TSK

TSK · ಮಿಕ 7:2

مراجع Treasury of Scripture Knowledge في ಕನ್ನಡ IRV.

العودة إلى المقطع

ಯೆಹೋವನ ಸಾನ್ನಿಧ್ಯವಿಲ್ಲದಿರುವ ದೇಶದಲ್ಲಿ ನನ್ನ ರಕ್ತವು ಸುರಿಸಲ್ಪಡದಿರಲಿ. ಅಯ್ಯೋ ಗುಡ್ಡಗಳಲ್ಲಿ ಕೌಜುಗವನ್ನು ಹಿಡಿಯಲು ಹೊರಟ ಬೇಟೆಗಾರನೋ ಎಂಬಂತೆ ಇಸ್ರಾಯೇಲರ ಅರಸನು ಹೊರಟು ಬಂದು ನನ್ನ ಪ್ರಾಣವನ್ನು ತೆಗೆಯಬೇಕೆಂದಿರುತ್ತಾನಲ್ಲ” ಅಂದನು.

ಯೆಹೋವನೇ, ರಕ್ಷಿಸು; ಭಕ್ತರು ಮುಗಿದು ಹೋಗಿದ್ದಾರೆ. ಜನರೊಳಗೆ ನಂಬಿಗಸ್ತರನ್ನು ಕಾಣುವುದೇ ಇಲ್ಲ.

ದುರ್ಮತಿಗಳು ತಮ್ಮ ಮನಸ್ಸಿನಲ್ಲಿ, “ದೇವರೇ ಇಲ್ಲ” ಎಂದು ಅಂದುಕೊಳ್ಳುತ್ತಾರೆ; ಅವರು ಕೆಟ್ಟುಹೋದವರು; ಹೇಯವಾದ ಅಕ್ರಮಗಳನ್ನು ನಡೆಸುತ್ತಾರೆ. ಅವರಲ್ಲಿ ಒಳ್ಳೆಯದನ್ನು ಮಾಡುವವರೇ ಇಲ್ಲ.

ಅವರು, “ನಮ್ಮೊಂದಿಗೆ ಬಾ, ರಕ್ತಕ್ಕಾಗಿ ಹೊಂಚುಹಾಕೋಣ, ನಿರಪರಾಧಿಯನ್ನು ಕಾರಣವಿಲ್ಲದೆಯೇ ಹಿಡಿಯುವುದಕ್ಕೆ ಕಾದಿರೋಣ.

ಪ್ರಜೆಗಳು ಪರಸ್ಪರ ವಿರೋಧಿಗಳಾಗಿ, ಒಬ್ಬರನೊಬ್ಬರು ಹಿಂಸಿಸುವರು, ಬಾಲಕರು ಹಿರಿಯರ ಮೇಲೆಯೂ, ನೀಚನು ಘನವಂತನ ಜೊತೆಯಲ್ಲಿ ಸೊಕ್ಕಿನಿಂದ ವರ್ತಿಸುವರು.

ಇವರ ಕಾಲುಗಳು ಕೇಡನ್ನು ಹಿಂಬಾಲಿಸಿ ಓಡುತ್ತವೆ, ಇವರು ನಿರಪರಾಧಿಯ ರಕ್ತವನ್ನು ಸುರಿಸಲು ಆತುರಪಡುತ್ತಾರೆ, ಇವರ ಯೋಚನೆಗಳು ಅಧರ್ಮದ ಯೋಚನೆಗಳೇ, ಇವರು ಹೋದ ದಾರಿಗಳಲ್ಲಿ ನಷ್ಟವೂ, ನಾಶನವೂ ಉಂಟಾಗುತ್ತವೆ;

ನನ್ನ ಜನರಲ್ಲಿ ದುಷ್ಟರು ಕಂಡು ಬಂದಿದ್ದಾರೆ; ಬೇಡರು ಹೊಂಚು ಹಾಕುವ ಹಾಗೆ ಹೊಂಚುಹಾಕುತ್ತಾರೆ; ಉರುಳುಗಳನ್ನು ಹಾಕಿ ಮನುಷ್ಯರನ್ನು ಹಿಡಿಯುತ್ತಾರೆ.

ಶತ್ರುಗಳು ನಮ್ಮ ಹೆಜ್ಜೆಯನ್ನು ಗುರಿಮಾಡಿಕೊಂಡಿರುವುದರಿಂದ ನಮ್ಮ ಬೀದಿಗಳಲ್ಲೇ ನಾವು ಸಂಚಾರ ಮಾಡದ ಹಾಗಾಯಿತು; ನಮಗೆ ಅಂತ್ಯವು ಸಮೀಪಿಸಿತು, ನಮ್ಮ ಕಾಲವು ತೀರಿತು; ಹೌದು, ನಮಗೆ ಅಂತ್ಯವು ಬಂದೇ ಬಂತು.

ಚೀಯೋನನ್ನು ನರಹತ್ಯದಿಂದಲೂ, ಯೆರೂಸಲೇಮನ್ನು ಅನ್ಯಾಯದಿಂದಲೂ ಕಟ್ಟುವವರೇ, ಇದನ್ನು ಕಿವಿಗೊಟ್ಟು ಕೇಳಿರಿ, ಕೇಳಿರಿ.

¶ ಆಗ ಯೆಹೂದ್ಯರು ಈ ಸಂಗತಿಗಳು ನಿಜವಾಗಿವೆ ಎಂದು ಹೇಳಿ ತಾವೂ ಆ ದೋಷಾರೋಪಣೆ ಮಾಡುವವರೊಂದಿಗೆ ಸೇರಿಕೊಂಡರು.