TSK

TSK · 2 ಪೂರ್ವಕಾಲವೃತ್ತಾ 21:16

Treasury of Scripture Knowledge references in Kannada KJV.

Back to passage

ಈಗ ಅರಸನಾದ ನನ್ನ ಒಡೆಯನು ದಯಮಾಡಿ ತನ್ನ ಸೇವಕನ ಮಾತುಗಳನ್ನು ಕೇಳಲಿ. ಕರ್ತನು ನಿನ್ನನ್ನು ನನಗೆ ವಿರೋಧವಾಗಿ ಪ್ರೇರೇಪಿಸಿದರೆ ಕಾಣಿಕೆಯನ್ನು ಅಂಗೀಕರಿಸಲಿ; ಆದರೆ ಮನುಷ್ಯರ ಮಕ್ಕಳು ಇದನ್ನು ಮಾಡಿದರೆ ಅವರು ಕರ್ತನ ಮುಂದೆ ಶಪಿಸಲ್ಪಡಲಿ. ಯಾಕಂದರೆ ನೀನು ಹೋಗಿ ಅನ್ಯದೇವರುಗಳನ್ನು ಸೇವಿಸು ಎಂದು ಹೇಳಿ ಅವರು ಈ ಹೊತ್ತು ನನ್ನನ್ನು ಕರ್ತನ ಬಾಧ್ಯತೆಯಲ್ಲಿ ಇರದ ಹಾಗೆ ಓಡಿಸಿಬಿಟ್ಟರು.

ಆದಕಾರಣ ಕರ್ತನು ಸೊಲೊಮೋನನಿಗೆ--ನೀನು ಹೀಗೆ ನಡೆದು ನಾನು ನಿನಗೆ ಆಜ್ಞಾಪಿಸಿದ ಒಡಂಬಡಿಕೆಯನ್ನೂ ನನ್ನ ಕಟ್ಟಳೆಗಳನ್ನೂ ಕೈಕೊಳ್ಳದೆ ಹೋದದರಿಂದ ನಿಶ್ಚಯ ವಾಗಿ ನಾನು ರಾಜ್ಯವನ್ನು ನಿನ್ನಿಂದ ಕಸಕೊಂಡು ಅದನ್ನು ನಿನ್ನ ಸೇವಕನಿಗೆ ಕೊಡುವೆನು.

ಇದಲ್ಲದೆ ದೇವರು ಮತ್ತೊಬ್ಬ ಶತ್ರುವನ್ನು ಅವನ ಮೇಲೆ ಎಬ್ಬಿಸಿದನು. ಅವನು ಯಾರಂದರೆ ಚೋಬದ ಅರಸನಾದ ತನ್ನ ಯಜಮಾನನಾಗಿರುವ ಹದದೇಜರ ನನ್ನು ಬಿಟ್ಟು ಓಡಿಹೋದ ಎಲ್ಯದಾವನ ಮಗನಾದ ರೆಜೋನನು.

ಯೆರೂಸಲೇಮಿನ ನಿವಾಸಿಗಳು ಅವನಿಗೆ ಬದಲಾಗಿ ಅವನ ಚಿಕ್ಕ ಮಗನಾದ ಅಹಜ್ಯ ನನ್ನು ಅರಸನಾಗಿ ಮಾಡಿದರು. ದಂಡಿಗೆ ಬಂದ ಅರಬ್ಬಿಯರ ಗುಂಪು ಹಿರಿಯರನ್ನೆಲ್ಲಾ ಕೊಂದುಹಾಕಿ ದರು. ಹೀಗೆ ಯೆಹೋರಾಮನ ಮಗನಾದ ಅಹಜ್ಯನು ಯೆಹೂದದ ಅರಸನಾಗಿ ಆಳಿದನು.

ಆದಕಾರಣ ಕರ್ತನು ಅಶ್ಶೂರದ ಅರಸನ ಸೈನ್ಯದ ಅಧಿಪತಿಗಳನ್ನು ಬರಮಾಡಿದನು. ಅವರು ಮನಸ್ಸೆಯನ್ನು ಮುಳ್ಳುಗಿಡಗಳಲ್ಲಿ ಹಿಡಿದು ಅವನಿಗೆ ಸಂಕೋಲೆಗಳನ್ನು ಹಾಕಿ ಅವನನ್ನು ಬಾಬೆಲಿಗೆ ಒಯ್ದರು.

ಆಗ ಯೆಹೂದ, ಬೆನ್ಯಾವಿಾನ್‌ ತಂದೆಗಳ ಮುಖ್ಯ ಸ್ಥರೂ ಯಾಜಕರೂ ಲೇವಿಯರೂ ಯೆರೂಸಲೇಮಿನ ಲ್ಲಿರುವ ಕರ್ತನ ಆಲಯವನ್ನು ಕಟ್ಟುವದಕ್ಕೆ ಹೋಗಲು ಕರ್ತನಿಂದ ಪ್ರೇರೇಪಿಸಲ್ಪಟ್ಟವರೆಲ್ಲರೂ ಎದ್ದರು.

ನಾನೇ ಕರ್ತನು, ಮತ್ತೊಬ್ಬನಿಲ್ಲ; ನನ್ನ ಹೊರತು ಯಾವ ದೇವರೂ ಇಲ್ಲ; ನೀನು ನನ್ನನ್ನು ಅರಿಯದನಾಗಿದ್ದರೂ ನಿನಗೆ ನಡುಕಟ್ಟುವೆನು.

ಪಟ್ಟಣದಲ್ಲಿ ಕೊಂಬನ್ನು ಊದಿದರೆ ಜನರು ಹೆದರುವದಿಲ್ಲವೇ? ಪಟ್ಟಣದಲ್ಲಿ ಕೇಡು ಇರು ವದಾದರೆ ಅದು ಕರ್ತನಿಂದ ಅಲ್ಲವೇ?