TSK

TSK · ಯಾಜಕಕಾಂಡ 4:21

Treasury of Scripture Knowledge references in Kannada KJV.

Back to passage

ಆ ಹೋರಿಯ ಚರ್ಮ ವನ್ನು, ಅದರ ಎಲ್ಲಾ ಮಾಂಸವನ್ನು, ತಲೆ, ಕಾಲುಗಳು, ಕರುಳುಗಳು, ಅದರ ಸಗಣಿಯೊಂದಿಗೆ

ಯಾಜಕನಿಗಾಗಿರುವ ಪ್ರತಿ ಯೊಂದು ಆಹಾರ ಬಲಿ ಸಂಪೂರ್ಣವಾಗಿ ಸುಡಲ್ಪಡ ಬೇಕು; ಅದನ್ನು ತಿನ್ನಬಾರದು ಅಂದನು.

ತರುವಾಯ ಅವನು ಜನರಿಗೋಸ್ಕರ ಪಾಪಬಲಿ ಯಾಗಿರುವ ಆಡನ್ನು ವಧಿಸಿ ಅದರ ರಕ್ತವನ್ನು ತೆರೆಯ ಒಳಗಡೆ ತಂದು ಹೋರಿಯ ರಕ್ತದಿಂದ ಮಾಡಿ ದಂತೆಯೇ ಕೃಪಾಸನದ ಮೇಲೆಯೂ ಮುಂದೆಯೂ ಚಿಮುಕಿಸಬೇಕು.

ಇದಲ್ಲದೆ ಪರಿಶುದ್ಧ ಸ್ಥಳದಲ್ಲಿ ಪ್ರಾಯಶ್ಚಿತ್ತ ಮಾಡುವದಕ್ಕಾಗಿ ಯಾವದರ ರಕ್ತವು ತರಲ್ಪಟ್ಟಿತೋ ಆ ಪಾಪಬಲಿಯ ಹೋರಿಯನ್ನು ಮತ್ತು ಪಾಪಬಲಿಯ ಆಡನ್ನು ಪಾಳೆಯದ ಆಚೆಗೆ ತೆಗೆದುಕೊಂಡು ಹೋಗಿ ಅವುಗಳ ಚರ್ಮವನ್ನೂ ಮಾಂಸವನ್ನೂ ಸಗಣಿಯನ್ನೂ ಸುಡಬೇಕು.

ಸೆರೆಯಿಂದ ಬಂದು ಸೆರೆಯಾಗಿ ಒಯ್ಯಲ್ಪಟ್ಟಿದ್ದ ಅವರ ಮಕ್ಕಳು ಇಸ್ರಾಯೇಲ್‌ ದೇವರಿಗೆ ದಹನ ಬಲಿಗಳನ್ನು ಅರ್ಪಿಸಿದರು. ಸಮಸ್ತ ಇಸ್ರಾಯೇಲ್ಯರಿ ಗೋಸ್ಕರ ಹನ್ನೆರಡು ಹೋರಿಗಳನ್ನೂ ತೊಂಭತ್ತಾರು ಟಗರುಗಳನ್ನೂ ಎಪ್ಪತ್ತೇಳು ಕುರಿಮರಿಗಳನ್ನೂ ಪಾಪ ಕಳೆಯುವದಕ್ಕಾಗಿ ಹನ್ನೆರಡು ಮೇಕೆಯ ಹೋತಗ ಳನ್ನೂ ಅರ್ಪಿಸಿದರು. ಇವೆಲ್ಲಾ ಕರ್ತನಿಗೆ ದಹನಬಲಿ ಯಾಗಿತ್ತು.

ಮನುಷ್ಯ ಕುಮಾರನು ಸಹ ಸೇವೆ ಮಾಡಿಸಿಕೊಳ್ಳುವದಕ್ಕಾಗಿ ಅಲ್ಲ, ಸೇವೆ ಮಾಡುವದಕ್ಕಾಗಿಯೂ ಅನೇಕರಿಗಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕಾಗಿಯೂ ಬಂದನು ಎಂದು ಹೇಳಿದನು.

ಯಾಕಂದರೆ ದೇವರು ಒಬ್ಬನೇ;ದೇವರಿಗೂ ಮನಷ್ಯರಿಗೂ ಮಧ್ಯಸ್ಥನು ಒಬ್ಬನೇ; ಆತನು ಮನುಷ್ಯನಾಗಿರುವ ಕ್ರಿಸ್ತ ಯೇಸುವೇ;