TSK

TSK · ಯೆರೆಮಿಯ 23:39

مراجع Treasury of Scripture Knowledge في ಕನ್ನಡ IRV.

العودة إلى المقطع

ನಾನು ನಿಮ್ಮ ಮೇಲೆ ಕೋಪಗೊಂಡವನಾಗಿ ನಿಮ್ಮ ಪಾಪಗಳ ನಿಮಿತ್ತ ಏಳರಷ್ಟಾಗಿ ಶಿಕ್ಷಿಸುವೆನು.

ಯೆಹೋವನು, “ಇಸ್ರಾಯೇಲರನ್ನು ತೆಗೆದುಹಾಕಿದಂತೆ, ಯೆಹೂದ್ಯರನ್ನೂ ನನ್ನ ಸನ್ನಿಧಿಯಿಂದ ತೆಗೆದುಹಾಕುವೆನು, ನಾನು ಆರಿಸಿಕೊಂಡ ಯೆರೂಸಲೇಮ್ ಪಟ್ಟಣವನ್ನೂ ನನ್ನ ನಾಮದ ಮಹಿಮೆಗಾಗಿ ಸ್ವೀಕರಿಸಿಕೊಂಡ ದೇವಾಲಯವನ್ನೂ ತಿರಸ್ಕರಿಸುವೆನು” ಎಂದು ಹೇಳಿದನು.

ದೇವರ ವಾಕ್ಯವನ್ನು ಉಲ್ಲಂಘಿಸುವವನು ನಾಶವಾಗುವನು, ಆಜ್ಞೆಯನ್ನು ಭಯಭಕ್ತಿಯಿಂದ ಕೈಕೊಳ್ಳುವವನು ಸಫಲವನ್ನು ಹೊಂದುವನು.

ನಾನೇ, ನಾನೇ ನಿನ್ನನ್ನು ಸಂತೈಸುವವನು. ಮರ್ತ್ಯಮನುಷ್ಯನಿಗೆ, ಹುಲ್ಲಿನ ಗತಿಗೆ ಬರುವ ನರಜನ್ಮದವನಿಗೆ ಭಯಪಡುವ ನೀನು ಎಂಥವನು?

¶ ಪ್ರವಾದಿಯಾಗಲಿ ಅಥವಾ ಯಾಜಕನಾಗಲಿ ಈ ಜನರಲ್ಲಿ ಯಾರೇ ಆಗಲಿ “ಯೆಹೋವನು ದಯಪಾಲಿಸಿರುವ ವಾಕ್ಯದ ಆಧಾರವೇನು?” ಎಂದು ನಿನ್ನನ್ನು ಕೇಳಿದರೆ ನೀನು ಅವರಿಗೆ ಹೀಗೆ ಹೇಳು, “ಯೆಹೋವನು ಇಂತೆನ್ನುತ್ತಾನೆ, ನೀವೇ ನನ್ನ ಹೊರೆ, ನಾನು ನಿಮ್ಮನ್ನು ಎಸೆದುಬಿಡುವೆನು.

ಈ ಪಟ್ಟಣವು ಕಟ್ಟಿದಂದಿನಿಂದ ಇಂದಿನವರೆಗೂ ನನ್ನ ಕೋಪರೋಷಗಳಿಗೆ ಆಸ್ಪದವಾಗಿದೆ.

ಇವನೂ, ಇವನ ಸಂತತಿಯವರೂ ಮತ್ತು ಸೇವಕರೂ ನಡೆಸಿದ ಅಧರ್ಮಕ್ಕಾಗಿ ಇವರನ್ನು ದಂಡಿಸುವೆನು. ನಾನು ಇವರನ್ನೂ, ಯೆರೂಸಲೇಮಿನವರನ್ನೂ ಮತ್ತು ಯೆಹೂದ್ಯರನ್ನೂ ನಿಮಗೆ ಬಹು ಕೇಡಾಗುವುದೆಂದು ಎಚ್ಚರಿಸಿದರೂ ಇವರುಗಳು ಕೇಳಲಿಲ್ಲವಾದುದರಿಂದ ಆ ಕೇಡನ್ನೆಲ್ಲಾ ಇವರೆಲ್ಲರ ಮೇಲೆ ಬರಮಾಡುವೆನು’” ಎಂದು ಹೇಳಿದನು.

ನೀನು ನಮ್ಮನ್ನು ಸಂಪೂರ್ಣವಾಗಿ ಮರೆತಿರುವುದೇಕೆ? ಏಕೆ ನಮ್ಮನ್ನು ಇಷ್ಟುಕಾಲ ಕೈಬಿಟ್ಟಿದ್ದೀ?

‘ಇಸ್ರಾಯೇಲಿನ ಬೆಟ್ಟಗಳೇ, ಕರ್ತನಾದ ಯೆಹೋವನ ಈ ಮಾತನ್ನು ಕೇಳಿರಿ; ಕರ್ತನಾದ ಯೆಹೋವನು ಬೆಟ್ಟಗುಡ್ಡಗಳಿಗೂ, ತೊರೆತಗ್ಗುಗಳಿಗೂ ಹೀಗೆ ಹೇಳುತ್ತಾನೆ: ಇಗೋ, ನಾನೇ ನಿಮ್ಮ ಮೇಲೆ ಖಡ್ಗವನ್ನು ಬರಮಾಡಿ ನಿಮ್ಮ ಪೂಜಾಸ್ಥಳಗಳನ್ನು ನಾಶಪಡಿಸುವೆನು.

ಆಗ ಅವರು ದೇವಾಲಯದ ಮುಂದೆ ಇದ್ದ ಹಿರಿಯರನ್ನು ಮೊದಲುಗೊಂಡು ಹತಿಸತೊಡಗಿದರು.

¶ “‘ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಇಗೋ, ನಾನೇ ಕೊಬ್ಬಿದ ಟಗರುಹೋತಗಳಿಗೂ, ಬಡ ಕುರಿಮೇಕೆಗಳಿಗೂ ನ್ಯಾಯತೀರಿಸುತ್ತೇನೆ.

ನಾನು ಎಫ್ರಾಯೀಮಿಗೆ ಸಿಂಹವೂ, ಯೆಹೂದ ಕುಲಕ್ಕೆ ಪ್ರಾಯದ ಸಿಂಹವೂ ಆಗುವೆನು; ನಾನೇ ಸೀಳಿಬಿಟ್ಟು ಹೋಗುವೆನು, ನಾನು ಎತ್ತಿಕೊಂಡು ಹೋಗಲು ಯಾರೂ ಬಿಡಿಸರು.

‹ಆ ಮೇಲೆ ಆತನು ಎಡಗಡೆಯಲ್ಲಿರುವವರಿಗೆ, ‘ಶಾಪಗ್ರಸ್ತರೇ, ನನ್ನನ್ನು ಬಿಟ್ಟು ಪಿಶಾಚಿಗೂ ಅವನ ದೂತರಿಗೂ ಸಿದ್ಧಮಾಡಿರುವ ನಿತ್ಯ ಬೆಂಕಿಯೊಳಕ್ಕೆ ಹೋಗಿರಿ.›