TSK

TSK · 1 ಪೇತ್ರನು 2:21

مراجع Treasury of Scripture Knowledge في Kannada KJV.

العودة إلى المقطع

ನೀತಿಯು ಆತನ ಮುಂದೆ ಹೋಗುತ್ತಾ ನಾವು ಆತನ ಹೆಜ್ಜೆಗಳಲ್ಲಿ ನಡೆಯುವಂತೆ ಮಾರ್ಗವನ್ನು ಮಾಡುವದು.

ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿತು ಕೊಳ್ಳಿರಿ; ಯಾಕಂದರೆ ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನೀವು ನಿಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳುವಿರಿ.

ಆತನು ಜನರನ್ನು ತನ್ನ ಶಿಷ್ಯರ ಕೂಡ ತನ್ನ ಬಳಿಗೆ ಕರೆದು ಅವರಿಗೆ--ಯಾವನಾದರೂ ನನ್ನ ಹಿಂದೆ ಬರುವದಾದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿ ಸಲಿ.

ಯಾವನಾದರೂ ನನ್ನ ಬಳಿಗೆ ಬಂದು ತನ್ನ ತಂದೆ ಯನ್ನಾಗಲೀ ತಾಯಿಯನ್ನಾಗಲೀ ಹೆಂಡತಿಯನ್ನಾಗಲೀ ಮಕ್ಕಳನ್ನಾಗಲೀ ಸಹೋದರರನ್ನಾಗಲೀ ಸಹೋದರಿ ಯರನ್ನಾಗಲೀ ಹೌದು, ತನ್ನ ಸ್ವಂತ ಪ್ರಾಣವನ್ನು ಸಹ ಹಗೆಮಾಡದಿದ್ದರೆ ಅವನು ನನ್ನ ಶಿಷ್ಯನಾಗಿರ ಲಾರನು.

ನಾನು ನಿಮಗೆ ಮಾಡಿದಂತೆಯೇ ನೀವು ಸಹ ಮಾಡಬೇಕೆಂದು ನಾನು ನಿಮಗೆ ಮಾದರಿಯನ್ನು ತೋರಿಸಿದ್ದೇನೆ.

ಅವನು ನನ್ನ ಹೆಸರಿನ ನಿಮಿತ್ತ ಎಷ್ಟು ಕಠಿಣವಾದ ಶ್ರಮೆಯನ್ನನುಭವಿಸಬೇಕೆಂಬದನ್ನು ನಾನೇ ಅವನಿಗೆ ತೋರಿಸುವೆನು ಎಂದು ಹೇಳಿದನು.

ಕ್ರಿಸ್ತನು ಬಾಧೆಯನ್ನನುಭವಿಸಿ ಸತ್ತವರೊಳಗಿಂದ ತಿರಿಗಿ ಎದ್ದು ಬರುವದು ಅಗತ್ಯವೆಂತಲೂ--ನಾನು ನಿಮಗೆ ಪ್ರಸಿದ್ಧಿ ಪಡಿಸುವ ಈ ಯೇಸುವೇ ಕ್ರಿಸ್ತನೆಂತಲೂ ದೃಢವಾಗಿ ಹೇಳಿ ಸ್ಥಾಪಿಸಿದನು.

ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವೂ ನನ್ನನ್ನು ಅನುಸರಿಸುವವರಾಗಿರ್ರಿ.

ನಾವು ಕರ್ತನಾದ ಯೇಸುವಿನ ಮೂಲಕ ನಿಮಗೆ ಕೊಟ್ಟ ಆಜ್ಞೆಗಳನ್ನು ನೀವು ತಿಳಿದಿದ್ದೀರಿ.

ಸಮಸ್ತವು ಯಾವಾತನಿಗೋಸ್ಕರವೂ ಯಾವಾತನಿಂದಲೂ ಉಂಟಾಯಿತೋ ಆತನು ಬಹುಮಂದಿ ಪುತ್ರರನ್ನು ಪ್ರಭಾವಕ್ಕೆ ಸೇರಿಸುವಲ್ಲಿ ಅವರ ರಕ್ಷಣಾ ನಾಯಕನನ್ನು ಬಾಧೆಗಳ ಮೂಲಕ ಸಿದ್ಧಿಗೆ ತರುವದು ಆತನಿಗೆ ಯುಕ್ತವಾಗಿತ್ತು.

ನಾವು ಪಾಪಗಳ ಪಾಲಿಗೆ ಸತ್ತು ನೀತಿವಂತರಾಗಿ ಜೀವಿಸುವಂತೆ ಆತನು ಮರದ ಮೇಲೆ ನಮ್ಮ ಪಾಪ ಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತನು; ಆತನ ಬಾಸುಂಡೆಗಳಿಂದ ನಿಮಗೆ ಗುಣವಾಯಿತು.

ಕ್ರಿಸ್ತನು ಸಹ ನೀತಿವಂತ ನಾಗಿದ್ದು ಅನೀತಿವಂತರಾದ ನಮ್ಮನ್ನು ದೇವರ ಬಳಿಗೆ ತರುವದಕ್ಕಾಗಿ ಪಾಪನಿವಾರಣೆಗೋಸ್ಕರ ಒಂದೇ ಸಾರಿ ಬಾಧೆಪಟ್ಟು ಶರೀರದಲ್ಲಿ ಕೊಲ್ಲಲ್ಪಟ್ಟನು, ಆತ್ಮನಿಂದ ಬದುಕುವವನಾದನು.

ಆತನಲ್ಲಿ ನೆಲೆ ಗೊಂಡವನಾಗಿದ್ದೇನೆಂದು ಹೇಳುವವನು ಆತನು ನಡೆ ದಂತೆಯೇ ತಾನೂ ನಡೆಯುವದಕ್ಕೆ ಬದ್ಧನಾಗಿದ್ದಾನೆ.

ಅವರು ಪ್ರಾಣದ ಮೇಲಣ ಪ್ರೀತಿಯನ್ನು ತೊರೆದು ಕುರಿಮರಿಯಾದಾತನ ರಕ್ತದಿಂದಲೂ ತಮ್ಮ ಸಾಕ್ಷಿಯ ವಾಕ್ಯದಿಂದಲೂ ಅವ ನನ್ನು ಜಯಿಸಿದರು.