ಫಿಲಿಷ್ಟಿಯರಲ್ಲಿ ಕೆಲವರು ಯೆಹೋಷಾಫಾಟನಿಗೆ ಕಾಣಿಕೆಯನ್ನೂ, ಕಪ್ಪವನ್ನಾಗಿ ಬೆಳ್ಳಿಯನ್ನೂ ತಂದುಕೊಡುತ್ತಿದ್ದರು. ಅರಬಿಯರು ತಮ್ಮ ಪಶುಪ್ರಾಣಿಗಳ ಹಿಂಡುಗಳಿಂದ ಏಳು ಸಾವಿರದ ಏಳು ನೂರು ಟಗರುಗಳನ್ನೂ, ಏಳು ಸಾವಿರದ ಏಳು ನೂರು ಆಡುಗಳನ್ನೂ ಕೊಡುತ್ತಿದ್ದರು.
TSK
TSK · ಯೆಶಾಯ 13:20
مراجع Treasury of Scripture Knowledge في ಕನ್ನಡ IRV.
“ನಾನು ಆ ಪ್ರದೇಶವನ್ನು ಜವುಗು ನೆಲವನ್ನಾಗಿಯೂ, ಗೂಬೆಗಳ ಸೊತ್ತನ್ನಾಗಿಯೂ ಮಾಡುವೆನು. ನಾಶವೆಂಬ ಬರಲಿನಿಂದ ಗುಡಿಸಿಬಿಡುವೆನು” ಎಂದು ಸೇನಾಧೀಶ್ವರನಾದ ಯೆಹೋವನು ಹೇಳುತ್ತಾನೆ.
ಅದು ಹಗಲಿರುಳೂ ಆರುವುದಿಲ್ಲ. ಅದರ ಹೊಗೆಯು ನಿರಂತರವಾಗಿ ಏರುತ್ತಿರುವುದು. ದೇಶವು ತಲತಲಾಂತರಕ್ಕೂ ಹಾಳು ಬಿದ್ದಿರುವುದು, ಯುಗಯುಗಾಂತರಕ್ಕೂ ಅಲ್ಲಿ ಯಾರೂ ಹಾದು ಹೋಗರು.
ಒಂದು ಜನಾಂಗವು ಉತ್ತರ ದಿಕ್ಕಿನಿಂದ ಬಾಬೆಲಿನ ಮೇಲೆ ಬರುತ್ತಿದೆ, ಅದು ಬಾಬೆಲ್ ದೇಶವನ್ನು ಹಾಳುಮಾಡುವುದು, ಅಲ್ಲಿ ಯಾರೂ ವಾಸಿಸರು, ಪಶುಗಳೂ ಜನರೂ ಓಡಿಹೋಗಿದ್ದಾರೆ, ತೊಲಗಿಬಿಟ್ಟಿದ್ದಾರೆ.
ಯೆಹೋವನು ಇಂತೆನ್ನುತ್ತಾನೆ, “ಮೆರಾಥಯಿಮ್ ದೇಶಕ್ಕೂ ಮತ್ತು ಪೆಕೋದಿನ ನಿವಾಸಿಗಳಿಗೂ ವಿರುದ್ಧವಾಗಿ ದಂಡೆತ್ತಿ ಹೋಗಿ, ಅವರನ್ನು ಸಂಹರಿಸಿ, ಅನಂತರ ದೇಶವನ್ನು ತೀರಾ ಹಾಳುಮಾಡಿ, ನಾನು ನಿನಗೆ ಆಜ್ಞಾಪಿಸಿದ್ದನ್ನೆಲ್ಲಾ ನೆರವೇರಿಸು.
ಹೀಗಿರಲು ಯೆಹೋವನು ಬಾಬೆಲಿನ ವಿಷಯವಾಗಿ ಮಾಡಿಕೊಂಡಿರುವ ಆಲೋಚನೆಯನ್ನೂ, ಆತನು ಕಸ್ದೀಯರ ದೇಶವನ್ನು ಕುರಿತು ಸಂಕಲ್ಪಿಸಿರುವ ಉದ್ದೇಶವನ್ನೂ ಆಲಿಸಿರಿ, ಮೃಗಗಳು ಹಿಂಡಿನ ಮರಿಗಳನ್ನು ಖಂಡಿತವಾಗಿ ಎಳೆದುಕೊಂಡು ಹೋಗುವವು; ನಿಶ್ಚಯವಾಗಿ ಅವುಗಳ ಹುಲ್ಗಾವಲು ಅವುಗಳ ನಾಶಕ್ಕೆ ಬೆದರುವುದು.
ದೇಶವೆಲ್ಲಾ ನೊಂದು ನಡುಗುತ್ತದೆ; ಏಕೆಂದರೆ ಬಾಬೆಲ್ ದೇಶವು ಹಾಳುಬಿದ್ದು ನಿರ್ಜನವಾಗಲಿ ಎಂದು ಯೆಹೋವನು ಅದರ ವಿಷಯವಾಗಿ ಮಾಡಿಕೊಂಡಿರುವ ಸಂಕಲ್ಪಗಳು ಸ್ಥಿರವಾಗಿವೆ.
ಅದರ ಪಟ್ಟಣಗಳು ಕಾಡು, ಕಗ್ಗಾಡು, ಬೆಗ್ಗಾಡೂ ಆಗಿವೆ. ಆ ದೇಶದಲ್ಲಿ ಯಾರೂ ವಾಸಿಸರು, ಯಾವ ಮನುಷ್ಯನೂ ಹಾದು ಹೋಗನು.
¶ ಆಗ ಬಲಿಷ್ಠನಾದ ಒಬ್ಬ ದೇವದೂತನು ದೊಡ್ಡ ಬೀಸುವ ಕಲ್ಲಿನಂತಿರುವ ಒಂದು ಕಲ್ಲನ್ನು ತೆಗೆದುಕೊಂಡು ಸಮುದ್ರದೊಳಗೆ ಬಿಸಾಡಿ, “ಮಹಾಪಟ್ಟಣವಾದ ಬಾಬೆಲನ್ನು ಹೀಗೆ ಹಿಂಸಾಚಾರದಿಂದ ಬಿಸಾಡುವನು. ಅದು ಇನ್ನೆಂದಿಗೂ ಕಾಣಿಸುವುದಿಲ್ಲ.