ಆಗ ನೀವು ತಿರುಗಿಕೊಂಡು ಕರ್ತನ ಮುಂದೆ ಗೋಳಾಡಿದಿರಿ; ಆದರೆ ಕರ್ತನು ನಿಮ್ಮ ಧ್ವನಿಯನ್ನು ಕೇಳಲಿಲ್ಲ, ನಿಮಗೆ ಕಿವಿಗೊಡಲಿಲ್ಲ.
TSK
TSK · ಙ್ಞಾನೋಕ್ತಿಗಳು 1:28
مراجع Treasury of Scripture Knowledge في Kannada KJV.
ಅವನ ಮೇಲೆ ಇಕ್ಕಟ್ಟು ಬಂದರೆ ಅವನ ಮೊರೆಯನ್ನು ದೇವರು ಕೇಳುವನೋ?
ಅವರು ಮೊರೆಯಿಟ್ಟರು, ಆದರೆ ರಕ್ಷಿಸುವವರು ಯಾರೂ ಇದ್ದಿಲ್ಲ. ಕರ್ತನಿಗೂ ಮೊರೆ ಇಟ್ಟರು, ಆದರೆ ಅವರಿಗೆ ಆತನು ಉತ್ತರ ಕೊಡ ಲಿಲ್ಲ.
ಅವರನ್ನು ಕೊಲ್ಲುವಾಗ ಅವರು ಆತನನ್ನು ಹುಡುಕಿ ತಿರುಗಿಕೊಂಡು ದೇವರನ್ನು ಹೊತ್ತಾರೆ ವಿಚಾರಿಸಿ
ನೀವು ನಿಮ್ಮ ಕೈಗಳನ್ನು ಚಾಚಲು ನಾನು ನನ್ನ ಕಣ್ಣುಗಳನ್ನು ನಿಮಗೆ ಮರೆಮಾಡುವೆನು; ಹೌದು, ನೀವು ಬಹು ಪ್ರಾರ್ಥನೆಗಳನ್ನು ಮಾಡಿ ದರೂ ನಾನು ಕೇಳೆನು, ನಿಮ್ಮ ಕೈಗಳು ರಕ್ತದಿಂದ ತುಂಬಿಯವೆ.
ಅವರು ಉಪವಾಸ ಮಾಡಿದಾಗ್ಯೂ ನಾನು ಅವರ ಮೊರೆಯನ್ನು ಕೇಳುವದಿಲ್ಲ; ಅವರು ದಹನಬಲಿಗಳನ್ನೂ ಕಾಣಿಕೆಗಳನ್ನೂ ಅರ್ಪಿಸಿದಾಗ್ಯೂ ನಾನು ಅವರನ್ನು ಅಂಗೀಕರಿಸುವದಿಲ್ಲ; ಆದರೆ ನಾನು ಕತ್ತಿಯಿಂದಲೂ ಕ್ಷಾಮದಿಂದಲೂ ಜಾಡ್ಯದಿಂದಲೂ ಅವರನ್ನು ನಿರ್ಮೂಲ ಮಾಡಿಬಿಡುತ್ತೇನೆ ಎಂದು ಹೇಳಿದನು.
ಅವರು ಕರ್ತನನ್ನು ಹುಡುಕುವದಕ್ಕೆ ಅವರ ಮಂದೆಗಳೊಂದಿಗೂ ಹಿಂಡುಗಳೊಂದಿಗೂ ಹೋಗುವರು. ಆದರೆ ಆತನು ಅವರಿಂದ ತನ್ನನ್ನು ಹಿಂದೆಗೆದುಕೊಂಡ ಕಾರಣ ಅವರು ಆತನನ್ನು ಕಾಣುವದೇ ಇಲ್ಲ.
ಆಗ ಅವರು ಸಮುದ್ರದಿಂದ ಸಮುದ್ರಕ್ಕೂ ಉತ್ತರ ದಿಂದ ಪೂರ್ವಕ್ಕೂ ಅಲೆದು ಕರ್ತನ ವಾಕ್ಯವನ್ನು ಹುಡುಕುವದಕ್ಕೆ ಅತ್ತಿತ್ತ ಓಡಾಡಿ ಅದನ್ನು ಕಾಣದೆ ಹೋಗುವರು.
ಆಗ ಆದದ್ದೇ ನಂದರೆ--ಅವನು ಕೂಗಲು ಅವರು ಕೇಳದೆ ಇದ್ದ ಪ್ರಕಾರ ಅವರು ಕೂಗಲು ನಾನು ಕೇಳದೆ ಇದ್ದೆನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
ಅವರು ಕೊಂಡುಕೊಳ್ಳುವದಕ್ಕೆ ಹೋದಾಗ ಮದಲಿಂಗನು ಬಂದನು. ಆಗ ಸಿದ್ಧವಾಗಿ ದ್ದವರು ಮದುವೆಗೆ ಆತನೊಂದಿಗೆ ಒಳಕ್ಕೆ ಹೊದರು; ತರುವಾಯ ಬಾಗಲು ಮುಚ್ಚಲಾಯಿತು.
ನೀವು ಬೇಡಿದರೂ ಬೇಡಿದ್ದನ್ನು ನಿಮ್ಮ ಭೋಗಗಳಿಗಾಗಿ ಉಪಯೋಗಿಸ ಬೇಕೆಂದು ತಪ್ಪಾಗಿ ಬೇಡಿಕೊಳ್ಳುವದರಿಂದ ನಿಮಗೆ ದೊರೆಯುವದಿಲ್ಲ.