತಾನೋ ಅವನಿಗೆ ನಾನು ಧೂಮ್ರವಸ್ತ್ರವನ್ನು ಹೊದಿಸಿ, ಅವನ ಕೊರಳಿಗೆ ಚಿನ್ನದ ಹಾರವನ್ನು ಹಾಕಿಸಿ, ಅವನನ್ನು ರಾಜ್ಯದ ಮೂವರು ಮುಖ್ಯಾಧಿಕಾರಿಗಳಲ್ಲಿ ಒಬ್ಬನನ್ನಾಗಿ ನೇಮಿಸುವೆನು” ಎಂದು ಹೇಳಿದನು.
‹ಬೆಳಗ್ಗೆ, ‘ಆಕಾಶವು ಮೋಡ ಕವಿದುಕೊಂಡು ಕೆಂಪಾಗಿದ್ದರೆ ಈಹೊತ್ತು ಗಾಳಿ ಮಳೆ ಬರುತ್ತದೆ’ ಅನ್ನುತ್ತೀರಿ. ಆಕಾಶದಲ್ಲಿ ಕಾಣುವ ಸೂಚನೆಗಳನ್ನು ತಿಳಿದುಕೊಳ್ಳಬಲ್ಲವರಾಗಿದ್ದೀರಿ, ಆದರೆ ಈ ಕಾಲದ ಸೂಚನೆಗಳನ್ನು ತಿಳಿದುಕೊಳ್ಳಲು ನಿಮಗೆ ಸಾಧ್ಯವಿಲ್ಲವೋ?›