TSK

TSK · ಙ್ಞಾನೋಕ್ತಿಗಳು 18:24

مراجع Treasury of Scripture Knowledge في ಕನ್ನಡ IRV.

العودة إلى المقطع

ಯೋನಾತಾನನು ದಾವೀದನನ್ನು ತನ್ನ ಪ್ರಾಣದಂತೆಯೇ ಪ್ರೀತಿಸಿದ್ದರಿಂದ ಅವನೊಡನೆ ಸ್ನೇಹದ ಒಪ್ಪಂದ ಮಾಡಿಕೊಂಡನು.

¶ ದಾವೀದನು ಚಿಕ್ಲಗ್ ಊರಿಗೆ ಬಂದನಂತರ ತನ್ನ ಸ್ನೇಹಿತರಾದ ಯೆಹೂದದ ಹಿರಿಯರಿಗೆ ಕೊಳ್ಳೆಯ ಒಂದು ಭಾಗವನ್ನು ಕಳುಹಿಸಿ, “ಇಗೋ ಯೆಹೋವನ ಶತ್ರುಗಳನ್ನು ಸೂರೆಮಾಡಿ ತಂದವುಗಳಲ್ಲಿ ಇದು ನಿಮಗೆ ಬಹುಮಾನವಾಗಿರಲಿ” ಎಂದು ಹೇಳಿದನು.

¶ ಒಂದು ದಿನ ದಾವೀದನು, “ಸೌಲನ ಮನೆಯವರಲ್ಲಿ ಯಾರಾದರೂ ಉಳಿದಿದ್ದರೆ, ನಾನು ಅವರಿಗೆ ಯೋನಾತಾನನ ಸಲುವಾಗಿ ದಯೆತೋರಿಸಬೇಕೆಂದಿರುತ್ತೇನೆ” ಎನ್ನಲು,

ಅಬ್ಷಾಲೋಮನು ಅವನಿಗೆ “ಸ್ನೇಹಿತನ ಬಗ್ಗೆ ನಿನಗಿರುವ ಪ್ರಾಮಾಣಿಕತೆ ಪ್ರೀತಿ ಇಷ್ಟೇತಾನೇ? ನೀನು ನಿನ್ನ ಸ್ನೇಹಿತನೊಡನೆ ಯಾಕೆ ಹೋಗಲಿಲ್ಲ?” ಅಂದನು.

ಅದಕ್ಕೆ ಮೆಫೀಬೋಶೆತನು, “ಚೀಬನು ಎಲ್ಲವನ್ನು ತಾನೆ ತೆಗೆದುಕೊಂಡರೂ, ತೆಗೆದುಕೊಳ್ಳಲಿ. ನನ್ನ ಒಡೆಯನಾದ ಅರಸನು ತನ್ನ ಮನೆಗೆ ಸುರಕ್ಷಿತನಾಗಿ ಬಂದದ್ದೇ ಸಾಕು” ಎಂದನು.

¶ ದಾವೀದನನ್ನು ಇಸ್ರಾಯೇಲರ ಅರಸನನ್ನಾಗಿ ಮಾಡುವುದಕ್ಕೋಸ್ಕರ ಯುದ್ಧನಿಪುಣರಾದ ಈ ಎಲ್ಲಾ ಸೈನಿಕರು ಪೂರ್ಣಮನಸ್ಸಿನಿಂದ ಹೆಬ್ರೋನಿಗೆ ಬಂದರು. ಉಳಿದ ಎಲ್ಲಾ ಇಸ್ರಾಯೇಲರು ದಾವೀದನಿಗೆ ರಾಜ್ಯಾಭಿಷೇಕಮಾಡುವುದರಲ್ಲಿ ಏಕಮನಸ್ಸುಳ್ಳವರಾಗಿದ್ದರು.

ತೈಲವೂ, ಸುಗಂಧದ್ರವ್ಯಗಳೂ ಹೇಗೋ, ಮಿತ್ರನ ಸಂಭಾಷಣೆಯಿಂದ ಅನುಭವಕ್ಕೆ ಬರುವ ಸ್ನೇಹರಸವು ಹಾಗೆ ಮನೋಹರ.

ಕೂಡಲೇ ಅವನು ಯೇಸುವಿನ ಬಳಿಗೆ ಬಂದು, “ಗುರುವೇ ನಮಸ್ಕಾರ” ಎಂದು ಹೇಳಿ ಆತನಿಗೆ ಮುದ್ದಿಟ್ಟನು.