ಆತನು ಮನುಷ್ಯನಿಗೆ ಹೇಳಿದ್ದೇ ನಂದರೆ--ಇಗೋ, ಕರ್ತನ ಭಯವೇ ಜ್ಞಾನ; ಕೇಡಿನಿಂದ ತೊಲಗುವದೇ ಗ್ರಹಿಕೆ.
TSK
TSK · ಙ್ಞಾನೋಕ್ತಿಗಳು 2:5
مراجع Treasury of Scripture Knowledge في Kannada KJV.
ಪರಿಶುದ್ಧರ ತಿಳುವಳಿಕೆಯೇ ವಿವೇಕವು.
ನಿನ್ನ ಕಾಲದಲ್ಲಿ ಸ್ಥಿರತೆಯಾ ಗಿಯೂ ರಕ್ಷಣೆ ಜ್ಞಾನ ತಿಳುವಳಿಕೆಗಳ ನಿಕ್ಷೇಪವಾ ಗಿಯೂ ಇರುವನು; ಕರ್ತನ ಭಯವೇ ಅವನ ಬೊಕ್ಕಸವಾಗಿರುವದು.
ನಾನೇ ಕರ್ತನೆಂದು ನನ್ನನ್ನು ತಿಳುಕೊಳ್ಳುವದಕ್ಕೆ ಅವರಿಗೆ ಹೃದಯವನ್ನು ಕೊಡುವೆನು. ಅವರು ನನ್ನ ಜನರಾಗಿ ರುವರು; ನಾನು ಅವರ ದೇವರಾಗಿರುವೆನು; ತಮ್ಮ ಪೂರ್ಣ ಹೃದಯದಿಂದ ನನ್ನ ಬಳಿಗೆ ಹಿಂತಿರುಗಿಕೊಳ್ಳು ವರು.
ಅವರಿಗೆ ಒಳ್ಳೇದನ್ನು ಮಾಡುವ ಹಾಗೆ ನಾನು ತಿರುಗಿಸಿ ಬಿಡೆನೆಂದು ನಿತ್ಯವಾದ ಒಡಂಬಡಿಕೆಯನ್ನು ಅವರ ಸಂಗಡ ಮಾಡುತ್ತೇನೆ; ಅವರು ನನ್ನನ್ನು ಬಿಡದ ಹಾಗೆ ನನ್ನ ಭಯವನ್ನು ಅವರ ಹೃದಯಗಳಲ್ಲಿ ಇಡುತ್ತೇನೆ.
ಬೇಡಿಕೊಳ್ಳಿರಿ, ಅದು ನಿಮಗೆ ಕೊಡಲ್ಪಡುವದು; ಹುಡುಕಿರಿ, ನಿಮಗೆ ಸಿಕ್ಕುವದು; ತಟ್ಟಿರಿ, ಅದು ನಿಮಗೆ ತೆರೆಯಲ್ಪಡುವದು.
ಎಲ್ಲವುಗಳು ನನ್ನ ತಂದೆಯಿಂದ ನನಗೆ ಒಪ್ಪಿಸಲ್ಪಟ್ಟಿವೆ; ತಂದೆಯ ಹೊರತು ಯಾರೂ ಮಗನನ್ನು ಅರಿಯರು. ಮಗನೂ ತಾನು ಯಾರಿಗೆ ತಂದೆಯನ್ನು ಪ್ರಕಟಮಾಡುವನೋ ಅವನೂ ಅಲ್ಲದೆ ಆತನನ್ನು (ತಂದೆಯನ್ನು) ಯಾರೂ ಅರಿತವರಲ್ಲ.
ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ಅವರು ಅರಿತು ಕೊಳ್ಳುವದೇ ನಿತ್ಯಜೀವ.