TSK

TSK · ಙ್ಞಾನೋಕ್ತಿಗಳು 23:28

مراجع Treasury of Scripture Knowledge في Kannada KJV.

العودة إلى المقطع

ಅವಳು ಪ್ರತಿದಿನ ಯೋಸೇಫನ ಸಂಗಡ ಮಾತನಾಡಿದಾಗ್ಯೂ ಅವನು ಅವಳ ಕೂಡ ಮಲಗುವದಕ್ಕಾದರೂ ಅವಳ ಹತ್ತಿರ ಇರುವದ ಕ್ಕಾದರೂ ಕಿವಿಗೊಡದೆ ಹೋದನು.

ಇದರ ತರುವಾಯ ಆದದ್ದೇನಂದರೆ, ಸೋರೇಕ್‌ ತಗ್ಗಿನಲ್ಲಿದ್ದ ದೆಲೀಲಾ ಎಂಬ ಹೆಸರುಳ್ಳ ಒಬ್ಬ ಸ್ತ್ರೀಯನ್ನು ಪ್ರೀತಿಮಾಡಿದನು.

ಇಗೋ, ವೇಶ್ಯಳ ವಸ್ತ್ರವನ್ನು ಧರಿಸಿ ಕೊಂಡು ಒಬ್ಬ ಕಪಟ ಸ್ತ್ರೀಯು ಅವನನ್ನು ಎದುರು ಗೊಂಡಳು.

ಎತ್ತು ವಧೆಯ ಸ್ಥಾನಕ್ಕೆ ಹೋಗುವಂತೆ ಇಲ್ಲವೆ ಮೂರ್ಖನು ಶಿಕ್ಷೆಯ ದಂಡನೆಗೆ ಹೋಗುವಂತೆ

ಆದರೆ ಸತ್ತವರು ಅಲ್ಲಿದ್ದಾರೆಂದೂ ಪಾತಾಳದ ಅಗಾಧಗಳಲ್ಲಿ ಅವಳ ಅಥಿತಿಗಳು ಇದ್ದಾ ರೆಂದೂ ಅವನಿಗೆ ತಿಳಿಯದು.

ತನ್ನ ಹೃದಯವು ಉರುಲುಗಳೂ ಬಲೆ ಗಳೂ ಅವಳ ಕೈಗಳ ಕಟ್ಟುಗಳೂ ಆಗಿರುವ ಸ್ತ್ರೀಯು ಮರಣಕ್ಕಿಂತಲೂ ಕಠೋರವಾಗಿದ್ದಾಳೆಂದು ನಾನು ಕಂಡಿದ್ದೇನೆ. ದೇವರನ್ನು ಮೆಚ್ಚಿಸಿದವನು ಅವಳಿಂದ ತಪ್ಪಿಸಿಕೊಳ್ಳುವನು; ಪಾಪಿಯು ಅವಳಿಂದ ಹಿಡಿಯಲ್ಪ ಡುವನು.

ವ್ಯಭಿಚಾರವೂ ದ್ರಾಕ್ಷಾರಸವೂ ಹೊಸ ದ್ರಾಕ್ಷಾರಸವೂ ಹೃದಯವನ್ನು ಕೆಡಿಸುತ್ತದೆ.

ಏಳು ಪಾತ್ರೆಗಳನ್ನು ಹಿಡಿದಿದ್ದ ಏಳು ಮಂದಿ ದೂತರಲ್ಲಿ ಒಬ್ಬನು ಬಂದು ನನ್ನ ಸಂಗಡ ಮಾತನಾಡಿ--ಇಲ್ಲಿಗೆ ಬಾ, ಬಹಳ ನೀರುಗಳ ಮೇಲೆ ಕೂತಿರುವ ಮಹಾ ಜಾರಸ್ತ್ರೀಗೆ ಬರುವ ದಂಡನೆಯನ್ನು ನಾನು ನಿನಗೆ ತೋರಿಸುತ್ತೇನೆ.