(ಬಾಷಾನ್ ದೇಶವು ರೆಫಾಯರ ದೇಶವೆನಿಸಿಕೊಳ್ಳುತ್ತದೆ. ಮನಸ್ಸೆಯ ವಂಶಸ್ಥನಾದ ಯಾಯೀರನು ಗೆಷೂರ್ಯರ ಮತ್ತು ಮಾಕಾತ್ಯರ ಮೇರೆಯವರೆಗೆ ಅರ್ಗೋಬ್ ಎಂಬ ಪ್ರದೇಶವನ್ನೆಲ್ಲಾ ಸ್ವಾಧೀನಮಾಡಿಕೊಂಡನು. ಅವನು ಬಾಷಾನಿಗೆ ಸೇರಿರುವ ಆ ಪ್ರಾಂತ್ಯಕ್ಕೆ ಯಾಯೀರನ ಗ್ರಾಮಗಳೆಂದು ತನ್ನ ಹೆಸರಿಟ್ಟನು. ಈ ಹೆಸರು ಇಂದಿನ ವರೆಗೂ ಉಂಟು.)
TSK
TSK · 2 ಸಮುವೇಲನು 23:34
Treasury of Scripture Knowledge references in ಕನ್ನಡ IRV.
2 ಸಮುವೇಲನು 10:6
TSK
¶ ತಾವು ದಾವೀದನ ಕೋಪಕ್ಕೂ, ಅಸಮಾಧಾನಕ್ಕೂ ಗುರಿಯಾಗಿದ್ದೇವೆ ಎಂದು ತಿಳಿದು ಅಮ್ಮೋನಿಯರು ಬೇತ್ ರೆಹೋಬ್ ಮತ್ತು ಚೋಬಾ ಎಂಬ ಪಟ್ಟಣಗಳಿಂದ ಅರಾಮ್ಯರ ಇಪ್ಪತ್ತು ಸಾವಿರ ಕಾಲಾಳುಗಳನ್ನೂ, ಮಾಕದ ರಾಜನಿಂದ ಸಾವಿರ ಮಂದಿ ಸೈನಿಕರನ್ನೂ ಮತ್ತು ಟೋಬ್ ದೇಶದಿಂದ ಹನ್ನೆರಡು ಸಾವಿರ ದಂಡಾಳುಗಳನ್ನೂ ಹಣಕೊಟ್ಟು ತರಿಸಿದನು
2 ಸಮುವೇಲನು 11:3
TSK
ಕೂಡಲೆ ದಾವೀದನು ಒಬ್ಬನನ್ನು ಕರೆದು, “ಆ ಸ್ತ್ರೀ ಯಾರು?” ಎಂದು ವಿಚಾರಿಸಲು ಅವನು, “ಆಕೆಯು ಎಲೀಯಾಮನ ಮಗಳೂ, ಹಿತ್ತಿಯನಾದ ಊರೀಯನ ಹೆಂಡತಿಯೂ ಆಗಿರುವ ಬತ್ಷೆಬೆ ಅಲ್ಲವೇ?” ಎಂದು ಉತ್ತರ ಕೊಟ್ಟನು.
2 ಸಮುವೇಲನು 15:31
TSK
ಅಬ್ಷಾಲೋಮನ ಸಂಗಡ ಒಳಸಂಚು ಮಾಡಿದವರಲ್ಲಿ ಅಹೀತೋಫೆಲನೂ ಇದ್ದಾನೆಂಬ ವರ್ತಮಾನವು ದಾವೀದನಿಗೆ ಮುಟ್ಟಿದಾಗ ಅವನು, “ಯೆಹೋವನೇ ಅಹೀತೋಫೆಲನ ಆಲೋಚನೆಗಳನ್ನು ನಿರರ್ಥಕಪಡಿಸು” ಎಂದು ಪ್ರಾರ್ಥಿಸಿದನು.
ಅಹೀತೋಫೆಲನು ಅರಸನ ಮಂತ್ರಿಯೂ, ಅರ್ಕೀಯನಾದ ಹೂಷೈಯು ಅವನ ಮಿತ್ರನಾಗಿದ್ದನು.