TSK

TSK · ಙ್ಞಾನೋಕ್ತಿಗಳು 29:12

Treasury of Scripture Knowledge references in Kannada KJV.

Back to passage

ಸೌಲನು ತನ್ನ ಸೇವಕರಿಗೆ--ನೀವು ದಾವೀದನ ಸಂಗಡ ಗುಪ್ತವಾಗಿ ಮಾತನಾಡಿ--ಇಗೋ, ಅರಸನು ನಿನ್ನಲ್ಲಿ ಸಂತೋಷಪಡುತ್ತಾನೆ, ತನ್ನ ಸೇವಕರೆಲ್ಲರೂ ನಿನ್ನನ್ನು ಪ್ರೀತಿಸುತ್ತಾರೆ; ಆದದರಿಂದ ಅರಸನ ಅಳಿಯ ನಾಗು ಎಂದು ಹೇಳಿರಿ ಎಂದು ಆಜ್ಞಾಪಿಸಿದನು.

ಜೀಫ್ಯರು ಗಿಬೆಯಲ್ಲಿದ್ದ ಸೌಲನ ಬಳಿಗೆ ಬಂದುದಾವೀದನು ನಮ್ಮ ಪಕ್ಷವಾಗಿಯೇ ಯೆಷಿಮೋನಿನ ದಕ್ಷಿಣದಲ್ಲಿ ಹಕೀಲಾ ಗುಡ್ಡದಲ್ಲಿರುವ ಘೋರಾರಣ್ಯ ದಲ್ಲಿ ನಮ್ಮೊಂದಿಗೆ ಅಡಗಿಕೊಂಡಿದ್ದಾನಲ್ಲವೇ?

ಬೇರೋತಿನ ಮಗನಾಗಿರುವ ರಿಮ್ಮೋನನ ಮಕ್ಕ ಳಾದ ರೇಕಾಬನೂ ಬಾಣನೂ ಹೊರಟು ಮಧ್ಯಾಹ್ನದ ಬಿಸಿಲಿನಲ್ಲಿ ಮಂಚದ ಮೇಲೆ ಮಲಗಿಕೊಂಡಿರುವ ಈಷ್ಬೋಶೆತನ ಮನೆಗೆ ಬಂದರು.

ಆಗ ಅವನು ಅವರಿಗೆ ಎರಡನೇ ಸಾರಿ ಪತ್ರವನ್ನು ಬರೆದು--ನೀವು ನನ್ನವರಾಗಿದ್ದು ನನ್ನ ಮಾತು ಕೇಳುವ ವರಾಗಿದ್ದರೆ ನಿಮ್ಮ ಯಜಮಾನನ ಮಕ್ಕಳಾಗಿರುವ ಮನು ಷ್ಯರ ತಲೆಗಳನ್ನು ತಕ್ಕೊಂಡು ನಾಳೆ ಇಷ್ಟು ಹೊತ್ತಿಗೆ ಇಜ್ರೇಲಿಗೆ ನನ್ನ ಬಳಿಗೆ ಬನ್ನಿರಿ ಎಂದು ಹೇಳಿದನು. ಅರಸನ ಮಕ್ಕಳಾದ ಎಪ್ಪತ್ತು ಮಂದಿ ಮಕ್ಕಳು ತಮ್ಮನ್ನು ಪೋಷಿಸುವ ಪಟ್ಟಣದ ಪ್ರಮುಖರ ಬಳಿಯಲ್ಲಿ ಇದ್ದರು.

ಮರೆಯಾಗಿ ನೆರೆಯವನ ಮೇಲೆ ಚಾಡಿ ಹೇಳುವವನನ್ನು ಸಂಹರಿಸುವೆನು; ಗರ್ವದ ಕಣ್ಣೂ ಅಹಂಕಾರದ ಹೃದಯವೂ ಉಳ್ಳವನನ್ನು ತಾಳಲಾರೆನು.

ಉತ್ತರದ ಗಾಳಿಯು ಮಳೆಯನ್ನು ನೂಕುತ್ತದೆ; ಅದರಂತೆಯೇ ಚಾಡಿಯ ನಾಲಿಗೆ ಕೋಪದ ಮುಖ ಮಾಡುವದೆ.