TSK

TSK · ಯೋಬನು 39:5

مراجع Treasury of Scripture Knowledge في ಕನ್ನಡ IRV.

العودة إلى المقطع

ಆ ಮನುಷ್ಯ ಕಾಡು ಕತ್ತೆಯಂತೆ ಇರುವನು. ಅವನು ಎಲ್ಲರ ಮೇಲೆ ಕೈಯೆತ್ತುವನು; ಹಾಗೆಯೇ ಅವನ ಮೇಲೆ ಎಲ್ಲರೂ ಕೈಯೆತ್ತುವರು. ತನ್ನ ಅಣ್ಣತಮ್ಮಂದಿರಿಗೆ ಎದುರಾಗಿ ವಾಸವಾಗಿರುವನು” ಎಂದು ಹೇಳಿ ಹೋದನು.

ಕಾಡುಕತ್ತೆಗೆ ಹುಲ್ಲಿರಲು ಅರಚೀತೇ? ಎತ್ತಿಗೆ ಮೇವಿರಲು ಕೂಗೀತೇ?

ಇಗೋ, ಅಡವಿಯಲ್ಲಿ ಕಾಡುಕತ್ತೆಗಳು ಹೇಗೋ ಹಾಗೆಯೇ, ಇವರು ತಮ್ಮ ಹೊಟ್ಟೇ ಪಾಡಿಗಾಗಿ ಹೊರಟು ಆಹಾರವನ್ನು ಆತುರವಾಗಿ ಹುಡುಕುವರು; ಅರಣ್ಯವೇ ಇವರ ಮಕ್ಕಳಿಗಾಗಿ ಆಹಾರವನ್ನು ಒದಗಿಸುವುದು.

ಅವು ಅಡವಿಯ ಮೃಗಗಳಿಗೆ ನೀರುಕೊಡುತ್ತವೆ; ಕಾಡುಕತ್ತೆಗಳು ದಾಹ ತೀರಿಸಿಕೊಳ್ಳುತ್ತವೆ.

ನೀನು ಮದದಿಂದ ಗಾಳಿಯನ್ನು ಬುಸುಬುಸನೆ ಮೂಸಿ ನೋಡುವ ಅಡವಿಯ ಹೆಣ್ಣು ಕಾಡುಕತ್ತೆಯ ಹಾಗಿದ್ದಿ; ಅದಕ್ಕೆ ಬೆದೆ ಏರಿದಾಗ ಯಾವ ಗಂಡು ಕತ್ತೆಯೂ ಅದನ್ನು ಬದಿಗೆ ನೂಕುವುದಿಲ್ಲ. ಆಯಾ ತಿಂಗಳಿನಲ್ಲಿ ಅದನ್ನು ಹುಡುಕುವವುಗಳೆಲ್ಲಾ ಆಯಾಸಗೊಳ್ಳದೆ ಅದನ್ನು ದೊರಕಿಸಿಕೊಳ್ಳುವವು.

ಅವನು ನರಜಾತಿಯವರೊಳಗಿಂದ ನೂಕಲ್ಪಟ್ಟನು, ಅವನ ಬುದ್ಧಿಯು ಮೃಗದ ಬುದ್ಧಿಯಂತಾಯಿತು, ಕಾಡು ಕತ್ತೆಗಳೊಂದಿಗೆ ವಾಸಿಸಿದನು. ಪರಾತ್ಪರನಾದ ದೇವರು ಮನುಷ್ಯರ ರಾಜ್ಯದಲ್ಲಿ ರಾಜನಾಗಿ ಅದರ ಮೇಲೆ ತನಗೆ ಬೇಕಾದವರನ್ನು ನೇಮಿಸುತ್ತಾನೆ ಎಂಬುದು ಅವನಿಗೆ ತಿಳಿದುಬರುವ ತನಕ ದನಗಳಂತೆ ಹುಲ್ಲು ಮೇಯುವುದೇ ಅವನ ಗತಿಯಾಯಿತು, ಆಕಾಶದ ಇಬ್ಬನಿಯು ಅವನ ಮೈಯನ್ನು ತೋಯಿಸುತ್ತಿತ್ತು.