TSK

TSK · ಙ್ಞಾನೋಕ್ತಿಗಳು 2:22

مراجع Treasury of Scripture Knowledge في Kannada KJV.

العودة إلى المقطع

ನಿನ್ನ ದೇವರಾದ ಕರ್ತನು ಆ ಜನಾಂಗಗಳನ್ನು ನಿನ್ನ ಮುಂದೆ ಸ್ವಲ್ಪ ಸ್ವಲ್ಪವಾಗಿ ಹೊರಗೆ ಹಾಕುವನು. ಅಡವಿಯ ಮೃಗಗಳು ನಿನ್ನ ಮೇಲೆ ಹೆಚ್ಚದ ಹಾಗೆ ಅವರನ್ನು ತ್ವರೆಯಾಗಿ ಸಂಹರಿಸಬಾರದು.

ಅಂಥವನನ್ನು ಕರ್ತನು ಉಳಿಸುವದಿಲ್ಲ; ಆಗಲೇ ಕರ್ತನ ಕೋಪವೂ ರೋಷವೂ ಆ ಮನುಷ್ಯನ ಮೇಲೆ ಹೊಗೆ ಹಾಯುವವು. ಈ ಪುಸ್ತಕದಲ್ಲಿ ಬರೆದಿ ರುವ ಶಾಪವೆಲ್ಲಾ ಅವನ ಮೇಲೆ ನೆಲೆಯಾಗುವದು; ಕರ್ತನು ಅವನ ಹೆಸರನ್ನು ಆಕಾಶದ ಕೆಳಗಿನಿಂದ ಅಳಿಸಿಬಿಡುವನು.

ಹೀಗೆಯೇ ಸೌಲನು ಕರ್ತನಿಗೆ ವಿರೋಧವಾಗಿ ಮಾಡಿದ ತನ್ನ ಅಪರಾಧದ ನಿಮಿತ್ತ ಸತ್ತುಹೋದನು. ಅವನು ಕರ್ತನ ವಾಕ್ಯವನ್ನು ಕೈಕೊಳ್ಳದೆ,

ಆಪತ್ತಿನ ದಿವಸಕ್ಕೆ ಕೆಟ್ಟ ವನು ಇರಿಸಲ್ಪಟ್ಟಿದ್ದಾನೆ. ಉಗ್ರದ ದಿವಸಕ್ಕೆ ಹೊರಗೆ ತರಲ್ಪಡುವನು.

ಆತನು ಆಶೀರ್ವದಿಸಿದವರು ಭೂಮಿಯನ್ನು ಸ್ವತಂತ್ರಿಸಿ ಕೊಳ್ಳುವರು; ಆತನು ಶಪಿಸಿದವರು ಕಡಿದು ಹಾಕಲ್ಪಡವರು.

ಸಂಪೂರ್ಣನನ್ನು ಗಮನಿಸು, ಯಥಾರ್ಥನನ್ನು ನೋಡು; ಆ ಮನುಷ್ಯನ ಅಂತ್ಯವು ಸಮಾಧಾನವಾಗಿದೆ.

ಇಗೋ, ದೇವರನ್ನು ತನ್ನ ಬಲವಾಗಿ ಆಶ್ರಯಿಸದೆ ತನ್ನ ಅಧಿಕವಾದ ಐಶ್ವರ್ಯದಲ್ಲಿ ಭರವಸವಿಟ್ಟು ತನ್ನ ಕೆಟ್ಟತನದಲ್ಲಿ ಬಲಗೊಂಡ ಮನುಷ್ಯನು ಇವನೇ.

ಕರ್ತನು ತನ್ನನ್ನು ಪ್ರೀತಿ ಮಾಡುವ ವರೆಲ್ಲರನ್ನು ಕಾಪಾಡುತ್ತಾನೆ; ಆದರೆ ದುಷ್ಟರೆಲ್ಲರನ್ನು ನಾಶಮಾಡುತ್ತಾನೆ.

ನೀತಿವಂತರು ಎಂದಿಗೂ ಕದಲುವದೇ ಇಲ್ಲ; ದುಷ್ಟರು ಭೂಮಿಯಲ್ಲಿ ವಾಸಮಾಡುವದಿಲ್ಲ.