¶ ಯೋತಾಮನು ಇದನ್ನು ಕೇಳಿ ಗೆರಿಜ್ಜೀಮ್ ಬೆಟ್ಟದ ತುದಿಯಲ್ಲಿ ನಿಂತು ಗಟ್ಟಿಯಾದ ಧ್ವನಿಯಿಂದ, “ಶೆಕೆಮಿನ ಜನರೇ, ನನ್ನ ಮಾತನ್ನು ಕೇಳಿರಿ; ಆಗ ದೇವರು ನಿಮ್ಮ ಮೊರೆಗೆ ಕಿವಿಗೊಡುವನು” ಎಂದನು.
TSK
TSK · 2 ಸಮುವೇಲನು 12:1
Treasury of Scripture Knowledge references in ಕನ್ನಡ IRV.
ನಾತಾನನು ತನಗುಂಟಾದ ದರ್ಶನದ ಈ ಎಲ್ಲಾ ಮಾತುಗಳನ್ನು ದಾವೀದನಿಗೆ ಹೇಳಿದನು.
¶ ಅದಕ್ಕೆ ದಾವೀದನು ದೂತನಿಗೆ, “ನೀನು ಹೋಗು, ಇದಕ್ಕೋಸ್ಕರ ವ್ಯಸನಪಡಬೇಡ. ಕತ್ತಿಯು ಈ ಹೊತ್ತು ಒಬ್ಬನನ್ನು ನುಂಗಿದರೆ, ನಾಳೆ ಇನ್ನೊಬ್ಬನನ್ನು ನುಂಗುವುದು, ಮತ್ತಷ್ಟು ಶೂರತನದಿಂದ ಯುದ್ಧಮಾಡಿ ಪಟ್ಟಣವನ್ನು ಕೆಡವಿಬಿಡಿರಿ ಎಂಬುದಾಗಿ ಅರಸನು ಆಜ್ಞಾಪಿಸುತ್ತಾನೆ ಎಂದು ಯೋವಾಬನಿಗೆ ಹೇಳಿ ಅವನನ್ನು ಧೈರ್ಯಪಡಿಸು” ಎಂದನು.
ನಾವು ಸಾಯುವವರು. ನೆಲದ ಮೇಲೆ ಚೆಲ್ಲಿದ ನೀರು ಪುನಃ ತೆಗೆದುಕೊಳ್ಳಲು ಆಗದಂತೆ ಇರುವ ನೀರಿನಂತೆ ನಾವು. ಮನುಷ್ಯರ ಪ್ರಾಣವನ್ನು ತೆಗೆಯುವುದಕ್ಕೆ ದೇವರಿಗೆ ಇಷ್ಟವಿಲ್ಲ. ತಳ್ಳಲ್ಪಟ್ಟವನು ತಿರುಗಿ ತನ್ನ ಬಳಿಗೆ ಬರುವ ಹಾಗೆ ಆತನು ಸದುಪಾಯಗಳನ್ನು ಕಲ್ಪಿಸುವವನಾಗಿರುತ್ತಾನೆ.
ನಾತಾನನ ಮಗನಾದ ಅಜರ್ಯನು ದೇಶಾಧಿಪತಿಗಳ ಮುಖ್ಯಸ್ಥನು. ನಾತಾನನ ಮಗನಾದ ಜಾಬೂದನು ಯಾಜಕನೂ ಹಾಗು ಅರಸನ ಮಿತ್ರನೂ ಆಗಿದ್ದನು.
¶ ಅನೇಕ ದಿನಗಳಾದ ನಂತರ ಎಲೀಯನಿಗೆ ಯೆಹೋವನ ವಾಕ್ಯವುಂಟಾಯಿತು. ಬರಗಾಲದ ಮೂರನೆಯ ವರ್ಷದಲ್ಲಿ ಯೆಹೋವನು ಅವನಿಗೆ, “ನೀನು ಹೋಗಿ ಅಹಾಬನನ್ನು ಕಾಣು. ನಾನು ದೇಶಕ್ಕೆ ಮಳೆ ಕೊಡುತ್ತೇನೆ” ಎಂದನು.
ನಾನು ಕೆಲಸದಲ್ಲಿದ್ದಾಗ ಅವನು ತಪ್ಪಿಸಿಕೊಂಡು ಹೋದನು” ಎಂದು ಮೊರೆಯಿಟ್ಟನು. ಇಸ್ರಾಯೇಲರ ಅರಸನು ಇವನಿಗೆ “ನಿನಗೆ ಆ ತೀರ್ಪು ಸರಿಯಾಗಿದೆ, ತೀರ್ಮಾನಿಸಿದವನು ನೀನೇ ಅಲ್ಲವೋ?” ಎಂದು ನುಡಿದನು.
¶ ಆಗ ಯೆಹೋವನ ದೂತನು ತಿಷ್ಬೀಯನಾದ ಎಲೀಯನಿಗೆ, “ನೀನು ಹೋಗಿ ಸಮಾರ್ಯದ ಅರಸನ ಸೇವಕರನ್ನು ಎದುರುಗೊಂಡು ಅವರಿಗೆ, ‘ನೀವು ಎಕ್ರೋನಿನ ದೇವರಾದ ಬಾಳ್ಜೆಬೂಬನನ್ನು ವಿಚಾರಿಸುವುದಕ್ಕೆ ಹೋಗುವುದೇನು ಇಸ್ರಾಯೇಲರಲ್ಲಿ ದೇವರಿಲ್ಲವೋ?
ನನ್ನ ಪಾಪವನ್ನು ಸಂಪೂರ್ಣವಾಗಿ ತೊಳೆದುಬಿಡು; ನನ್ನ ದೋಷವನ್ನು ಪರಿಹರಿಸಿ, ನನ್ನನ್ನು ಶುದ್ಧಿಗೊಳಿಸು.
ನನ್ನ ಜನರು ಲಾಭವನ್ನು ದೋಚಿಕೊಂಡ ಅನ್ಯಾಯವನ್ನು ನಾನು ನೋಡಿ ಕೋಪಗೊಂಡು ಅವರನ್ನು ಹೊಡೆದೆನು, ನನ್ನ ಮುಖವನ್ನು ಮುಚ್ಚಿಕೊಂಡು ರೋಷಭರಿತನಾಗಿದ್ದೆನು; ಅವರೋ ತಿರುಗಿಕೊಂಡು ಮನಸ್ಸಿಗೆ ತೋರಿದ ಹಾಗೆಯೇ ನಡೆಯುತ್ತಾ ಬಂದಿದ್ದಾರೆ.
¶ ಇನ್ನೂ ಆತನು ಹೇಳಿದ್ದೇನಂದರೆ, ‹“ಒಬ್ಬ ಮನುಷ್ಯನಿಗೆ ಇಬ್ಬರು ಮಕ್ಕಳಿದ್ದರು.›