TSK

TSK · ಆದಿಕಾಂಡ 44:20

مراجع Treasury of Scripture Knowledge في ಕನ್ನಡ IRV.

العودة إلى المقطع

¶ ಯೋಸೇಫನು ಇಸ್ರಾಯೇಲನಿಗೆ ಮುಪ್ಪಿನಲ್ಲಿ ಹುಟ್ಟಿದವನಾಗಿದ್ದುದರಿಂದ ಅವನನ್ನು ತನ್ನ ಎಲ್ಲಾ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದನು, ಅಲ್ಲದೆ ಅವನಿಗೆ ಬಣ್ಣಬಣ್ಣದ ಒಂದು ನಿಲುವಂಗಿಯನ್ನು ಹೊಲಿಸಿ ಕೊಟ್ಟಿದ್ದನು.

¶ ಯಾಕೋಬನು ಅದರ ಗುರುತು ಹಿಡಿದು, “ಈ ಅಂಗಿ ನನ್ನ ಮಗನದೇ ಹೌದು, ಕಾಡುಮೃಗವು ಅವನನ್ನು ಕೊಂದು ತಿಂದು ಬಿಟ್ಟಿದೆ. ಯೋಸೇಫನನ್ನು ಸಂದೇಹವಿಲ್ಲದೆ ಸೀಳಿಹಾಕಿರಬೇಕು” ಎಂದು ಹೇಳಿದನು.

ಆಗ ಅವರ ತಂದೆಯಾದ ಯಾಕೋಬನು, “ಅವರಿಗೆ ನನ್ನನ್ನು ಮಕ್ಕಳಿಲ್ಲದವನಂತೆ ಮಾಡಿದ್ದೀರಿ. ಯೋಸೇಫನು ಇಲ್ಲ, ಸಿಮೆಯೋನನು ಇಲ್ಲ. ಬೆನ್ಯಾಮೀನನ್ನೂ ಕರೆದುಕೊಂಡು ಹೋಗಬೇಕೆಂದಿದ್ದೀರಿ. ಈ ಕಷ್ಟವೆಲ್ಲಾ ನನ್ನ ಮೇಲೆಯೇ ಬಂದಿತಲ್ಲಾ” ಎಂದು ಹೇಳಿದನು.

¶ ಅವರು, “ನಮ್ಮ ವಿಷಯದಲ್ಲಿಯೂ ನಮ್ಮ ಮನೆಯವರ ವಿಷಯದಲ್ಲಿಯೂ ಆ ಮನುಷ್ಯನು ಸೂಕ್ಷ್ಮವಾಗಿ ವಿಚಾರಿಸಿದನು, ಮತ್ತೆ ಅವನು ನಿಮ್ಮ ತಂದೆಯು ಇನ್ನೂ ಬದುಕಿದ್ದಾನೋ? ನಿಮಗೆ ಇನ್ನೊಬ್ಬ ತಮ್ಮನಿದ್ದಾನೋ? ಎಂದು ಕೇಳಿದನು. ಆ ಪ್ರಶ್ನೆಗಳಿಗೆ ತಕ್ಕಂತೆ ನಾವು ಉತ್ತರಕೊಟ್ಟೆವು. ಅವನು ನಿಮ್ಮ ತಮ್ಮನನ್ನು ಕರೆದುಕೊಂಡು ಬನ್ನಿರಿ ಎಂದು ಹೇಳುವನೆಂದು ನಮಗೆ ಹೇಗೆ ತಿಳಿಯುವುದು” ಎಂದರು.

¶ ಬೆನ್ಯಾಮೀನನ ಮಕ್ಕಳು: ಬಿಳಾ, ಬೆಕೆರ್, ಅಶ್ಬೇಲ್, ಗೇರಾ, ನಾಮಾನ್, ಏಹೀ, ರೋಷ್, ಮುಪ್ಪೀಮ್, ಹುಪ್ಪೀಮ್, ಆರ್ದ್.

ಆತನು ಊರು ಬಾಗಿಲಿನ ಹತ್ತಿರಕ್ಕೆ ಬಂದಾಗ ಸತ್ತುಹೋಗಿದ್ದ ಒಬ್ಬನನ್ನು ಹೊತ್ತುಕೊಂಡು ಹೊರಗೆ ತರುತ್ತಿದ್ದರು. ಅವನು ತನ್ನ ತಾಯಿಗೆ ಒಬ್ಬನೇ ಮಗನಾಗಿದ್ದನು; ಆಕೆಯು ವಿಧವೆಯಾಗಿದ್ದಳು. ಆಕೆಯ ಸಂಗಡ ಊರಿನವರು ಅನೇಕರಿದ್ದರು.